Chicken Biryani: ತಮಿಳುನಾಡಿನ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಉಚಿತ ಬ್ರೇಕ್‌ಫಾಸ್ಟ್, ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ?!
Chicken Biryani: ತಮಿಳುನಾಡಿನಲ್ಲಿ ಮತ್ತೊಂದು ಪ್ರಮುಖ ಯೋಜನೆಗೆ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೆಪ್ಟೆಂಬರ್ 22ರ ಮಂಗಳವಾರ ಚಾಲನೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಅವರು ತಮಿಳುನಾಡಿನಾದ್ಯಂತ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 6ನೇ ಮತ್ತು 8ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೆರುಂತಲೈವರ್ ಕಾಮರಾಜರ್ ಉಪಾಹಾರ / ಬ್ರೇಕ್‌ಫಾಸ್ಟ್ ಯೋಜನೆಯ ವಿಸ್ತರಣೆಗೆ ಚಾಲನೆ ನೀಡಿದ್ದಾರೆ.
ಚೆನ್ನೈನ ತಿರುವನ್ಮಿಯೂರಿನಲ್ಲಿರುವ ಗಾಂಧಿ ಗ್ರಾಮದಲ್ಲಿರುವ ಚೆನ್ನೈ ಮಿಡಲ್ ಕ್ಲಾಸ್‌ನಲ್ಲಿ ಯೋಜನೆಯ ವಿಸ್ತರಣೆಗೆ ಚಾಲನೆ ನೀಡಿದ ವಿಜಯ್, ವಿದ್ಯಾರ್ಥಿಗಳಿಗೆ ಸಿಹಿ ಪೊಂಗಲ್ ಬಡಿಸಿ ಅವರೊಂದಿಗೆ ಉಪಾಹಾರ ಸೇವಿಸಿದರು. ಮುಖ್ಯಮಂತ್ರಿ ವಿಜಯ್ ಅವರು ತರಗತಿ ಕೊಠಡಿಗಳನ್ನು ಪರಿಶೀಲಿಸಿದರು ಮತ್ತು ಉಪಾಹಾರ ಸೇವಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಾರಂಭದ ದಿನದಂದು ಉಪಾಹಾರದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಪೊಂಗಲ್, ಪೊಂಗಲ್ ಮತ್ತು ಸಾಂಬಾರ್ ಕೊಡಲಾಗಿದೆ. ಈ ಯೋಜನೆಯನ್ನು ವಿಸ್ತರಿಸುವುದಕ್ಕಾಗಿ ತಮಿಳುನಾಡು ಸರ್ಕಾರವು 217.63 ಕೋಟಿ ಹೆಚ್ಚುವರಿ ಹಣ ಸೇರಿದಂತೆ ಈ ಯೋಜನೆಗೆ ಒಟ್ಟು 724 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ವಿಸ್ತೃತ ಯೋಜನೆಯು ತಮಿಳುನಾಡಿನಾದ್ಯಂತ 15,454 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 5ನೇ ತರಗತಿಯಿಂದ 8ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ 15.3 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನಲ್ಲಿರುವ 447 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಉಪಹಾರವನ್ನು ತಯಾರಿಸಿ ಬಡಿಸಲಾಗುತ್ತದೆ.
ಇತರ ಪುರಸಭೆ ನಿಗಮಗಳು, ಪುರಸಭೆಗಳು ಮತ್ತು ಪಕ್ಕದ ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿನ 2,150 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ, ಪುರಸಭೆ ಆಡಳಿತ ನಿರ್ದೇಶನಾಲಯದಿಂದ ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಉಪಹಾರವನ್ನು ತಯಾರಿಸಿ ಬಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಗ್ರಾಮೀಣ ಪ್ರದೇಶಗಳು ಮತ್ತು ಪಕ್ಕದ ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿನ 12,857 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ, ತಮಿಳುನಾಡು ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರು ಆಯಾ ಶಾಲೆಗಳಲ್ಲಿ ಉಪಹಾರವನ್ನು ತಯಾರಿಸಿ ಬಡಿಸಲಿದ್ದಾರೆ ಎಂದು ಹೇಳಲಾಗಿದೆ.
Chicken Biryani: ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ಬಿರಿಯಾನಿ
ಕೇರಳದ ನಂತರ ತಮಿಳುನಾಡಿ ಸರ್ಕಾರಿ ಶಾಲೆಯಲ್ಲೂ ಮಕ್ಕಳಿಗೆ ಬಿರಿಯಾನಿ ನೀಡುವ ಚರ್ಚೆ ಶುರುವಾಗಿದೆ. ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರಕ್ಕೆ ಒಮ್ಮೆ ಬಿರಿಯಾನಿ ಫುಡ್ ನೀಡುವ ಬಗ್ಗೆಯೂ ಈಚೆಗೆ ಚರ್ಚೆ ನಡೆದಿದೆ.
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪೌಷ್ಟಿಕಯುಕ್ತ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಕೊಡುವ ಉದ್ದೇಶದಿಂದ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಕಳೆದ ವರ್ಷ ಕೇರಳದ ಅಂಗನವಾಡಿಯಲ್ಲಿ ಬಿರಿಯಾನಿ ಯೋಜನೆ ಜಾರಿ ಮಾಡಲಾಗಿತ್ತು. ಇದೀಗ ತಮಿಳುನಾಡಿನಲ್ಲೂ ಈ ಯೋಜನೆಯ ಪ್ರಾಯೋಗಿಕ ಜಾರಿಯ ಬಗ್ಗೆ ಚರ್ಚೆ ನಡೆದಿದೆ.


Click it and Unblock the Notifications
