• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

#ಮೀಟೂ: ಮಹಿಳೆಯರ ಮೇಲೂ ಲೈಂಗಿಕ ಕಿರುಕುಳದ ಆರೋಪ

|

ನವದೆಹಲಿ, ಅಕ್ಟೋಬರ್ 10: ವಿಶ್ವದಾದ್ಯಂತ ಹಲವು ಖ್ಯಾತನಾಮರ ಕುಖ್ಯಾತಿಗೆ ಕಾರಣವಾಗಿರುವ #ಮೀಟೂ ಅಭಿಯಾನ ಭಾರತದಲ್ಲೂ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಆದರೆ ಈ ವರೆಗೆ ಈ ಅಭಿಯಾನದಡಿ ಪುರುಷರ ಮೇಲಷ್ಟೆ ಲೈಂಗಿಕ ದೌರ್ಜನ್ಯ ಅಥವಾ ದುರ್ನಡತೆ ಬಗ್ಗೆ ಆರೋಪ ಕೇಳಿಬಂದಿತ್ತು. ಇದೇ ಮೊದಲ ಬಾರಿಗೆ ಯುವತಿಯೊಬ್ಬರು ಮತ್ತೊಬ್ಬ ಯುವತಿಯ ಮೇಲೆ ಆರೋಪ ಮಾಡಿದ್ದಾರೆ.

ಸ್ಟಾಂಡಪ್‌ ಕಮಿಡಿಯನ್ ಕನೀಜ್ ಸುರ್ಖಾ ಅವರು ಮತ್ತೊಬ್ಬ ಸ್ಟ್ಯಾಂಡಪ್ ಕಮಿಡಿಯನ್ ಅದಿತಿ ಮಿತ್ತಲ್‌ ಮೇಲೆ ಈ ಆರೋಪ ಮಾಡಿದ್ದು, ಅದಿತಿ ಮಿತ್ತಲ್‌ ನನ್ನನ್ನು ಬಲವಂತವಾಗಿ ಚುಂಬಿಸಿದ್ದರು ಎಂದು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಚೇರಿ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ ಯಾವ ಕಾನೂನು, ಶಿಕ್ಷೆಗಳಿವೆ ಗೊತ್ತೇ?

ಎರಡು ವರ್ಷಗಳ ಹಿಂದೆ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿ ಕನೀಜ್‌ ಸುರ್ಖಾ ಅವರು ಸ್ಟಾಂಡಪ್‌ ಕಾಮಿಡಿ ಶೋ ಒಂದರ ನಿರೂಪಣೆ ಮಾಡುತ್ತಿದ್ದಾಗ ವೇದಿಕೆಗೆ ಬಂದ ಅದಿತಿ ಮಿತ್ತಲ್‌ ಅವರು, ಬಾಯಿಗೆ ಬಾಯಿ ಹಾಕಿ ಬಲವಂತವಾಗಿ ನನ್ನನ್ನು ಚುಂಬಿಸಿದರಲ್ಲದೆ , ನಾಲಗೆಯನ್ನು ನನ್ನ ಬಾಯಿಯ ಒಳಗೆ ಇಟ್ಟರು' ಎಂದು ಅಂದು ನಡೆದ ಘಟನೆಯನ್ನು ಅವರು ಬರೆದುಕೊಂಡಿದ್ದಾರೆ.

ಅವರ ಆ ವರ್ತನೆಯಿಂದ ನನಗೆ ತೀವ್ರ ಆಘಾತ, ಮುಜುಗರ, ಅವಮಾನ ಆಗಿತ್ತು. ಒಂದು ವರ್ಷದ ನಂತರ ನಾನು ಈ ಬಗ್ಗೆ ಅದಿತಿ ಬಳಿ ಕೇಳಿದಾಗ ಮೊದಲು ಕ್ಷಮಾಪಣೆ ಕೇಳಿದರಾದರೂ, ಆ ನಂತರ ನನ್ನ ಮೇಲೆ ತಿರುಗಿ ಬಿದ್ದರು ಇದು ನನ್ನನ್ನು ಇನ್ನಷ್ಟು ಆಘಾತಕ್ಕೆ ಒಳಗೆ ಮಾಡಿತು ಎಂದು ಸುರ್ಖಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ

ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ #ಮೀಟೂ ಅಭಿಯಾನಕ್ಕೆ ಅದಿತಿ ಮಿತ್ತಲ್‌ ಬಹಳ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ಅವರು ಬದಲಾಗಿರಬಹುದು ಎಂದು ಕೊಂಡು ಎರಡು ದಿನಗಳ ಹಿಂದೆ ಸಹ ಅವರೊಂದಿಗೆ ಗೆಳೆಯರೊಬ್ಬರ ಸಹಾಯದಿಂದ ಮಾತನಾಡಿದೆ. ಸಾರ್ವಜನಿಕವಾಗಿ ಕ್ಷಮೆ ಕೋರಲು ಕೇಳಿದೆನು ಆದರೆ ಅವರು ನಿರಾಕರಿಸಿದರು ಹಾಗಾಗಿ ಇಲ್ಲಿ ಹೀಗೆ ಬರೆಯುತ್ತಿದ್ದೇನೆ ಎಂದು ಅವರು ಸ್ಪಷ್ಟಣೆ ಕೊಟ್ಟಿದ್ದಾರೆ.

#metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ

ಕನೀಜ್‌ ಸುರ್ಖಾ ಅವರು ಕಾಮಿಡಿಯನ್ ಆಗಿದ್ದು ಎಐಬಿಯ ಹಲವು ಹಾಸ್ಯದ ವಿಡಿಯೋಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕನ್ನಡದ ದಾನಿಶ್ ಸೇಠ್‌ ಜೊತೆ ಸೇರಿ ಇಂಪ್ರೋವ್‌ ಕಾಮಿಡಿ ಶೋ ಮಾಡಿದ್ದಾರೆ. ಇನ್ನು ಅದಿತಿ ಮಿತ್ತಲ್‌ ಅವರನ್ನು ಭಾರತದ ಮೊದಲ ಮಹಿಳಾ ಸ್ಟಾಂಡಪ್‌ ಕಮಿಡಿಯನ್‌ ಎಂದು ಗುರುತಿಸಲಾಗುತ್ತದೆ.

English summary
Comedian Kaneez Surka has accused comedian Aditi Mittal of sexually harassing her when she hosted a comedy show at Andheri Base two years ago. she wrote the detail of incident on her twitter account and demand for public apology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X