ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಬೇಡಿ ಎಂದ ಮಹಿಳಾ ಆಯೋಗ : ಕಾರಣ ಇಲ್ಲಿದೆ
ಭಾರತೀಯರಲ್ಲಿ ಮದುವೆ ಎಂದರೆ ಅದನ್ನು ಜೀವನದ ಬಹುಮುಖ್ಯ ಘಟನೆ, ಮದುವೆಯ ಪ್ರತಿ ಕ್ಷಣವನ್ನು ಫೋಟೊ, ವಿಡಿಯೋದಲ್ಲಿ ನೆನಪಿಗಾಗಿ ಸೆರೆಹಿಡಿಯುವುದು ಸಾಮಾನ್ಯ. ಇತ್ತೀಚೆಗೆ ಪ್ರಿ ವೆಡ್ಡಿಂಗ್ ಶೂಟ್ ಎನ್ನುವುದು ಸಾಕಷ್ಟು ಜನಪ್ರಿಯವಾಗಿದೆ. ದೇಶ-ವಿದೇಶಗಳ ಮನಮೋಹಕ ಸ್ಥಳಗಳಲ್ಲಿ ಹುಡುಗ-ಹುಡುಗಿ ಫೋಟೊ ಶೂಟ್ ಮಾಡಿಸಲು ಇಷ್ಟ ಪಡುತ್ತಾರೆ. ಇದರಲ್ಲೂ ವಿನೂತನ ಐಡಿಯಾಗಳನ್ನು ಬಳಸಿ ಪ್ರತಿ ಕ್ಷಣಗಳನ್ನು ಸುಂದರವಾಗಿಸಿಕೊಳ್ಳಲು ಬಯಸುತ್ತಾರೆ. ಆದರೆ ಮಹಿಳಾ ಆಯೋಗ ಪ್ರಿ ವೆಡ್ಡಿಂಗ್ ಶೂಟ್ ಬಗ್ಗೆ ಕಿಡಿ ಕಾರಿದೆ.
ಹೌದು, ಛತ್ತೀಸ್‌ಗಢದ ಮಹಿಳಾ ಆಯೋಗದ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಅವರು ಮದುವೆಗೆ ಮುಂಚಿನ ಚಿತ್ರೀಕರಣವು ಮಹಿಳೆಯರಿಗೆ ಹಾನಿಯಾಗಬಹುದು ಮತ್ತು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಂಡರೆ ಅದು ವಿವಾದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.

ಕಿರಣ್ಮಯಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ, 172 ನೇ ಸಾರ್ವಜನಿಕ ವಿಚಾರಣೆಯ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆಯಿತು. ಈ ಸಾರ್ವಜನಿಕ ವಿಚಾರಣೆಯಲ್ಲಿ ಒಟ್ಟು 25 ಪ್ರಕರಣಗಳನ್ನು ವಿಚಾರಣೆಗೆ ನಿಗದಿಪಡಿಸಲಾಗಿತ್ತು ಮತ್ತು ಅವುಗಳಲ್ಲಿ ಹೆಚ್ಚಿನವು ಮದುವೆಯ ನಂತರ ದಂಪತಿಗಳ ನಡುವಿನ ವಿವಾದಗಳಿಗೆ ಸಂಬಂಧಿಸಿವೆ.
ಇಂತಹ ಒಂದು ಪ್ರಕರಣದಲ್ಲಿ ದಿನಾಂಕ ನಿಗದಿಯಾದ ಬಳಿಕ ಮದುವೆ ಮುರಿದುಬಿದ್ದಿದೆ. ಇದಕ್ಕಾಗಿ ಅರ್ಜಿದಾರರು ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆಯ ಸಂದರ್ಭದಲ್ಲಿ ಇಬ್ಬರೂ ಕೂಡ ಪ್ರಕರಣವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದರು. ಮದುವೆಗೆ ಖರ್ಚು ಮಾಡಲಾಗಿದ್ದ ಹಣವನ್ನು ಸಂಪೂರ್ಣವಾಗಿ ವಾಪಸ್ ನೀಡಲಾಗಿದೆ, ಅಲ್ಲದೆ, ಪ್ರಿ ವೆಡ್ಡಿಂಗ್ ಫೋಟೊ ಮತ್ತು ವಿಡಿಯೋಗಳಿಗಾಗಿ ಮಾಡಿದ್ದ ಖರ್ಚನ್ನು ವಾಪಸ್ ನೀಡಿದ್ದು, ಫೋಟೊ ಮತ್ತು ವಿಡಿಯೋವನ್ನು ಅಳಿಸಲಾಗಿದೆ" ಎಂದು ಅರ್ಜಿದಾರರು ವಿವರ ನೀಡಿದ್ದಾರೆ,
ಈ ಸಂದರ್ಭದಲ್ಲಿ ಗಂಡಿನ ಕಡೆಯವರಿಗೆ ಹುಡುಗಿಯ ಒಪ್ಪಿಗೆ ಇಲ್ಲದೆ, ಪ್ರಿ ವೆಡ್ಡಿಂಗ್ ಶೂಟ್‌ನ ಯಾವುದೇ ಫೋಟೊ ಅಥವಾ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಅಥವಾ ಹಂಚಿಕೊಂಡರೆ, ಹುಡುಗಿಯ ಕಡೆಯವರು ಸೈಬರ್ ಕ್ರೈಮ್ ಎಂದು ದೂರು ನೀಡಬಹುದು ಎಂದು ಹುಡುಗನ ಕಡೆಯವರಿಗೆ ಎಚ್ಚರಿಕೆ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ, ಇದು ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಿರಣ್ಮಯಿ ನಾಯಕ್ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.
"ಮ್ಮ ಹೆಣ್ಣುಮಕ್ಕಳಿಗೆ ಹಾನಿಕಾರಕವಾಗಬಹುದಾದ್ದರಿಂದ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಿ ವೆಡ್ಡಿಂಗ್ ಶೂಟ್ ಅನ್ನು ತಪ್ಪಿಸಬೇಕು ಎಂದು ನಾನು ಪೋಷಕರನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.












Click it and Unblock the Notifications