Bihar: ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಪ್ಪಿತಸ್ಥರನ್ನು ತಲೆಕೆಳಗಾಗಿ ಗಲ್ಲಿಗೇರಿಸುತ್ತೇವೆ: ಶಾ

ನವದೆಹಲಿ, ಏಪ್ರೀಲ್ 02: ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದಲ್ಲಿ ಕೋಮುಗಲಭೆ, ಹಿಂಸಾಚಾರ ಕುರಿತು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಭಾನುವಾರ ವಾಗ್ದಾಳಿ ನಡೆಸಿದರು. ಜೊತೆಗೆ ಬಿಜೆಪಿ ಸರ್ಕಾರ ಬಂದರೆ ಕೈಗೊಳ್ಳಬಹುದಾದ ಕಠಿಣ ಕ್ರಮ ಕರಿತು ಈಗಲೇ ಸ್ಪಷ್ಟಪಡಿಸಿದರು.

ಬಿಹಾರ ರಾಜ್ಯದಲ್ಲಿನ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರವು ಸಸಾರಾಮ್ ಮತ್ತು ಬಿಹಾರ ಷರೀಫ್ ಪಟ್ಟಣಗಳಲ್ಲಿ ಉಂಟಾದ ಕೋಮುಗಲಭೆಗಳನ್ನು 'ನಿಯಂತ್ರಿಸುವಲ್ಲಿ ವಿಫಲ'ವಾಗಿದೆ. ಈ ಬಿಹಾರದಲ್ಲಿ ರಾಜ್ಯದಲ್ಲಿ ಮುಂದಿನ 2025ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕೋಮುಗಲಭೆಗಳಿಗೆ ಕಾರಣರಾದ ತಪ್ಪಿತಸ್ಥರನ್ನು ತಲೆಕೆಳಗಾಗಿ ಗಲ್ಲಿಗೇರಿಸಲಾಗುವುದು ಎಂದು ಅವರು ಹೇಳಿದರು.

Communal Riots In Bihar: If BJP Comes To Power Culprits Will Be Hanged Says Amit Shah

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು?
ಇಲ್ಲಿನ ನವಾಡಾ ಜಿಲ್ಲೆಯ ಹಿಸುವಾದಲ್ಲಿ ಆಯೋಜಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, 2024ರನೇ ಸಾಲಿನಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 40 ಲೋಕಸಭಾ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಬಿಹಾರದ ಜನತೆ ನಿರ್ಧರಿಸಿದ್ದಾರೆ. ಇದು ಈಗಾಗಲೇ ಖಾತರಿಯಾಗಿದೆ ಎಂದು ಅವರು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಳೇದ ಹತ್ತು ವರ್ಷದಿಂದ ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ಭಾರಿ ಅಧಿಕಾರ ನಡೆಸಿದ್ದಾರೆ. ಮೂರನೇ ಬಾರಿಯು ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕೆಂದು ದೇಶದ ಜನರೆಲ್ಲ ಬಯಸಿದ್ದಾರೆ. ಜನರ ಆಶಯದಂತೆ ನಡೆದಲ್ಲಿ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುವ ಕನಸು ಹೊಂದಿರುವ ತೇಜಸ್ವಿ ಯಾದವ್‌ಗೆ ಕನಸಾಗಿಯೇ ಉಳಿದು ಬಿಡಲಿದೆ. ತಮ್ಮ ಭರವಸೆಯಿಂದ ತಾವೇ ಹಿಂದೆ ಸರಿಯಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ್ದಾರೆ. ಆ ವೇಳೆ ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರು ಭಯೋತ್ಪಾದನೆಗೆ ಪ್ರಚೋದಿಸುವಂತೆ, ಭಯೋತ್ಪಾದನೆಗೆ ಪೂರಕವಾದಂತಹ, ಉಗ್ರರಿಗೆ ಸಹಾಯ ಮಾಡುವ ರೀತಿಯಲ್ಲಿ ತುಷ್ಟೀಕರಣದ ರಾಜಕಾರಣ ಮಾಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.

Communal Riots In Bihar: If BJP Comes To Power Culprits Will Be Hanged Says Amit Shah

ಕೋಮುಗಲಭೆ ತಡೆಯುವಲ್ಲಿ ವಿಫಲರಾದ ಮತ್ತು ರಾಜ್ಯದಾದ್ಯಂತ ಜಾತಿವಾದದ ವಿಷವನ್ನು ಹರಡುತ್ತಿರುವವ ನಿತೀಶ್ ಕುಮಾರ್ ಮತ್ತು 'ಜಂಗಲ್ ರಾಜ್' ಪ್ರವರ್ತಕ ಲಾಲು ಪ್ರಸಾದ್ ಅವರೊಂದಿಗೆ ಬಿಜೆಪಿ ಎಂದಿಗೂ ಕೈಜೋಡಿಸವುದಿಲ್ಲ. ಹೀಗೆಂದು ಅಮಿತ್ ಶಾ ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಬಹುಮತ ಬರದೇ ಇದ್ದ ಪಕ್ಷದಲ್ಲಿ ಈ ಪಕ್ಷಗಳಿಗೆ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಲ್ಲವೇ ಜಂಟಿಯಾಗಿ ಸರ್ಕಾರ ರಚಿಸುವ ವಿಚಾರಕ್ಕಾಗಿ ಬಿಜೆಪಿಯ ಬಾಗಿಲು ಸದಾ ಮುಚ್ಚಿರುತ್ತದೆ ಎನ್ನುವ ಮೂಲಕ ಮೈತ್ರಿ ಅಸಾಧ್ಯ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಟಿಎಂಸಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದ್ದರು. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕುವ ಮೂಲಕ ಸ್ಥಾಪನಾ ಕಾರ್ಯ ಆರಂಭಿಸಿದರು. ಹೀಗಾಗಿಯೇ ದೇಶದ ಜನರ ಪ್ರಧಾನಿ ಮೋದಿಯನ್ನು ಇನ್ನೋಮ್ಮೆ ಅಧಿಕಾರಕ್ಕೆ ತರಲು ಬಯಸಿದ್ದಾರೆ ಎಂದು ಅವರು ಹೇಳಿದರು.

ಬಿಹಾರ ರಾಜ್ಯದಲ್ಲಿ ಆಗಾಗ್ಗೆ ಜರುಗುತ್ತಿರುವ ಕೋಮುಗಲಭೆ ಕುರಿತು ಅಮಿತ್ ಶಾ ವಿಷಾಧ ವ್ಯಕ್ತಪಡಿಸಿದರು. ಆದಷ್ಟು ಶೀಘ್ರದಲ್ಲಿ ವಾತಾವರಣ ಸಹಜ ಸ್ಥಿತಿಗೆ ಮರಳಲಿದ್ದು, ಆ ಬಗ್ಗೆ ತಾವು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಭಾನುವಾರ ಬೆಳಗ್ಗೆ ರಾಜ್ಯಪಾಲರೊಂದಿಗೆ ಮಾತನಾಡಿದಾಗ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಬಿಹಾರ ರಾಜ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+