ಗುಜರಾತಿನಲ್ಲಿ ಭರ್ಜರಿ ಬೇಟೆ, 3500ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

Subscribe to Oneindia Kannada

ಅಹಮದಾಬಾದ್, ಜುಲೈ 30: ಗುಜರಾತ್ ಕರಾವಳಿಯಲ್ಲಿ ಕೋಸ್ಟ್ ಗಾರ್ಡ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಗುಪ್ತಚರ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಹಡಗೊಂದರಿಂದ ಸುಮಾರು 1500 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಈ ಮಾದಕ ವಸ್ತುವಿನ ಬೆಲೆ ಸುಮಾರು 3500 ಕೋಟಿ ರೂಪಾಯಿಯಾಗಿದೆ. ಇದೀಗ ಈ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ, ಪೊಲೀಸರು, ಕಸ್ಟಮ್ಸ್ ಅಧಿಕಾರಿಗಳು, ನೌಕಾ ಸೇನೆ ಮತ್ತು ಇತರ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ.

Coast Guard seizes 1,500 kg heroin worth Rs 3,500 crore in Gujarat

"ವ್ಯಾಪಾರಿ ಹಡಗೊಂದು 1500 ಕೆಜಿ ಹೆರಾಯಿನ್ ಸಾಗಣೆ ಮಾಡುತ್ತಿದ್ದಾಗ ಭಾರತೀಯ ಕೋಸ್ಟ್ ಗಾರ್ಡ್ನ 'ಸಮುದ್ರ ಪಾವಕ್' ಹಡಗು ಮಧ್ಯ ಪ್ರವೇಶಿಸಿ ಮಾದಕ ವಸ್ತವನ್ನು ವಶಕ್ಕೆ ಪಡೆದಿದೆ," ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಅಭಿಷೇಕ್ ಮಟಿಮನಿ ಹೇಳಿದ್ದಾರೆ.

IPL 2017:Kolkata vs Gujarat : Kolkata Finish On 187/5 Against Gujarat | Oneindia Kannada

ಗುಪ್ತಚರ ಮಾಹಿತಿಯನ್ನಾಧರಿಸಿ ಶನಿವಾರ ಮಧ್ಯಾಹ್ನ ಈ ಕಾರ್ಯಾಚರಣೆ ಮಾಡಲಾಗಿದ್ದು ಇಲ್ಲಿಯವರೆಗೆ ಪತ್ತೆ ಹಚ್ಚಿದ ಅತೀ ದೊಡ್ಡ ಪ್ರಮಾಣದ ಮಾದಕ ವಸ್ತು ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Indian Coast Guard (ICG) ship apprehended Merchant Vessel carrying approximately 1500 kgs of heroine valued at about Rs. 3500 crore off the coast of Gujarat.
Please Wait while comments are loading...