ಜೀವಿತಾವಧಿ ಕೈದಿಯನ್ನೇ ಮದುವೆಯಾದ ಮಹಿಳಾ ವಕೀಲೆ!

ಶಾದಿ ಭಾಗ್ಯ !:
ನ್ಯಾಯವಾದಿ 27 ವರ್ಷದ ಅರುಣಾ ಮತ್ತು ಕೈದಿ ಸೋಮಸುಂದರಂ ಮದುವೆಯು ವೈಸರಪಡಿಯಲ್ಲಿರುವ ಕಲ್ಯಾಣ ಮಂಟಪದಲ್ಲಿ ನೆರವೇರಿದೆ. ಮದುವೆಗೆ ಸ್ನೇಹಿತರು, ಸಂಬಂಧಿಗಳು, ಹಿತೈಷಿಗಳು ಆಗಮಿಸಿ, ಆಶೀರ್ವದಿಸಿದ್ದಾರೆ.
ಅದಕ್ಕೂ ಮುನ್ನ, ಮದುವೆಯ ಸಂಬಂಧ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ನ್ಯಾಯವಾದಿ ಅರುಣಾ, ಕೈದಿ ಸೋಮಸುಂದರಂ ಜತೆ ನಾನು ಮದುವೆಯಾಗಲು ನಿರ್ಧರಿಸಿದ್ದು, ಆತನಿಗೆ ಒಂದು ತಿಂಗಳ ರಜೆ ಮಂಜೂರು ಮಾಡಬೇಕೆಂದು ಅಲವತ್ತುಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠ ಕೈದಿ ಸೋಮಸುಂದರಂಗೆ 10 ದಿನ ರಜೆ ಮಂಜೂರು ಮಾಡಿದೆ.
ಅದರಂತೆ, ಪುಳಲ್ ಜೈಲಿನಿಂದ (Puzhal) ಬಿಡುಗಡೆಗೊಂಡಿರುವ ಕೈದಿ ಸೋಮಸುಂದರಂ ಫೆಬ್ರವರಿ 10ರಂದು ಸಂಜೆ 7 ಗಂಟೆಗೆ ಎಲ್ಲೇ ಇದ್ದರೂ ಕಾರಾಗೃಹದೊಳಕ್ಕೆ ವಾಪಸಾಗಬೇಕಾಗಿದೆ. ಗಮನಾರ್ಹವೆಂದರೆ ಈ 10 ದಿನಗಳಲ್ಲಿ ಕೈದಿ ಸೋಮಸುಂದರಂ ಸುರಕ್ಷತೆ ಮತ್ತು ಕ್ಷೇಮವನ್ನು ಗಮನದಲ್ಲಿರಿಸಿಕೊಂಡು ಆತನಿಗೆ ಎಸ್ಕಾರ್ಟ್ ಸಹ ನೀಡಲಾಗಿದೆ.
ಅಂದಹಾಗೆ ವಧು ಅರುಣಾ, ಸೋಮಸುಂದರಂನ ದೂರದ ಸಂಬಂಧಿ. ಹತ್ಯೆ ಪ್ರಕರಣದಲ್ಲಿ ಸೋಮಸುಂದರಂ ಆರೋಪಿ. ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ.












Click it and Unblock the Notifications