ದೇಶಕ್ಕಾಗಿ ಹುತಾತ್ಮನಾದ ಕರ್ನಲ್ ಸಂತೋಷ್ ಮಹಾದೀಕ್
ನವದೆಹಲಿ, ನವೆಂಬರ್, 18 : ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಲಷ್ಕರೆ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಸಂತೋಷ್ ಮಹಾದೀಕ್ ಮಂಗಳವಾರ ಹುತಾತ್ಮರಾಗಿದ್ದಾರೆ. ನಾಡಿನ ಹಲವಾರು ಗಣ್ಯರು ಇವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಜಮ್ಮು ಕಾಶ್ಮೀರದ ಕುಪ್ವಾರ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಆಗಮಿಸಲು ಪ್ರಯತ್ನಪಟ್ಟ ಲಷ್ಕರೆ ಉಗ್ರರನ್ನು ತಡೆಯಲು ಯತ್ನಿಸುವ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಂತೋಷ್ ತೀವ್ರ ಗಾಯಗೊಂಡಿದ್ದರು. ತಕ್ಷಣ ಇವರನ್ನು ದುರ್ಗ್ ಮುಲ್ಲಾ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದ ವೀರಯೋಧ ಸಂತೋಷ ದೇಶಕ್ಕಾಗಿ ತಮ್ಮ ಪ್ರಾಣ ತೆತ್ತಿದ್ದಾರೆ.[ಕಲಬುರ್ಗಿಯ ಯೋಧನೊಂದಿಗೇ ಬೂದಿಯಾದ ಸಾವಿನ ರಹಸ್ಯ]

ಸುಮಾರು ರಾತ್ರಿ 2 ಗಂಟೆ ವೇಳೆಗೆ ಸಂತೋಷ್ ಮಹಾದೀಕ್ ತಮ್ಮ ಗುಂಪಿನ ಸೈನಿಕರೊಂದಿಗೆ ಕುಪ್ವಾರ ಜಿಲ್ಲೆಯ ಹಜಿ ನಾಕಾ ಎಂಬ ದಟ್ಟಾರಣ್ಯದ ಗಡಿ ಪ್ರದೇಶದಲ್ಲಿ ಅಡಗಿರುವ ಉಗ್ರರ ದಂಡನ್ನು ಹತ್ತಿಕ್ಕಲು ಮುಂದಾದಾಗ ಈ ಅವಘಡಕ್ಕೆ ಒಳಗಾಗಿದ್ದು, ದೇಶದ ಉಳಿವಿಗಾಗಿ ಹೋರಾಡುತ್ತಲೇ ಮರಣ ಹೊಂದಿದ್ದಾರೆ.[ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?]
ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಉಗ್ರರ ವಿರುದ್ಧ ನಡೆಸಿದ ಹಲವಾರು ಕಾರ್ಯಾಚರಣೆಯಲ್ಲಿ ಸಂತೋಷ್ ಮಹಾದೀಕ್ (38) ಸಕ್ರೀಯವಾಗಿ ಭಾಗವಹಿಸಿದ್ದರು. ಇವರು 2003ರಲ್ಲಿ ನಡೆದ ರೈನೋ ಕಾರ್ಯಾಚರಣೆಯಲ್ಲಿ ಮಾಡಿದ ಸಾಧನೆಗಾಗಿ ಸೇನಾ ಪದಕ ಪಡೆದಿದ್ದರು. ರಾಷ್ಟ್ರೀಯ ಶಸ್ತ್ರಾಸ್ತ್ರ ಸೇನೆಯ ಕಮ್ಯಾಂಡ್ ಆಗಿ ಸೇವೆ ಸಲ್ಲಿಸಿದ ಇವರು ಈ ಬಾರಿ 41 ರಾಷ್ಟ್ರೀಯ ರೈಫಲ್ಸ್ ಪಡೆಯ ಕಮಾಂಡಿಂಗ್ ಆಫೀಸರ್ ಹೊಣೆ ಹೊತ್ತಿದ್ದರು.
ಈ ವರ್ಷ ಸಂತೋಷ ಒಳಗೊಂಡಂತೆ ಇಬ್ಬರು ಸೈನಿಕರು ಜಮ್ಮು ಕಾಶ್ಮೀರ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಜನವರಿಯಲ್ಲಿ ಮುನೀಂದ್ರ ರೈ ಎಂಬಾತ ಜಮ್ಮು ಮತ್ತು ಕಾಶ್ಮೀರ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
PM Narendra Modi pays tribute to late VHP leader Ashok Singhal, in Delhi. pic.twitter.com/mOwLHknmf8
— ANI (@ANI_news) November 18, 2015 











Click it and Unblock the Notifications