ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ನಾಗರಿಕ ಸಾವು

ಶ್ರೀನಗರ್, ಜೂನ್ 7: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಡಗಿದ್ದ ಉಗ್ರರ ಶೋಧ ಕಾರ್ಯಾಚರಣೆ ವೇಳೆ ಉಂಟಾದ ಗಲಭೆ ಸಂದರ್ಭದಲ್ಲಿ ಮಂಗಳವಾರ ಸಂಜೆ ಒಬ್ಬ ನಾಗರಿಕ ಮೃತಪಟ್ಟಿದ್ದಾನೆ.

ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಯುವಕರು ಗುಂಪೊಂದು ಪ್ರತಿಭಟನೆ ನಡೆಸಿತು. ಸಂಜೆ ಇನ್ನೇನು ರಂಜಾನ್ ನ ರೋಜಾ ಉಪವಾಸ ಮುಗಿಯುವುದರಲ್ಲಿತ್ತು. ಆ ವೇಳೆ ಪ್ರತಿಭಟನಾಕಾರರ ಗುಂಪಿನತ್ತ ರಕ್ಷಣಾ ಪಡೆಯು ಗುಂಡು ಹಾರಿಸಿತು.[ಏಟಿಗೆ ಎದುರೇಟು, ನಾಲ್ವರು ಉಗ್ರರನ್ನು ಹೊಡೆದುರಿಳಿಸಿದ ಭಾರತೀಯ ಸೇನೆ]

ಸಿಕ್ಕಿಬಿದ್ದ ಉಗ್ರಗಾಮಿಗಳು ತಪ್ಪಿಸಿಕೊಳ್ಳುವುದಕ್ಕೆ ಆ ಗುಂಪು ಬೆಂಬಲ ನೀಡುತ್ತಿತ್ತು. ಹನ್ನೆರಡನೇ ತರಗತಿ ವಿದ್ಯಾರ್ಥಿ, ಗನವ್ ಪೋರ್ ನ ನಿವಾಸಿ ಅದಿಲ್ ಫಾರೂಕ್ ಮಗ್ರೆ ಎಂಬಾತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿದ್ದ. ಆತನಿಗೆ ಗುಂಡು ತಗುಲಿತು ಎಂದು ಆರೋಪಿಸಲಾಗಿದೆ. ಇನ್ನು ನಾಲ್ವರು ನಾಯಕರಿಗೆ ಗಾಯಗಳಾಗಿವೆ.

jammu and Kashmir

ಹಿಜ್ಬುಲ್ ಮುಜಾಹಿದೀನ್ ನ ಇಬ್ಬರು ಉಗ್ರರು, ಆ ಪೈಕಿ ಒಬ್ಬ ಕಮ್ಯಾಂಡರ್ ಅಲ್ಲಿ ಅಡಗಿದ್ದ ಎಂದು ವರದಿಯಾಗಿದೆ. ರಾಷ್ಟ್ರೀಯ ರೈಫಲ್ಸ್, ಸಿಆರ್ ಪಿಎಫ್ ಯೋಧರು ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+