ಹೊಸ ಸ್ಟಾರ್ಟ್ ಅಪ್ ಕಂಪನಿ ಆರಂಭಿಸಿ, ಕೃಷಿ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಸಿದ 4 ವಿದ್ಯಾರ್ಥಿಗಳು

ಹೊಸ ಇಂಧನ ಕಂಡುಹಿಡಿಯುವುದು ಕ್ರಾಂತಿಯಲ್ಲ. ಬದಲಿಗೆ ಅದನ್ನ ಸರಿಯಾದ ಸಮಯಕ್ಕೆ ತಲುಪಿಸುವುದೇ ಮುಖ್ಯ ಎಂಬುದನ್ನು ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರೂಪಿಸಿ ದೇಶದ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೊಸ ಇಂಧನವನ್ನು ತಯಾರಿಸುವುದಕ್ಕಿಂತಲೂ ಅದನ್ನು ಸರಿಯಾದ ಸಮಯಕ್ಕೆ ಹಾಗೂ ಸೂಕ್ತ ಗುಣಮಟ್ಟದಲ್ಲಿ ತಲುಪಿಸುವುದು ಅತ್ಯಂತ ಸವಾಲಿನ ಕೆಲಸ ಎಂಬುದು ಹಲವರ ಗಮನಕ್ಕೆ ಬರುವುದಿಲ್ಲ. ಭಾರತದಲ್ಲಿ ಪ್ರಸ್ತುತ ಕೃಷಿ ತ್ಯಾಜ್ಯದಿಂದ ತಯಾರಾಗುವ ಜೈವಿಕ ಇಂಧನ ಬಳಕೆಗೆ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಪ್ರಮುಖವಾಗಿ ಎದುರಾಗುತ್ತಿದ್ದ ವಿತರಣಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಪುಣೆಯ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಮಾದರಿಯ ಉದ್ಯಮ ಸೃಷ್ಟಿಸಿ ಗಮನ ಸೆಳೆದಿದ್ದಾರೆ.

COEP Students Build Clean Energy Startup 4 Students Solve India s Biomass Fuel Supply Chain Problem

ನಾಲ್ವರು ವಿದ್ಯಾರ್ಥಿಗಳ ಅಮೋಘ ಸಾಧನೆ

ಪುಣೆಯ ಪ್ರಸಿದ್ಧ ಸಿಒಇಪಿ (COEP) ತಾಂತ್ರಿಕ ವಿಶ್ವವಿದ್ಯಾಲಯದ 21 ವರ್ಷದ ನಾಲ್ವರು ವಿದ್ಯಾರ್ಥಿಗಳಾದ ವೇದ್ ಥೊಂಬ್ರೆ, ಚಿನ್ಮಯ್ ಸರ್ದೇಶಮುಖ್, ಶ್ರೀನಿಧಿ ಕಟ್ಕರ್ ಹಾಗೂ ಅಖಿಲೇಶ್ ಮನ್ಮೋಡೆ ಈ ಸಮಸ್ಯೆಯ ಮೂಲವನ್ನು ಕಂಡುಕೊಂಡವರು. ಕಬ್ಬಿನ ಸಿಪ್ಪೆ, ಜೋಳದ ಸೌದೆ, ಸೋಯಾಬೀನ್ ತ್ಯಾಜ್ಯ ಮತ್ತು ಮರದ ಹೊಟ್ಟು ಮುಂತಾದ ಕೃಷಿ ತ್ಯಾಜ್ಯ ಬಳಸಿ ಇಂಧನ ತಯಾರಿಸುವ ಕಾರ್ಖಾನೆಗಳು ಭಾರತದಾದ್ಯಂತ ಹೆಚ್ಚುತ್ತಿವೆ.

ಆದರೆ ಕಾರ್ಖಾನೆಗಳಿಗೆ ಈ ಜೈವಿಕ ಇಂಧನವು ನಿಗದಿತ ಸಮಯಕ್ಕೆ ಪೂರೈಕೆ ಆಗದಿದ್ದರೆ ಅಥವಾ ಅದರ ಗುಣಮಟ್ಟದಲ್ಲಿ ಏರುಪೇರಾದರೆ ಉತ್ಪಾದನೆಯ ಮೇಲೆ ಭಾರಿ ಹೊಡೆತ ಬೀಳುತ್ತದೆ. ಆದ್ದರಿಂದ ಇಂಧನದ ಲಭ್ಯತೆ ಇದ್ದರೂ ಸಹ ಪೂರೈಕೆಯ ಕೊರತೆಯಿಂದಾಗಿ ಅನೇಕ ಉದ್ಯಮಗಳು ಇದನ್ನು ಬಳಸಲು ಹಿಂಜರಿಯುತ್ತಿದ್ದವು.

ಸ್ಟಾರ್ಟ್ಅಪ್ ಕಂಪನಿ ಆರಂಭ

ಈ ಪೂರೈಕೆಯನ್ನ ಬಲಪಡಿಸಲು ನಿರ್ಧರಿಸಿದ ಈ ನಾಲ್ವರು ವಿದ್ಯಾರ್ಥಿಗಳು 'ಸ್ವಸ್ತಿಕ್ ಇಕೋ ಎನರ್ಜಿ ಎಲ್‌ಎಲ್‌ಪಿ' (Swastik Eco Energy LLP) ಎಂಬ ಸ್ಟಾರ್ಟ್ಅಪ್ ಪ್ರಾರಂಭಿಸಿದರು. ತಮ್ಮ ಉದ್ಯಮವನ್ನು ಆರಂಭಿಸುವ ಮುನ್ನ ಇವರು ಹಲವು ತಿಂಗಳುಗಳ ಕಾಲ ವಿವಿಧ ಕಾರ್ಖಾನೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಧ್ಯಯನ ನಡೆಸಿದರು. ಜೈವಿಕ ಇಂಧನ ಕ್ಷೇತ್ರದಲ್ಲಿ ಸವಾಲುಗಳನ್ನು ಅರ್ಥೈಸಿಕೊಂಡ ನಂತರ 2026ರ ಫೆಬ್ರವರಿಯಲ್ಲಿ ತಮ್ಮ ಕಂಪನಿಯನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದರು.

ಮೂರು ಹಂತಗಳಲ್ಲಿ ಕಾರ್ಯನಿರ್ವಹಣೆ

* ಉತ್ತಮ ಗುಣಮಟ್ಟದ ಜೈವಿಕ ಇಂಧನ ತಯಾರಿಸುವ ಉತ್ಪಾದಕರು ಹಾಗೂ ಇಂಧನದ ಅಗತ್ಯವಿರುವ ಬೃಹತ್ ಕಾರ್ಖಾನೆಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವುದು.

* ಪೂರೈಕೆಯಾಗುವ ಜೈವಿಕ ಇಂಧನದ ಗುಣಮಟ್ಟವನ್ನು ಹಂತ-ಹಂತವಾಗಿ ಪರಿಶೀಲಿಸುವುದು ಮತ್ತು ತುರ್ತು ಅಗತ್ಯಗಳಿಗಾಗಿ ಗೋದಾಮುಗಳಲ್ಲಿ ಭದ್ರವಾಗಿ ಸಂಗ್ರಹಿಸಿಡುವುದು.

* ಯಾವುದೇ ಅಡೆತಡೆಯಿಲ್ಲದೆ ಸಮಯಕ್ಕೆ ಸರಿಯಾಗಿ ಕಾರ್ಖಾನೆಗಳಿಗೆ ಇಂಧನ ತಲುಪುವಂತೆ ನೋಡಿಕೊಳ್ಳುವುದು.

ಪರಿಸರ ರಕ್ಷಣೆ ಮತ್ತು ಹವಾಮಾನ ವೈಪರೀತ್ಯ ತಡೆಯಲು ಯಾವಾಗಲೂ ಹೊಸ ಉಪಕರಣ ಅಥವಾ ತಂತ್ರಜ್ಞಾನವನ್ನೇ ಸಂಶೋಧಿಸಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಉಪಯುಕ್ತ ಪರಿಹಾರವನ್ನು ಸರಿಯಾದ ಜಾಗಕ್ಕೆ, ಸರಿಯಾದ ಸಮಯಕ್ಕೆ ತಲುಪಿಸುವ ವ್ಯವಸ್ಥೆ ಮಾಡುವುದು ಕೂಡ ಅಷ್ಟೇ ದೊಡ್ಡ ಪರಿಹಾರವಾಗುತ್ತದೆ ಎಂಬುದಕ್ಕೆ ಈ ಜೆನ್ ಜಿ (Gen Z) ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾಹಸವೇ ಪ್ರಮುಖ ಸಾಕ್ಷಿ. ಇವರು ಸುಲಭ ಹಾಗೂ ಪರಿಣಾಮಕಾರಿ ಯೋಜನೆ ಮೂಲಕ ಭಾರತದ ಕ್ಲೀನ್ ಎನರ್ಜಿ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

ಕಂಪನಿಯನ್ನು 2026ರ ಫೆಬ್ರವರಿಯಲ್ಲಿ ಆರಂಭಿಸುವ ಮೊದಲು ಈ ನಾಲ್ವರು ಹಲವು ತಿಂಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಅಧ್ಯಯನ ಮಾಡಿ, ಮೂಲ ಸಮಸ್ಯೆಗಳನ್ನು ಗುರುತಿಸಿದ್ದರು. ಇನ್ನೂ ಈ ಕಥೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ಬದಲಾವಣೆಗೆ ಪರಿಹಾರ ಎಂದರೆ ಯಾವಾಗಲೂ ಹೊಸ ಆವಿಷ್ಕಾರಗಳೇ ಆಗಬೇಕೆಂದಿಲ್ಲ. ಈಗಾಗಲೇ ಇರುವ ಉತ್ತಮ ಪರಿಹಾರವನ್ನು ಸರಿಯಾದ ಸ್ಥಳಕ್ಕೆ, ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಗುಣಮಟ್ಟದೊಂದಿಗೆ ತಲುಪಿಸುವುದೂ ಅಷ್ಟೇ ದೊಡ್ಡ ಸಾಧನೆಯಾಗಿದೆ ಎಂಬುದನ್ನ ಇವರು ನಿರೂಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+