1000 ಕಿಮೀ ಕ್ರಮಿಸಿದ ಭಾರತ್ ಜೋಡೋ ಹೇಗಿತ್ತು..ಇಲ್ಲಿದೆ ಮಾಹಿತಿ

ಬಳ್ಳಾರಿ, ಅ. 14: ಸೆಪ್ಟೆಂಬರ್ 7, 2022 ರಂದು ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಶನಿವಾರ 1,000 ಕಿಲೋಮೀಟರ್‌ಗಳನ್ನು ಕ್ರಮಿಸುವ ಮೂಲಕ ಮೈಲಿಗಲ್ಲನ್ನು ತಲುಪಲಿದೆ.

3,500 ಕಿಲೋಮೀಟರ್ ನಡೆಯಲಿರುವ ಯಾತ್ರೆಯು ಕಾಂಗ್ರೆಸ್ ಪಕ್ಷ ಮತ್ತು ಇಡೀ ದೇಶಕ್ಕೆ ಐತಿಹಾಸಿಕ ಘಟನೆಯಾಗಿದೆ. ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯ ರಾಜಕಾರಣಿಗಳು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಪಾದಯಾತ್ರೆ ಇದಾಗಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆಯು ಗುಜರಾತ್ ರಾಜ್ಯದ ಸಬರಮತಿ ಆಶ್ರಮದಿಂದ ದಂಡಿ (ನವಸರಿ) ವರೆಗೆ ಕಾಲ್ನಡಿಗೆಯಲ್ಲಿ 24 ದಿನಗಳಲ್ಲಿ 389 ಕಿಲೋಮೀಟರ್ ಕ್ರಮಿಸಿದ್ದ ಯಾತ್ರೆ ಉದ್ದದ ಬಹುದೊಡ್ಡ ಮೆರವಣಿಗೆಯಾಗಿತ್ತು.

ಭಾರತ್ ಜೋಡೋ ಯಾತ್ರೆಯು ಬಳ್ಳಾರಿ ಜಿಲ್ಲೆಯ ಹೊರವಲಯವನ್ನು ತಲುಪಿದಾಗ ಈ ಮೈಲಿಗಲ್ಲನ್ನು (1000 ಕಿಲೋಮೀಟರ್) ತಲುಪಲಿದೆ. ಅಲ್ಲಿ ಲಕ್ಷಾಂತರ ಕಾಂಗ್ರೆಸ್ ಬೆಂಬಲಿಗರೊಂದಿಗೆ ಬೃಹತ್ ಸಮಾವೇಶ ನಡೆಯಲಿದೆ ಎಂದು ಪಕ್ಷವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯಾತ್ರೆಯಲ್ಲಿ ಹಲವರನ್ನು ಪ್ರೇರೇಪಿಸಿದೆ ರಾಹುಲ್ ಗಾಂಧಿ ದಿನಚರಿ

ಯಾತ್ರೆಯಲ್ಲಿ ಹಲವರನ್ನು ಪ್ರೇರೇಪಿಸಿದೆ ರಾಹುಲ್ ಗಾಂಧಿ ದಿನಚರಿ

ಶಾಸಕರು, ಎಂಎಲ್‌ಸಿ, ಬ್ಲಾಕ್ ಮತ್ತು ಜಿಲ್ಲಾ ಐಎನ್‌ಸಿ ಸಮಿತಿಗಳು, ನಾಯಕರು, ಕಾರ್ಯಕರ್ತರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಂತೆ ಅನೇಕರು ಈ ಯಾತ್ರೆಯ ಸಂದರ್ಬದಲ್ಲಿ ರಾಹುಲ್ ಗಾಂಧಿ ಪ್ರದರ್ಶಿಸಿದ ಶಕ್ತಿಯ ಮಟ್ಟವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಕಳೆದ 1000 ಕಿಲೋಮೀಟರ್‌ಗಳಲ್ಲಿ ರಾಹುಲ್ ಗಾಂಧಿ ಅನುಸರಿಸಿದ ದಿನಚರಿಯು ಅನೇಕ ಸಹ ಪಯಣಿಗರನ್ನು ಪ್ರೇರೇಪಿಸಿದೆ.

20 ನಿಮಿಷಗಳ ವ್ಯಾಯಾಮ, ಬೆಳಿಗ್ಗೆ ಲಘು ಉಪಹಾರ ಮತ್ತು ದಿನವಿಡೀ 25 ಕಿಲೋಮೀಟರ್ ನಡೆಯುವುದು ಮತ್ತು ಕೆಲವೊಮ್ಮೆ ಬಿಸಿಲು ಮತ್ತು ಮಳೆಯನ್ನು ಎದುರಿಸುವ ಅವರನ್ನು ನೋಡಿ ಅನೇಕರು ಬೆಕ್ಕಸ ಬೆರಗಾಗಿದ್ದಾರೆ. ರಾಹುಲ್ ಈಗಾಗಲೇ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ ಪ್ರಯಾಣಿಸಿದ್ದಾರೆ.

ಕರ್ನಾಟಕದಲ್ಲಿ ಪ್ರತಿ ದಿನ 1.50 ಲಕ್ಷ ಜನ ಭಾಗಿ!

ಕರ್ನಾಟಕದಲ್ಲಿ ಪ್ರತಿ ದಿನ 1.50 ಲಕ್ಷ ಜನ ಭಾಗಿ!

ಭಾರತ್ ಜೋಡೋ ಯಾತ್ರೆಯ ಆಯೋಜಕರಲ್ಲಿ ಅಚ್ಚರಿ ಮೂಡಿಸಿದ್ದು ಸಾಮಾನ್ಯ ವರ್ಗದ ಲಕ್ಷಾಂತರ ಜನರು ಕಾಲ್ನಡಿಗೆಯಲ್ಲಿ ಐತಿಹಾಸಿಕ ಪಯಣದಲ್ಲಿ ಪಾಲ್ಗೊಂಡಿರುವುದು. ಜನ ಸಾಮಾನ್ಯರು ಯಾವುದೇ ಒತ್ತಡವಿಲ್ಲದೆ ಬಮದು ಯಾತ್ರೆಯ ಭಾಗವಾಗಿದ್ದಾರೆ. ರಾಹುಲ್ ಗಾಂಧಿಯನ್ನು ನೋಡುವುದು, ಮಾತನಾಡಿಸುವುದು ಮಾಡಿದ್ದಾರೆ.

ತಮಿಳುನಾಡಿನಲ್ಲಿ, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರೆ, ಕೇರಳದಲ್ಲಿ ಇದು 1.25 ಲಕ್ಷ ಮತ್ತು ಕರ್ನಾಟಕದಲ್ಲಿ ಶುಕ್ರವಾರದವರೆಗೆ ದಿನಕ್ಕೆ 1.50 ಲಕ್ಷ ಜನರು ಸೇರಿದ್ದಾರೆ. ಯಾತ್ರೆ ಆಂಧ್ರಪ್ರದೇಶವನ್ನು ಪ್ರವೇಶಿಸಿದಾಗ ಸುಮಾರು 2 ಲಕ್ಷ ಜನರನ್ನು ತಲುಪುವ ನಿರೀಕ್ಷೆಯಿದೆ.

ಬಾಂಧವ್ಯಕ್ಕೆ ಹೊಸ ಮಾರ್ಗ ಕೊಟ್ಟ ರಾಹುಲ್ ಗಾಂಧಿ!

ಬಾಂಧವ್ಯಕ್ಕೆ ಹೊಸ ಮಾರ್ಗ ಕೊಟ್ಟ ರಾಹುಲ್ ಗಾಂಧಿ!

ತಮ್ಮ ಭಾರತ್ ಜೋಡೋ ಯಾತ್ರೆಯ ಭಾಗವಾಗಿ, ರಾಜ್ಯದ ಚಾಮರಾಜನಗರ ಜಿಲ್ಲೆಯ ಬದನವಾಳು ಗ್ರಾಮದ ಹಿಂದುಳಿದ ಪ್ರದೇಶಗಳಲ್ಲಿ ನಡೆದ ಪಾದಯಾತ್ರೆಯಲ್ಲಿ, ರಾಹುಲ್ ಗಾಂಧಿ ಅವರು ಹಳ್ಳಿಯ ದಲಿತ ಬೀದಿ ಅನ್ನು ಲಿಂಗಾಯತ ಸಮುದಾಯದೊಂದಿಗೆ ಸಂಪರ್ಕಿಸುವ ಮಾರ್ಗವನ್ನು ಉದ್ಘಾಟಿಸಿದ್ದಾರೆ.

'ಭಾರತ್ ಜೋಡೋ' ರಸ್ತೆ ಎಂದು ಹೆಸರಿಸಲಾದ ಈ ಮಾರ್ಗವನ್ನು ಕಾಂಗ್ರೆಸ್ 48 ಗಂಟೆಗಳ ಅವಧಿಯಲ್ಲಿ ನವೀಕರಿಸಿದೆ. ಇದು ಸಮುದಾಯಗಳ ನಡುವೆ ಸಾಮರಸ್ಯದ ಸಂದೇಶವನ್ನು ಕಳುಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ. ರಾಹುಲ್ ಗಾಂಧಿ ಅವರು ಗುಲಾಬಿ ಮತ್ತು ನೀಲಿ ಬಣ್ಣದ ಕೆಲವು ಅಂಚುಗಳನ್ನು ಸ್ವತಃ ಹಾಕಿದರು, ಹೀಗೆ ಸುಮಾರು ಮೂರು ದಶಕಗಳ ಹಿಂದೆ ಹಿಂಸಾತ್ಮಕ ಸಂದರ್ಭಗಳಲ್ಲಿ ಕಡಿತಗೊಂಡ ಬಾಂಧವ್ಯವನ್ನು ಮತ್ತೆ ಒಂದುಗೂಡಿಸಲಾಯಿತು.

ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೆ ಬೆರೆತ ರಾಹುಲ್ ಗಾಂಧಿ!

ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೆ ಬೆರೆತ ರಾಹುಲ್ ಗಾಂಧಿ!

ರಾಜ್ಯದಲ್ಲಿ ಹಲ;ವು ಜಾತಿಗಳು, ಬುಡಕಟ್ಟು ಸಮುದಾಯಗಳ ಜೊತೆಗೆ ರಾಹುಲ್ ಬೆರೆತಿದ್ದಾರೆ. ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಅವರು ಬಂಜಾರ, ದಕ್ಕಲಿಗ, ಸುಡುಗಾಡು ಸಿದ್ಧ, ಡೊಂಬಾರು, ದೊಂಬಿದಾಸ ಸಮುದಾಯದ ಹಲವಾರು ಬುಡಕಟ್ಟು ಸಮುದಾಯದ ಮಹಿಳೆಯರನ್ನು ಭೇಟಿ ಮಾಡಿ, ಅವರ ಜೀವನ ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಈ ಮಹಿಳೆಯರು ರಾಹುಲ್ ಗಾಂಧಿಯಂತಹ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು ಭೇಟಿ ನೀಡಿದ್ದು ಇದೇ ಮೊದಲು. ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಗೌರವಾರ್ಥವಾಗಿ ನೃತ್ಯ ಮಾಡಿ, ಆರತಿ ಮಾಡುವ ಮೂಲಕ ರಾಹುಲ್‌ರನ್ನು ಸ್ವಾಗತಿಸಿದ್ದಾರೆ.

ಸಂಸದರಾಗಿ ತಮ್ಮ ಜೀವನದ ವಿವಿಧ ಹಂತಗಳಲ್ಲಿ ನಿರುದ್ಯೋಗಿ ಯುವಕರ ಬಗ್ಗೆ ಆಳವಾದ ಕಾಳಜಿಯನ್ನು ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಅವರು ಕರ್ನಾಟಕದಾದ್ಯಂತ 2000 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರೊಂದಿಗೆ ಸಂವಾದ ನಡೆಸಲು ನಿರ್ಧರಿಸಿದ್ದಾರೆ.

ರೈತರು, ಕಾರ್ಮಿಕರು, ಶಿಕ್ಷಕರು, ವಿದ್ಯಾರ್ಥಿಗಳು, ಮೀನುಗಾರರ ಜೊತೆಗೆ ಸಂವಾದ

ರೈತರು, ಕಾರ್ಮಿಕರು, ಶಿಕ್ಷಕರು, ವಿದ್ಯಾರ್ಥಿಗಳು, ಮೀನುಗಾರರ ಜೊತೆಗೆ ಸಂವಾದ

ವಿವಿಧ ಹಂತಗಳಲ್ಲಿ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದರೂ, ಬೆಳಗ್ಗೆ 7 ರಿಂದ 11 ರವರೆಗೆ ಮತ್ತು ಸಂಜೆ 4 ರಿಂದ 7 ರವರೆಗೆ ಎರಡು ಅವಧಿಗಳಲ್ಲಿ ಯಾತ್ರೆಯನ್ನು ನಿಗದಿಪಡಿಸಲಾಯಿತ. ಮಧ್ಯಂತರ ಅವಧಿಯಲ್ಲಿ, ರಾಹುಲ್ ಅವರು ಸಾಮಾನ್ಯ ಜನರನ್ನು ಭೇಟಿಯಾಗುವಂತೆ ಅವಕಾಶ ಮಾಡಿಕೊಂಡಿದ್ದರು.

ರೈತರು, ಮೀನುಗಾರರು (ಒಳನಾಡು ಮತ್ತು ಸಾಗರ ಎರಡೂ) ನಿರ್ಮಾಣ ಕಾರ್ಮಿಕರು, ಶಿಕ್ಷಕರು, ಗ್ರಾಮ ಮಟ್ಟದ ನಾಯಕರು, ಕೆಲವು ಪ್ರಮುಖ ವ್ಯಕ್ತಿಗಳು, ಬರಹಗಾರರು, ವಿದ್ವಾಂಸರು ಮತ್ತು ಬುದ್ಧಿಜೀವಿಗಳು ಸೇರಿದಂತೆ ಭಾರತ್ ಜೋಡೋ ಯಾತ್ರೆಯ ವಿವಿಧ ಹಂತಗಳಲ್ಲಿ ಹಲವರನ್ನು ಭೇಟಿಯಾಗಿದ್ದಾರೆ. ಅವರ ದಿನವು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿ ರಾತ್ರಿ 11 ಗಂಟೆಗೆ ಕೊನೆಗೊಳ್ಳುತ್ತಿತ್ತು ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಹಲವು ವಿಧಗಳಲ್ಲಿ, ಭಾರತ್ ಜೋಡೋ ಯಾತ್ರೆಯು ಒಟ್ಟು 3,750 ಕಿಲೋಮೀಟರ್‌ಗಳಲ್ಲಿ ಮೊದಲ 1000 ಕಿಲೋಮೀಟರ್‌ಗಳಲ್ಲಿ 'ಭಾರತ್ ಜೋಡೋ' ತನ್ನ ಉದ್ದೇಶವನ್ನು ಸಾಧಿಸಿದೆ. ದೇಶದ ಜಾತಿ, ಧರ್ಮ, ಭಾಷೆ, ಪ್ರದೇಶಗಳು ಮತ್ತು ಸಂಸ್ಕೃತಿಗಳ ಅಡೆತಡೆಗಳನ್ನು ಮೀರಿ ದೇಶವನ್ನು ಒಂದಾಗಿ ನೋಡಬಹುದು ಎಂದು ಪಕ್ಷ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+