Chandrayaan-3: ಚಂದ್ರನ ಮೇಲೆ ಆ.23 ರಂದು ವಿಕ್ರಮ್ ಲ್ಯಾಂಡರ್‌ ಸಾಫ್ಟ್ ಲ್ಯಾಂಡಿಂಗ್

ನವದೆಹಲಿ, ಆಗಸ್ಟ್ 20: ಜುಲೈ 14 ರಂದು ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿದಿದ್ದ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ನಿರ್ಣಾಯಕ ಹಂತ ತಲುಪಿದ್ದು, ಇನ್ನೇನು ನಿರೀಕ್ಷೆಯಂತೆ ಆಗಸ್ಟ್ 23ರಂದು ಸಂಜೆ 06.4pm (18.04 IST) ಚಂದ್ರನ ದಕ್ಷಿಣ ಧ್ರುವದ ಮೇಲೆ ಮೃಧುವಾಗಿ ಲ್ಯಾಂಡ್ ಆಗಲಿದೆ. ಈ ಮೂಲಕ ವಿಶ್ವದಲ್ಲೇ ಭಾರತದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ಆಗಸ್ಟ್ 23ರಂದು ಚಂದ್ರನ ಮೇಲೆ ಸ್ಟಾಫ್ಟ್ ಲ್ಯಾಂಡಿಂಗ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಸಂಸ್ಥೆ ಮಾಹಿತಿ ನೀಡಿದೆ. ಬಾಹ್ಯಾಕಾಶ ನೌಕೆ ಉಡಾವಣೆ ಬಳಿಕ ಹಂತ ಹಂತವಾಗಿ ನಿರ್ವಹಿಸಿದ್ದ ಇಸ್ರೋ ವಿಜ್ಞಾನಿಗಳ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದು ತಲುಪಿದೆ. ಉಪಗ್ರಹದ ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ ಶನಿವಾರ ಯಶಸ್ವಿಯಾಗಿ ಕಾರ್ಯಗತಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

Chandrayaan-3 Vikram Lander Soft Will Landing On South Side Of Moon On August 23rd

ಲ್ಯಾಂಡಿಂಗ್‌ಗೆ ಇನ್ನೂ ಮೂರು ದಿನ ಬಾಕಿ ಇದೆ. ಲ್ಯಾಂಡರ್ ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಪಡಿಸುತ್ತೇವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಗೊತ್ತುಪಡಿಸಿದ ಕೀಲೋ ಮೀಟರ್ ಉದ್ದದ ಲ್ಯಾಂಡಿಂಗ್ ಸ್ಥಳದಲ್ಲಿ ಬುಧವಾರ ಮೃಧು ಲ್ಯಾಂಡಿಂಗ್ ಆಗಲಿದೆ.

ಲ್ಯಾಂಡಿಂಗ್ ಹೇಗಿರಲಿದೆ?

ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ಗಂಟೆಗೆ 6,000 ಕಿ.ಮೀ.ವೇಗದಲ್ಲಿ ಹೋಗುವ ಈ ಉಪಗ್ರಹ ನೌಕೆಯನ್ನು ವೇಗ ನಿಯಂತ್ರಿಸಿ ನಿಧಾನ ಮತ್ತು ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಪ್ರಯತ್ನವಾಗಿದೆ. ಈ ಸಂಬಂಧ ಐದು ಇಂಜಿನ್ ಗಳನ್ನು ಅಳವಡಿಸಲಾಗಿದ್ದು, ವೈಪಲ್ಯ ಆಧಾರಿತ ವೈಶಿಷ್ಟ್ಯತೆಯನ್ನು ಸಹ ರಾಕೇಟ್‌ನಲ್ಲಿ ಬಳಸಲಾಗಿತ್ತು. ಈ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು 90-ಡಿಗ್ರಿ ಕೋನಕ್ಕೆ ಸೂಕ್ತ ಆಗಿದೆ. ಚಂದ್ರನ ಮೇಲೆ ನೂರು ಮೀಟರ್ ಎತ್ತರದಲ್ಲಿದ್ದಾಗ ಇಳಿಯುವ ಪ್ರಕ್ರಿಯೆ ಆರಂಭವಾಗುತ್ತದೆ. ಕಳೆದ ಚಂದ್ರಯಾನ 2 ನಲ್ಲಿ ಇದೇ ಹಂತದಲ್ಲಿ ಇಸ್ರೋ ವೈಫಲ್ಯ ಆಗಿತ್ತು.

ನಾವು ಅಂದುಕೊಂಡಂತೆ ರಾಕೆಟ್ ಉಡಾವಣೆ ಆದಾಗಿನಿಂದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಸೇರಿದಂತೆ ಒಟ್ಟಾರೆ ಎಲ್ಲ ಪ್ರಕ್ರಿಯೆಗಳು ಎಂಜಿನ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ಅದೇ ರೀತಿ ಗುರಿಯಂತೆ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಮೃಧುವಾಗಿ ಈ ವಿಕ್ರಮ್ ಲ್ಯಾಂಡರ್ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್ ಮಾಹಿತಿ ನೀಡಿದ್ದಾರೆ.

Chandrayaan-3 Vikram Lander Soft Will Landing On South Side Of Moon On August 23rd

ಯಶಸ್ವಿ ಆಗಿಯೇ ತೀರುತ್ತದೆ: ದೃಢ ವಿಶ್ವಾಸ

ಈ ಬಾರಿಯ ಚಂದ್ರಯಾನ 3 ಚಂದ್ರಯಾನ ಯಶಸ್ವಿ ಆಗದಂತಹ ಸ್ಥಿತಿ ಬರುವುದು ತೀರಾ ಕಡಿಮೆ. ಸಣ್ಣ ಪುಟ್ಟ ಸಮಸ್ಯೆಗಳು ಬರದಂತೆ ನೋಡಿಕೊಂಡಿದ್ದೇವೆ. ಆರಂಭಿಕ ಹಂತವನ್ನು ಸಾಧಿಸಿದಂತೆ ಅಂತಿಮ ಹಂತದಲ್ಲಿಯೂ ನಾವು ಯಶಸ್ಸು ಹೊಂದಲಿದ್ದೇವೆ. ಅತ್ಯುತ್ತಮ ಸಿದ್ಧತೆಗಳೊಂದಿಗೆ ನಾವು ಕಾರ್ಯ ನಿರತರಾಇದ್ದೇವೆ. ಈ ಹಿನ್ನೆಲೆಯಲ್ಲಿ ಚಂದ್ರಯಾನ-3 ಯಶಸ್ವಿಯಾಗಲಿದೆ ಎಂದು ಖಗೋಳ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಡೈರೆಕ್ಟರ್ ಅನ್ನಪೂರ್ಣಿ ಸುಬ್ರಮಣಿಯನ್ ದೃಢ ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+