2008ರ ಮಾಲೆಗಾಂವ್ ಸ್ಫೋಟ: ಲೆ.ಕ ಪ್ರಸಾದ್ ಪುರೋಹಿತ್ ಗೆ ಜಾಮೀನು
ನವದೆಹಲಿ, ಆಗಸ್ಟ್ 21: 2008ರ ವಿಧ್ವಂಸಕ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಗೆ ಸುಪ್ರಿಂ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.
ಕಳೆದ ವಾರ ಪ್ರಕರಣದಲ್ಲಿ ಜಾಮೀನು ಕೋರಿ ಪುರೋಹಿತ್ ವಕೀಲರು ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಮಾರು 8 ವರ್ಷಗಳನ್ನು ಜೈಲಿನಲ್ಲಿ ಕಳೆದ ನಂತರ ಪುರೋಹಿತ್ ಗೆ ಕೊನೆಗೂ ಜಾಮೀನು ಸಿಕ್ಕಿದೆ.

ಜಾಮೀನು ನೀಡಿರುವ ಸುಪ್ರಿಂ ಕೋರ್ಟ್, ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಗಳನ್ನು ನಾಶಪಡಿಸಬಾರದು, ಜತೆಗೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತು ವಿಧಿಸಿದೆ.












Click it and Unblock the Notifications