ಸಲ್ಮಾನ್ 'ಖುಲಾಸೆ' ವಿರುದ್ಧ ಸುಪ್ರೀಂಗೆ ಅರ್ಜಿ ಹಾಕಿದ ರಾಜಸ್ಥಾನ
ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ರನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ವಿಶೇಷ ರಜೆ ಅರ್ಜಿ(ಎಸ್ ಎಲ್ಪಿ) ಹಾಕಿದ್ದು, ದೀಪಾವಳಿ ರಜೆ ಬಳಿಕ ವಿಚಾರಣೆ
ನವದೆಹಲಿ, ಅಕ್ಟೋಬರ್ 19: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮತ್ತೊಮ್ಮೆ ಕೃಷ್ಣಮೃಗ ಹತ್ಯೆ ಪ್ರಕರಣ ಬೇಟೆಯಾಡುತ್ತಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಸಲ್ಮಾನ್ ಖಾನ್ ಖುಲಾಸೆಗೊಂಡಿದ್ದರು. ಆದರೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ರನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ವಿಶೇಷ ರಜೆ ಅರ್ಜಿ(ಎಸ್ ಎಲ್ಪಿ) ಹಾಕಿದ್ದು, ದೀಪಾವಳಿ ರಜೆ ಬಳಿಕ ವಿಚಾರಣೆ ಬರುವ ಸಾಧ್ಯತೆಯಿದೆ ಎಂದು ರಾಜಸ್ಥಾನ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಶಿವ ಮಂಗಲ್ ಶರ್ಮ ಅವರು ಹೇಳಿದ್ದಾರೆ. [ಕೃಷ್ಣಮೃಗ ಆತ್ಮಹತ್ಯೆ ಮಾಡ್ಕೊಂಡಿದ್ದು, ಅದ್ಕೆ ಸಲ್ಲೂ ಬಚಾವ್!]

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಾಜಸ್ಥಾನದ ಭವಾದ್ ನ ಲ್ಲಿ ಸೆಪ್ಟೆಂಬರ್ 26, 1998ರಲ್ಲಿ ನಡೆದ ಶೂಟಿಂಗ್ ಹಾಗೂ ಘೋಡಾ ಫಾರ್ಮ್ ನಲ್ಲಿ ಸೆಪ್ಟೆಂಬರ್ 28, 1998ರಲ್ಲಿ ನಡೆದ ಶೂಟಿಂಗ್ ನಲ್ಲಿ ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು.
ಈ ಪ್ರಕರಣದಲ್ಲಿ 1 ಹಾಗೂ 5 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಿ ನೀಡಿದ್ದ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟಿನಲ್ಲಿ ಸಲ್ಮಾನ್ ಪರ ಆದೇಶ ಜುಲೈ 25 ರಂದು ಬಂದಿತ್ತು.(ಪಿಟಿಐ)












Click it and Unblock the Notifications