ವಾಹನಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ನಕ್ಸಲರು: ಓರ್ವ ವ್ಯಕ್ತಿ ಬಲಿ

ಕುಡ್ತಿ, ಮಾರ್ಚ್ 06: ಪ್ರತೀಕಾರಕ್ಕೆ ಎಂಬಂತೆ ಎರಡು ಬಸ್ಸು ಮತ್ತು ಮೂರು ಲಾರಿಗಳಿಗೆ ನಕ್ಸಲರು ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಇಲ್ಲಿನ ಕುಡ್ತಿ ಎಂಬಲ್ಲಿ ಮಾ.05 ರ ರಾತ್ರಿ ಕೆಲವು ನಕ್ಸಲರು ಬಸ್ಸು, ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದು ಆತನ ಗುರುತು ಪತ್ತೆಯಾಗಿಲ್ಲ.

ಮಾ. 2 ರಂದು ತೆಲಂಗಾಣ ಮತ್ತು ಛತ್ತೀಸ್ ಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 10 ನಕ್ಸಲರನ್ನು ಎನ್ ಕೌಂಟರ್ ಮೂಲಕ ಬಲಿಹಾಕಿದ್ದರು. ಅದಕ್ಕಾಗಿ ಸೇಡು ತೀರಿಸಿಕೊಳ್ಳುವುದಕ್ಕಾಗಿ ನಕ್ಸಲರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗುತ್ತಿದೆ.

ಮಾ.2 ರಂದು ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯ ಪುಜಾರಿ ಕಾಂಕೆರ್ ಎಂಬಲ್ಲಿ 10 ನಕ್ಸಲರನ್ನು ಬಲಿಹಾಕಲಾಗಿತ್ತು. ಈ ಘಟನೆಯಲ್ಲಿ ಬೀದರ್ ನ ಸುಶೀಲ್ ಕುಮಾರ್ ಎಂಬ 36 ವರ್ಷದ ಯೋಧರೊಬ್ಬರು ಹುತಾತ್ಮರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+