ಒಂದೇ ಕಂಪನೀಲಿ ಬಹಳ ವರ್ಷಗಳಿದ್ದರೆ ಕಂಫರ್ಟ್ ಜೋನ್ ಕ್ರಿಯೇಟ್ ಆಗುತ್ತೆ, ಇದು ನಿಮಗೇ ಕುತ್ತು
Comfort Zone: ಮೊದಲೆಲ್ಲಾ ಒಂದೇ ಕಂಪನಿಯಲ್ಲಿ ತುಂಬಾ ವರ್ಷಗಳವರೆಗೆ ಕೆಲಸ ಮಾಡುವುದೆಂದರೆ ಅದು ಕಂಪನಿಯ ಪ್ರತಿ ಅವರ ಪ್ರಾಮಾಣಿಕತೆ ಎಂದರ್ಥ. ಆದ್ರೆ ಈಗ ಆ ಕಲ್ಪನೆ ಬದಲಾಗಿದೆ. ಒಂದೇ ಕಂಪನಿಯಲ್ಲಿ ತುಂಬಾ ವರ್ಷ ಇದ್ದೀರಿ ಎಂದರೆ ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಏಳುತ್ತದೆ. ಎದುರಿಗಿರುವವರ ಪ್ರಕಾರ ನಿಮಗೆ ಬೇರೆಲ್ಲೂ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ನೀವು ಕಂಪನಿ ಬದಲಿಸ್ತಾ ಇಲ್ಲ. ಕಂಪನಿ ಎಷ್ಟು ಬದಲಿಸುತ್ತಿರೋ ಅಷ್ಟು ನಿಮ್ಮ ಸಂಬಳವೂ ಹೆಚ್ಚಾಗುವುದು, ಡೆಸಿಗ್ನೇಶನ್ ಕೂಡಾ ಬದಲಾಗುವುದು.
Comfort Zone ಮುಳ್ಳಾಗಬಹುದು :
ಸೈಬರ್ ಸೆಕ್ಯುರಿಟಿ ವೃತ್ತಿಯಲ್ಲಿ ಇರುವ 35 ವರ್ಷದ ವ್ಯಕ್ತಿಯೊಬ್ಬರು ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಒಳ್ಳೆಯ ಸಂಬಳ ಇದೆ. ಮ್ಯಾನೇಜರ್ ಸಪೋರ್ಟ್ ಕೂಡಾ ಇದೆ. ಆದರೂ ಅದೇನೋ ಅಸಮಾಧಾನ. ತಾನು ಈ ಕೆಲಸದಲ್ಲಿ ಆರಾಮಾಗಿದ್ದೇನೆ, ಬೇರೆ ಕೆಲಸ ಯಾಕೆ ಎನ್ನುವ ಆಲೋಚನೆಯೇ ಮುಂದೆ ತನಗೆ ಮುಳ್ಳಾಗಬಹುದು ಎನ್ನುವ ಆತಂಕ ಅವರದ್ದು.

ಈ ಬಗ್ಗೆ ಅವರು ರೆಡ್ಡಿಟ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಸೈಬರ್ ಸೆಕ್ಯೂರಿಟಿಯಲ್ಲಿ ಸುಮಾರು 10 ವರ್ಷಗಳ ಅನುಭವ ಅವರಿಗಿದೆ. ಆ ಫೀಲ್ಡ್‌ನಲ್ಲಿ ಈಗಲೂ ಇವರಿಗೆ ಇಂಟರೆಸ್ಟ್ ಇದೆ. ಆದರೆ, ಆಡಳಿತಾತ್ಮಕವಾಗಿ ಹೆಚ್ಚಿನ ಜವಾಬ್ದಾರಿ ಇರುವ ರೋಲ್‌ಗೆ ಶಿಫ್ಟ್ ಆದ ಬಳಿಕ ಟೆಕ್ನಿಕಲ್ ಸ್ಕಿಲ್ ಕಳೆದುಕೊಳ್ಳುತ್ತಿದ್ದಾರೆ.
ಯಾವ ಫೀಲ್ಡ್‌ನಲ್ಲಿ ಎಕ್ಸ್‌ಪರ್ಟ್ ಎನ್ನುವುದೇ ತಿಳಿಯುತ್ತಿಲ್ಲ :
ಹಾಗೆ ನೋಡಿದರೆ ಇವರು ಎಲ್ಲಾ ಕ್ಷೇತ್ರಗಳಲ್ಲೂ ಕೈ ಹಾಕಿದ್ದಾರೆ. ಸೈಬರ್ ಸೆಕ್ಯೂರಿಟಿಯ ಬೇರೆ ಬೇರೆ ಫೀಲ್ಡ್ ಮತ್ತು ಡೊಮೇನ್‌ಗಳಲ್ಲಿ ಇವರಿಗೆ ಅನುಭವ ಇದೆ. ಆದ್ರೆ ಯಾವ ಫೀಲ್ಡ್‌ನಲ್ಲಿ ಎಕ್ಸ್‌ಪರ್ಟ್ ಎಂದು ಕೇಳಿದರೆ ಇವರ ಬಳಿ ಉತ್ತರ ಇಲ್ಲ. ಈಗ ಅವರು ಕೆಲಸ ಮಾಡುತ್ತಿರುವ ಕಂಪನಿಗೆ ಸೇರುವ ಮೊದಲು ಇಂಡಿವ್ಯೂಜ್ಯುವಲ್ ಕಾಂಟ್ರಿಬ್ಯೂಟರ್ ಆಗಿ ಕೆಲಸ ಮಾಡ್ತಾ ಇದ್ದರು. ಇವರಿಗೆ ಈ ಕಂಪನಿಯಲ್ಲಿ ಸಿಕ್ಕ ಮೊದಲ ಅಸೈನ್ಮೆಂಟ್ ಅಂದ್ರೆ ಕ್ಲೈಂಟ್‌ನ ಸೆಕ್ಯೂರಿಟಿ ಆಪರೇಷನನ್ನು ಮ್ಯಾನೇಜ್ ಮಾಡುವುದು.
ಕೈ ತುಂಬಾ ಸಂಬಳ ಬಂದರೂ ಪ್ರಯೋಜನವಿಲ್ಲ :
ಅವರ ಟೀಂ ಬಗ್ಗೆ ಕ್ಲೈಂಟ್ ದೂರು ನೀಡಿದ ನಂತರ ಅವರನ್ನು ಬೇರೆ ಪ್ರಾಜೆಕ್ಟ್‌ಗೆ ಶಿಫ್ಟ್ ಮಾಡಲಾಗುತ್ತದೆ. ಇವರ ಹೊಸ ರೋಲ್ ತನದೇ ಆದ ಸಮಸ್ಯೆಯ ಜೊತೆಗೇ ಬಂದಿತ್ತು. ಇಲ್ಲಿ ಟೆಕ್ನಿಕಲ್ ಕೆಲಸ ಇದ್ದದ್ದೇ ಕಡಿಮೆ. ಕ್ಲೈಂಟ್‌ಗಳ ಜೊತೆ ಫೋನಿನಲ್ಲಿ ಮಾತನಾಡುವುದು, ಮೀಟಿಂಗ್, ಇಂಥಹ ಕೆಲಸಗಳಲ್ಲಿಯೇ ಟೈಂ ಹೋಗುತ್ತಿತ್ತು. ಆದ್ರೆ ಈ ಕೆಲಸದಲ್ಲಿ ಅವರಿಗೆ ಒಳ್ಳೆ ಸಂಬಳ ಸಿಗ್ತಾ ಇತ್ತು.ಇವರೇ ಹೇಳುವಂತೆ ಇವರಿಗೆ ಈ ರೋಲ್‌ನಲ್ಲಿ ಹೇಳಿಕೊಳ್ಳುವಂಥಹ ಕೆಲಸ ಏನೂ ಇರಲಿಲ್ಲ. ಆದರೂ ಕೈ ತುಂಬಾ ಸಂಬಳ ಬರ್ತಾ ಇತ್ತು. ಇವರಿಗಂತ ಹೆಚ್ಚು ಕೆಲಸ ಮಾಡ್ತಾ ಇದ್ದವರು ಕಡಿಮೆ ಸಂಬಳಕ್ಕೆ ದುಡೀತಾ ಇದ್ರು. ತಮ್ಮ ಮ್ಯಾನೇಜರ್ ಅಡಿಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಲ್ಲಿ ಇವರೂ ಒಬ್ಬರಾಗಿದ್ದರು.
ಅಸಲಿಗೆ ಇವರಿಗೆ ಟೆನ್ಶನ್ ಶುರುವಾಗಿದ್ದೇ ಇವರು ಬೇರೆ ಕೆಲಸಕ್ಕೆ ಅರ್ಜಿ ಹಾಕಿದಾಗ, ಇಂಟರ್ವ್ಯೂಗೆ ಹೋಗಲು ಶುರು ಮಾಡಿದಾಗ. ಆರಂಭದಲ್ಲಿ ಅವರು ಹೋದ ಇಂಟರ್ವ್ಯೂಗಳಲ್ಲಿ ಬಹುತೇಕ ಎಲ್ಲದರಲ್ಲೂ ಪಾಸಾಗುತ್ತಿದ್ದರು. ಆದ್ರೆ ಈಗ ಇಂಟರ್ವ್ಯೂ ಅಟೆಂಡ್ ಆಗುವುದೇ ಅವರಿಗೆ ಕಷ್ಟವಾಗುತ್ತಿದೆ.
ಮನಸ್ಸಿನ ಗೊಂದಲಕ್ಕೆ ಉತ್ತರ :
ತಮ್ಮ ಕಂಫರ್ಟ್ ಜೋನ್‌ನಲ್ಲೇ ಹೆಚ್ಚು ಕಾಲ ಕಳೆದ ಕಾರಣ, ಹಿಂದೆ ಇವರು ಮಾಡ್ತಾ ಇದ್ದ ಟೆಕ್ನಿಕಲ್ ಕೆಲಸದ ಮೇಲಿನ ಹಿಡಿತ ಕೂಡಾ ತಪ್ಪಿ ಹೋಗಿದೆ. ಹಾಗಾಗಿ ಈಗ ತನ್ನ ಕೆಲಸ ಮುಂದಿನ ಜೀವನದ ಬಗ್ಗೆ ಆತಂಕ ಹೆಚ್ಚುತ್ತಾ ಇದೆ. ಅವರ ಕಂಪನಿ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ. ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಬಗ್ಗೆ ಕೂಡಾ ಚರ್ಚೆ ನಡೀತಾ ಇದೆ. ಒಂದರ ಮೇಲೆ ಒಂದರಂತೆ ಪ್ರಾಜೆಕ್ಟ್‌ಗಳು ಬರ್ತಾ ಇದೆ. ಕೆಲಸಕ್ಕೆ ಏನೂ ಸಮಸ್ಯೆ ಇಲ್ಲ ಎನ್ನುವ ಭರವಸೆಯನ್ನು ಮ್ಯಾನೇಜರ್ ಕೊಟ್ಟಿದ್ದಾರೆ.
ಆದ್ರೆ ಯಾಕೋ ಅದನ್ನು ಒಪ್ಪಲು ಇವರಿಗೆ ಸಾಧ್ಯವಾಗ್ತಾ ಇಲ್ಲ. ತಾನು ಇನ್ನೂ ಟೆಕ್ನಿಕಲ್ ಫೀಲ್ಡ್‌ನಿಂದ ದೂರವೇ ಇದ್ದರೆ ಮುಂದೆ ತನ್ನ ಗತಿ ಏನು ಎನ್ನುವುದು ಇವರ ಯೋಚನೆ. ಹಾಗಾಗಿ ಈಗ ಮತ್ತೆ ತಾನು ಟೆಕ್ನಿಕಲ್ ಸ್ಕಿಲ್ ಹೆಚ್ಚಿಸಿಕೊಳ್ಳುವತ್ತ ಪೋಕಸ್ ಮಾಡಬೇಕು ಎಂದುಕೊಂಡಿದ್ದಾರೆ. ತನಗೆ ಇಲ್ಲಿವರೆಗೆ ಬೆಂಬಲವಾಗಿ ನಿಂತಿದ್ದ ಮ್ಯಾನೇಜರ್ ಅನ್ನು ಬಿಡುವುದು ಕೂಡಾ ಅವರಿಗೆ ಇಷ್ಟವಾಗ್ತಾ ಇಲ್ಲ. ಇದೀಗ ರೆಡ್ಡಿಟ್‌ನಲ್ಲಿ ಅವರು ತಮ್ಮ ಮನಸ್ಸಿನ ಗೊಂದಲಕ್ಕೆ ಉತ್ತರ ಕೇಳಿದ್ಧಾರೆ.
ಬಂದಿರುವ ಕಾಮೆಂಟ್ ಏನು ?:
ಮೊದಲಿನಿಂದಲೂ ಸೈಬರ್ ಸೆಕ್ಯೂರಿಟಿಯಲ್ಲಿ (security) ಕೆಲಸ ಮಾಡುವ ಆಸೆ ತನಗಿತ್ತು. ಆದರೆ ಏಪ್ರಿಲ್ 2026 ರಿಂದ ತನ್ನ ಕೆಲಸ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ತನ್ನ ಕೆಲವು ಟೆಕ್ನಿಕಲ್ ಸ್ಕಿಲ್ ಹೆಚ್ಚಿಸಿಕೊಳ್ಳಲು ಪೈಥಾನ್ ಮತ್ತು AI ಕಲಿತಾ ಇರುವುದಾಗಿ ಹೇಳಿದ್ದಾರೆ.
13 ವರ್ಷಗಳವರೆಗೆ ಒಂದೇ ಕಂಪನಿಯಲ್ಲಿ (company) ಕೆಲಸ ಮಾಡಿದ ನಂತರ ತಾನೂ ಇದೇ ಸ್ಥಿತಿ ಅನುಭವಿಸಿದ್ದಾಗಿ ಮತ್ತೊಬ್ಬರು ಹೇಳಿದ್ಧಾರೆ. ತಾನು ಕೂಡಾ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಉತ್ತಮ ಅವಕಾಶಗಳನ್ನು ಹುಡುಕುತ್ತಾ ಸ್ಕಿಲ್ ಡೆವಲಪ್ ಮಾಡುವರ ಕಡೆ ಗಮನಹರಿಸುತ್ತಿರುವುದಾಗಿ ಹೇಳಿದ್ಧಾರೆ.


Click it and Unblock the Notifications
