ಈ ಮಹಾನಗರದಲ್ಲಿ ಪಟಾಕಿ ಉತ್ಪಾದನೆ, ದಾಸ್ತಾನಿಗೆ, ಮಾರಾಟಕ್ಕೆ ನಿಷೇಧಿಸಿದ ಸರ್ಕಾರ

ಬೆಂಗಳೂರು, ಸೆಪ್ಟಂಬರ್ 11: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಉಂಟಾಗುವಷ್ಟು ವಾಯು ಮಾಲಿನ್ಯ ಇನ್ನಿತರ ಮಹಾನಗರಗಳಲ್ಲಿ ಕಂಡು ಬರುವುದಿಲ್ಲ. ಆ ಮಟ್ಟಿನ ಗಾಳಿ ದೆಹಲಿಯಲ್ಲಿ ಕಲುಷಿತಗೊಳ್ಳುತ್ತಿದೆ. ಹೀಗೆ ಮುಂದುವರಿದರೆ ಅನಾರೋಗ್ಯ ಸೇರಿದಂತೆ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಸೃಷ್ಟಿ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಈ ಬಾರಿಯು ಎಲ್ಲ ವಿಧದ ಪಟಾಕಿಗಳ ಮೇಲೆ ಮತ್ತೆ ನಿಷೇಧ ಹೇರಿದೆ.

ಇನ್ನೊಂದು ವಾರದಲ್ಲಿ ಗಣೇಶ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ಈ ವೇಳೆ ಪಟಾಕಿ ಹೊಡೆಯುವುದಿರಂದ ನವದೆಹಲಿಯಲ್ಲಿ ನಿಯಂತ್ರಣಕ್ಕೆ ಬರುತ್ತಿರುವ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ ಇರುತ್ತದೆ. ಈ ಸಂಬಂಧ ಪಟಾಕಿಯ ಸದ್ದಿನಿಂದಲೇ ಆಚರಣೆಯಾಗುತ್ತಿದ್ದ ಮಹಾ ಹಬ್ಬ ದೀಪಾವಳಿಗೆ ಪಟಾಕಿಗಳನ್ನು ಬ್ಯಾನ್ ಮಾಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.

CM Arvind Kejriwal Govt Imposed Ban On All Types Of Firecrackers For Save Pollution Control

ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಪರಿಸರ ಖಾತೆ ಸಚಿವ ಗೋಪಾಲ್ ರೈ ಅವರು, ಮುಂಬರಲಿರುವ

ಹಬ್ಬಗಳಲ್ಲಿ ಸಾರ್ವಜನಿಕರು ಪಟಾಕಿ ಹೊಡೆಯದಂತೆ, ಪಟಾಕಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳದಂತೆ ಎಚ್ಚರಿಕೆ ವಹಿಸಲು ಮತ್ತು ನಿಷೇಧ ಕ್ರಮ ಕಟ್ಟುನಿಟ್ಟಾಗಿ ಜಾರಿಗೆ ತುರುವಂತೆ ಅವರು ಸೂಚನೆ ನೀಡಿದರು.

ಅರವಿಂದ್ ಕೇಜ್ರಿವಾಲ್ ನಿರ್ಧಾರ

ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ನಗರದ ವಾಯುಮಾಲಿನ್ಯ ಹದಗೆಡುವುದನ್ನು ತಡೆಯಲು ಸಿಎಂ ಅರವಿಂದ್ ಕೇಜ್ರಿವಾಲ್ ಈ ನಿರ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದರು.

CM Arvind Kejriwal Govt Imposed Ban On All Types Of Firecrackers For Save Pollution Control

ಸರ್ಕಾರದ ಈ ನಿರ್ಧಾರದಂತೆ ಎಲ್ಲ ವಿಧದ ಪಟಾಕಿಗಳು ಉತ್ಪಾದನೆ, ದಾಸ್ತಾನು ಮಾಡುವುದು, ಪಟಾಕಿ ಸಿಡಿಸುವುದು, ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರಾಟವನ್ನು ನಿಷೇಧಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೆಹಲಿ ಸರ್ಕಾರ ಪಟಾಕಿ ವಿರುದ್ಧ ಕ್ರಮವನ್ನು ಜಾರಿ ಕ್ರಮ ಅಳವಡಿಸುತ್ತಾ ಬಂದಿದೆ ಎಂದರು.

ದೆಹಲಿ ಸರ್ಕಾರದ ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) ವಿಚಾರದಲ್ಲಿ ಹೆಚ್ಚು ಪ್ರಗತಿ ಸಾಧಿಸುತ್ತಾ ಬಂದಿದ್ದೇವೆ. ಇದೀಗ ಅದನ್ನು ಭವಿಷ್ಯ ದೃಷ್ಟಿಯಿಂದ ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದಲೇ ಈ ವರ್ಷವು ಸಹ ನಾವು ಪಟಾಕಿಗಳನ್ನು ನಿಷೇಧಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನಿಯಮ ಉಲ್ಲಂಘನೆಗೆ ದಂಡ ಏನಿದೆ?

ಈ ಹಿಂದಿನ ವರ್ಷ 2022ರಲ್ಲಿ ದೀಪಾವಳಿಗೂ ಮೊದಲು ಆಮ್ ಆದ್ಮಿ ಪಾರ್ಟಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಪಟಾಕಿಗಳ ಮೇಲೆ ನಿಷೇಧ ವಿಧಿಸಿತ್ತು. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದರೆ, ಮಾರಾಟ ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ತಲಾ 200 ರೂಪಾಯಿ ದಂಡ ವಿಧಿಸುವ ಜೊತೆಗೆ ಆರು ತಿಂಗಳ ಸೆರೆವಾಸ ಶಿಕ್ಷೆ ನೀಡುತ್ತಿತ್ತು.

ಈ ಬಾರಿ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ 9ಬಿ ಸ್ಟೋಟಕಗಳ ವಿಭಾಗ ಕಾಯ್ದೆ ಅಡಿ ನಿಯಮ ಉಲ್ಲಂಘಿಸುವವರ ವಿರುದ್ಧ 5,000 ರೂಪಾಯಿವರೆಗೆ ದಂಡ ಹಾಗೂ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕುರಿತು ದೆಹಲಿ ಸರ್ಕಾರ ಎಚ್ಚರಿಕೆ ನೀಡಿದೆ. ಪರಿಸರ ಸಂರಕ್ಷಣೆಗೆ ಪೂರಕವಾದ ಸರ್ಕಾರದ ಈ ನಿಯಮದಿಂದಾಗಿ ಪಟಾಕಿಗಳ ಸದ್ದು ಗದ್ದಲ ವಿಲ್ಲದೇ ಸರಳವಾಗಿ ಪರಿಸರ ಸ್ನೇಹಿಯಾಗಿ ಗಣೇಶ್ ಹಬ್ಬ ಮತ್ತು ದೀಪಾವಳಿ ಸೇರಿದಂತೆ ಮತ್ತಿತರ ಹಬ್ಬಗಳನ್ನು ಆಚರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+