ಅಪನಗದೀಕರಣ ಬಳಿಕ 22 ದಿನದಲ್ಲಿ ಮುದ್ರಿಸಿದ ನೋಟುಗಳೆಷ್ಟು? ಮಾಹಿತಿ ನೀಡಿ
ಗುರುಗ್ರಾಮ, ಡಿಸೆಂಬರ್ 10: ಪ್ರಧಾನಿ ನರೇಂದ್ರ ಮೋದಿ ಅವರು ಅಪನಗದೀಕರಣದ ಘೋಷಣೆ ಮಾಡಿದ ಬಳಿಕ 2016ರ ನವೆಂಬರ್ 9ರಿಂದ ಅದೇ ತಿಂಗಳ 30ರವರೆಗೆ 2,000 ಮತ್ತು 500 ಮುಖಬೆಲೆಯ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ ಎಂಬ ಮಾಹಿತಿ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸೂಚನೆ ನೀಡಿದೆ.
ಗುರುಗ್ರಾಮ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಹರಿಂದರ್ ಢಿಂಗ್ರ ಅಪಗನದೀಕರಣ ಜಾರಿಗೆ ಬಂದ 2016ರ ನವೆಂಬರ್ 9 ರಿಂದ 30ರವರೆಗೆ ಎಷ್ಟು ಸಂಖ್ಯೆಯ ನೋಟುಗಳನ್ನು ಮುದ್ರಿಸಲಾಗಿದೆ ಎಂಬ ಮಾಹಿತಿ ನೀಡುವಂತೆ 2017ರ ಫೆಬ್ರುವರಿ 23ರಂದು ಕೋರಿದ್ದರು.
ಈ ಮಾಹಿತಿಯನ್ನು ಒದಗಿಸಲು ಆರಂಭದಲ್ಲಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ನಿರಾಕರಿಸಿದ್ದರು. ಬಳಿಕ 2017ರ ಆಗಸ್ಟ್ 16ರಂದು ಮರು ಮನವಿ ಸಲ್ಲಿಸಲಾಗಿತ್ತು.

2018ರ ನವೆಂಬರ್ 30ರಂದು ವಿಚಾರಣೆ ನಡೆದು, ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ಅವರು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಡಿಸೆಂಬರ್ 5ರಂದು ಸೂಚನೆ ನೀಡಿದ್ದಾರೆ ಎಂದು ಢಿಂಗ್ರ ತಿಳಿಸಿದ್ದಾರೆ.
ನವೆಂಬರ್ 9 ರಿಂದ 30ರ ಅವಧಿಯಲ್ಲಿ ಪ್ರತಿನಿತ್ಯ ಎಷ್ಟು ನೋಟುಗಳನ್ನು ಮುದ್ರಿಸಲಾಗುತ್ತಿತ್ತು ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) (ಎ) ಅಡಿಯಲ್ಲಿ ವಿನಾಯತಿಗೆ ಒಳಪಡುವ ಸೂಕ್ಷ್ಮವಾದ ಸಂಗತಿಯೇನಲ್ಲ. ಹೀಗಾಗಿ ಸಿಪಿಐಒ ಅದರ ಮಾಹಿತಿಯನ್ನು ಒದಗಿಸಬೇಕು ಎಂದು ನಿರ್ದೇಶಿಸಲಾಗಿದೆ.












Click it and Unblock the Notifications