ಛತ್ತೀಸ್ ಗಢದ ಹೊಸ ರಾಜಧಾನಿಯ ಹೆಸರು ಅಟಲ್ ನಗರ!
ಭೋಪಾಲ್, ಆಗಸ್ಟ್ 22: ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರ ನೆನಪಿಗಾಗಿ ಛತ್ತೀಸ್ ಗಢವು ತನ್ನ ರಾಜಧಾನಿ ನಯಾ ರಾಯ್ಪುರವನ್ನು 'ಅಟಲ್ ನಗರ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.
2000 ನೇ ಇಸವಿಯಲ್ಲಿ ಮಧ್ಯಪ್ರದೇಶದಿಂದ ಹೊರಬಂದು ಛತ್ತೀಸ್ ಗಢ ಪ್ರತ್ಯೇಕ ರಾಜ್ಯವಾಗಿ ರೂಪುಗೊಳ್ಳುವಲ್ಲಿ ವಾಜಪೇಯಿ ಅವರ ಕೊಡುಗೆಯೂ ಇರುವುರಿಂದ ಅವರ ನೆನಪಿಗಾಗಿ ರಾಯ್ಪುರಕ್ಕೆ ಅವರದೇ ಹೆಸರನ್ನು ಇಡಲಾಗುವುದು ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.
ಭಾರತದ ಅತ್ಯುತ್ತಮ ನಗರಗಳಲ್ಲೊಂದಾದ ನಯಾ ರಾಯ್ಪುರ ಸುಸಜ್ಜಿತ ನಗರವೆಂಬ ಹೆಗ್ಗಳಿಕೆ ಗಳಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಬೇರ್ಪಟ್ಟಾಗಲೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆವರು ರಾಯ್ಪುರಕ್ಕೆ ಬಂದು ಹೊಸ ನಗರ ಕಟ್ಟುವುದು ಹೇಗೆಂಬ ಬಗ್ಗೆ ಅಭ್ಯಸಿಸಿ ಹೋಗಿದ್ದರಂತೆ! ಅತೀ ಕಡಿಮೆ ಅವಅಧಿಯಲ್ಲಿ ಒಂದು ಆಧುನಿಕ ನಗರವನ್ನು ಇಷ್ಟೆಲ್ಲ ಸುಸಜ್ಜಿತವಾಗಿ ಕಟ್ಟಬಹುದು ಎಂಬುದಕ್ಕೆ ರಾಯ್ಪುರ ಒಂದು ಉದಾಹರಣೆ ಎಂದು ನಾಯ್ಡು ಅವರೇ ಹೇಳಿದ್ದರು.

ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ 93 ವರ್ಷ ವಯಸ್ಸಿನ ಅಟಲ್ ಬಿಹಾರಿ ವಾಜಪೇಯಿ ಅವರ ಸವಿನೆನಪಿಗಾಗಿ ರಾಯ್ಪುರವು 'ಅಟಲ್ ನಗರ'ವಾಗಿ ಬದಲಾಗಲಿದೆ.












Click it and Unblock the Notifications