ಕೊರೊನಾ ರೀತಿ ಮತ್ತೆ ಲಾಕ್ಡೌನ್ ಘೋಷಣೆ... China Virus
ಜನರೇ ಇಲ್ಲದ ರಸ್ತೆಗಳು, ಎಲ್ಲಿ ನೋಡಿದರೂ ದೆವ್ವದ ರೀತಿ ಕಾಣುವ ಏರಿಯಾಗಳು, ವಾಹನ ಓಡಾಟಕ್ಕೂ ನಿಷೇಧ, ಬಾಗಿಲು ಮುಚ್ಚಿದ ಫ್ಯಾಕ್ಟರಿಗಳು, ವರ್ಕ್ ಫ್ರಂ ಹೋಂ ಮಾಡುತ್ತಾ ಇರುವ ಉದ್ಯೋಗಿಗಳು... ಅಂದಹಾಗೆ ಇದು 2020 & 2021ರ ಸಮಯದಲ್ಲಿ ಕೊರೊನಾ ಭೀಕರತೆ ಸಮಯದಲ್ಲಿ ಲಾಕ್‌ಡೌನ್ ಹೇರಿದ್ದಾಗ ಕಂಡ ದೃಶ್ಯಗಳು. ಇದೀಗ ಅದೇ ಸೀನ್ ಮತ್ತೆ ರಿಪೀಟ್ ಆಗಿದ್ದು, ಕೊರೊನಾ ರೀತಿ ಮತ್ತೆ ಲಾಕ್ಡೌನ್ ಘೋಷಣೆ...
ಭಯ.. ಭಯ.. ಇದು ಕೊರೊನಾ ಭಯ ಅಲ್ಲ ಕೊರೊನಾ ರೀತಿಯಲ್ಲೇ ಮತ್ತೊಂದು ಭಯ ಈಗ ಶುರುವಾಗಿದೆ. ಇದೀಗ ಕೊರೊನಾ ಹುಟ್ಟಿದ್ದ ದೇಶದಲ್ಲೇ ಇನ್ನೊಂದು ವೈರಸ್ ಕೂಡ ಹುಟ್ಟಿಕೊಂಡಿದೆ. ಆದರೆ ಇದು ಕೊರೊನಾ ವೈರಸ್ ಮೀರಿಸುವ ರೀತಿ ಇದ್ದು, ಜನ ಕೂಡ ಇದರಿಂದ ಭಯದಲ್ಲಿ ನರಳುವಂತೆ ಆಗಿದೆ. ಮತ್ತೊಂದು ಕಡೆ ಸರ್ಕಾರ ಕೂಡ ಈ ಭೀಕರತೆ ನೋಡಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಹೀಗಿದ್ದಾಗಲೇ, ಕೊರೊನಾ ರೀತಿ ಮತ್ತೆ ಲಾಕ್ಡೌನ್ ಘೋಷಣೆ...

ಚೀನಾ ನೆಲದಲ್ಲಿ ಆರೋಗ್ಯ ತುರ್ತು ಸ್ಥಿತಿ!
ಹೌದು, ಚೀನಾ ನೆಲದಲ್ಲಿ ಕೊರೊನಾ ರೀತಿ ಪರಿಸ್ಥಿತಿ ಇದೀಗ ಮತ್ತೆ ನಿರ್ಮಾಣ ಆಗಿದೆ. ಆ ರೀತಿ ನೋಡುವುದಾದರೆ ಇದು ಕೊರೊನಾ ಮೀರಿಸುವ ಪರಿಸ್ಥಿತಿ ಅಂತಾ ಹೇಳಲಾಗುತ್ತಿದೆ. ಈ ಕಾರಣಕ್ಕೆ ಜನರು ಕೂಡ ನಲುಗಿ ಹೋಗಿದ್ದು, ಇದೀಗ ಹ್ಯೂಮನ್ ಮೆಟಾಫೆನೋಮೋ ವೈರಸ್ ಹಾವಳಿ ಹಿನ್ನೆಲೆ ಚೀನಾ ನೆಲದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಕೊರೊನಾ ರೀತಿ ಮತ್ತೆ ಲಾಕ್ಡೌನ್ ಘೋಷಣೆ ಮಾಡ್ತಾರಾ? ಎಂಬ ಭಯ ಕೂಡ ಜಗತ್ತಿನಾದ್ಯಂತ ಕಾಡುತ್ತಿದೆ.
ಮಾಸ್ಕ್ & ಸ್ಯಾನಿಟೈಸರ್ ಕಡ್ಡಾಯ!
ಇಷ್ಟೆಲ್ಲದರ ನಡುವೆ ಇದೀಗ ಚೀನಾ ದೇಶದಲ್ಲಿ ಎಲ್ಲಿ ನೋಡಿದರೂ ಜನರು ಮಾಸ್ಕ್ ಹಾಕಿ ಓಡಾಡುತ್ತಿರುವ ಸೀನ್ ಕಂಡು ಬರುತ್ತಿದೆ. ಹಾಗೇ ಯಾವುದೇ ಜಾಗಕ್ಕೆ ಹೋದರೂ ಅಲ್ಲೆಲ್ಲ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಇದು ಸಾಲದು ಎಂಬಂತೆ ಸೋಷಿಯಲ್ ಮೀಡಿಯಾ ಪೂರ್ತಿ ಇದೀಗ ಚೀನಾ ವೈರಸ್ ಸಂಬಂಧಿಸಿದ ವಿಡಿಯೋಗಳೇ ವೈರಲ್ ಆಗುತ್ತಿವೆ. ಹಾಗೇ ಚೀನಾದ ಶವಾಗಾರದ ಬಳಿ ರಾಶಿ, ರಾಶಿ ಶವಗಳು ಇವೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಕೊರೊನಾ ಆತಂಕ ರಿಪೀಟ್ ಆಗುತ್ತಿದೆ.
ಒಟ್ನಲ್ಲಿ ಮತ್ತೊಮ್ಮೆ ಚೀನಾ ಆರೋಗ್ಯ ತುರ್ತು ಪರಿಸ್ಥಿತಿಗೆ ಸಿಲುಕಿ ಪರದಾಡುತ್ತಿದ್ದು, ಈಗಿನ ಸ್ಥಿತಿ ನೋಡಿದರೆ ಭಾರತಕ್ಕೆ ಕೂಡ ಇದರಿಂದ ಕಂಟಕ ಎದುರಾಗುವ ಆತಂಕ ಆವರಿಸಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಭಾರತದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾಗೇ ಜಗತ್ತಿನ ಹಲವು ದೇಶಗಳು ಚೀನಾದ ವೈರಸ್ ವ್ಯೂಹದ ಬಗ್ಗೆ ಪ್ರತಿ ಕ್ಷಣದ ಮಾಹಿತಿ ಪರಿಶೀಲನೆ ಮಾಡುತ್ತಿವೆ.












Click it and Unblock the Notifications