ಸನಾತನ ಧರ್ಮ ವಿವಾದ : ಉದಯಾನಿಧಿ ಹೇಳಿಕೆ ಬೆನ್ನಲ್ಲೇ ಎಂಕೆ ಸ್ಟಾಲಿನ್ ಹಿಂದೂ ಮದುವೆ ಬಗ್ಗೆ ವ್ಯಂಗ್ಯ : ಹಳೇ ವಿಡಿಯೋ ವೈರಲ್
ಚೆನ್ನೈ, ಸೆಪ್ಟೆಂಬರ್ 5: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡುವ ಮೂಲಕ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯಾನಿಧಿ ಅವರು ದೇಶಾದ್ಯಂತ ಸುದ್ದಿಯಾಗಿದ್ದಾರೆ. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಹಳೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಹಿಂದೂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದೂ ಸಾಂಪ್ರದಾಯಿಕ ವಿವಾಹಗಳಲ್ಲಿ ನಡೆಯುವ ವೈದಿಕ ಆಚರಣೆಗಳನ್ನು ಟೀಕಿಸುವ ಎಂ.ಕೆ. ಸ್ಟಾಲಿನ್ ಅವರ ಹಳೆಯ ವಿಡಿಯೋ ಈಗ ಮತ್ತೆ ಮುನ್ನಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಕ್ಕೂ ಕಾರಣವಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಡಿಎಂಕೆ ಅಧ್ಯಕ್ಷರಾಗಿದ್ದ ಕಾಲದಲ್ಲಿ ಎಂಕೆ ಸ್ಟಾಲಿನ್ ದ್ರಾವಿಡ ಸ್ವಾಭಿಮಾನ ಚಳವಳಿಗೆ ಬದ್ದವಾಗಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ತಮ್ಮ ಭಾಷಣದ ವೇಳೆ, ಸಾಂಪ್ರದಾಯಿಕ ಹಿಂದೂ ವಿವಾಹ ಮಂತ್ರಗಳ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದರು.
M.K.Stalin calls the traditional way of marriage as indecent, filthy and obscene. Question is how many of his voters will agree with that? #சனிக்கிழமைபிரதமர் pic.twitter.com/K9OLPo8K6i
— Vishwatma 🇮🇳 (@HLKodo) February 2, 2019
ವಿಡಿಯೋದಲ್ಲಿ ಹೇಳಿರುವುದೇನು?
ಒಂದು ನಿಮಿಷ ನಲವತ್ತು ಸೆಕೆಂಡುಗಳಲ್ಲಿ ಕೊನೆಯಾಗುವ ವಿಡಿಯೋದಲ್ಲಿ, ಎಂಕೆ ಸ್ಟಾಲಿನ್ ಅವರು ಹಿಂದೂ ಸಂಪ್ರದಾಯದ ವಿವಾಹಗಳ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಸಮಾರಂಭದಲ್ಲಿ ಕೆಲವು ಅಂಶಗಳನ್ನು ಎತ್ತಿ ತೋರಿಸುವ ಅವರು, ಮದುವೆಯ ಸಮಯದಲ್ಲಿ ಮಂತ್ರ ಹೇಳುವ, ಮದುವೆ ಮಾಡಿಸುವ ಪುರೋಹಿತ ಅತಥವಾ ಅಯ್ಯರ್ ಬಳಿ ವಧು - ವರರು ಹೇಗೆ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ ಎನ್ನುವುದನ್ನು ಅವರು ವಿವರಿಸಿದ್ದಾರೆ.
ಬೆಂಕಿಯ ಹೊಗೆ ಕಣ್ಣೀರಿಗೆ ಕಾರಣವಾಗುವುದು, ಪುರೋಹಿತ ಗೊಂದಲ ಮತ್ತು ಅರ್ಥವಾಗದ ಭಾಷೆಯಲ್ಲಿ ಮಂತ್ರಗಳನ್ನು ಪಠಿಸುವುದು ಸೇರಿದಂತೆ ಮದುವೆಯ ಸಂಪ್ರದಾಯಗಳನ್ನು ಹಾಸ್ಯದಿಂದ ವಿವರಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಸದಯ ಈ ವಿಡಿಯೋ ಸಾಮಾಜಿಮ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮತ್ತೊಂದು ವಿವಾದ ಹುಟ್ಟುಹಾಕಿದೆ. ಶನಿವಾರ (ಸೆಪ್ಟೆಂಬರ್ 2) ರಂದು ಎಂಕೆ ಸ್ಟಾಲಿನ್ ಅವರ ಪುತ್ರ ಉದಯಾನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ಹೋಲಿಕೆ ಮಾಡಿದ್ದಲ್ಲದೆ, ಇಂತಹ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.
ಇದರ ವಿರುದ್ಧ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಹಲವು ಕಡೆಗಳಲ್ಲಿ ದೂರು ಕೂಡ ದಾಖಲಿಸಾಗಿದೆ, ಬಿಹಾರದಲ್ಲಿ ಉದಯಾನಿಧಿ ಸ್ಟಾಲಿನ್ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.












Click it and Unblock the Notifications