Chandrayaan-3: ಚಂದ್ರನ ಮೇಲೆ ಇಳಿಯಲು ಭಾರತದ ನೌಕೆ ಸಜ್ಜು!

ಹಾಲಿನಂತೆ ಬೆಳದಿಂಗಳ ಹರಿಸುವ ಚಂದ್ರನ ಮೈಮೇಲೆ ಭಾರತದ ಮೊದಲ ಗುರುತು ಕೆಲ ದಿನದಲ್ಲಿ ಮೂಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ, ಕ್ಷಣಕ್ಷಣಕ್ಕೂ ಭಾರತ ಚಂದ್ರನಿಗೆ ಹತ್ತಿರವಾಗುತ್ತಿದೆ. 'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಚಂದ್ರನಿಗೆ ಕೇವಲ 1,437 ಕಿಮೀ ದೂರದಲ್ಲಿದ್ದು, ಇನ್ನೇನು ಕೆಲ ದಿನದಲ್ಲಿ ತನ್ನ ಗುರಿ ತಲಪಲಿದೆ ಇಸ್ರೋ.

ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ 'ಚಂದ್ರಯಾನ-3' ಲಾಂಚ್ ಆಗಿತ್ತು. ಬಳಿಕ ಭೂಮಿ ಕಕ್ಷೆಯಿಂದ ಒಂದೊಂದೇ ಹಂತದಲ್ಲಿ ಚಂದ್ರಯಾನ-3 ನೌಕೆ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿತ್ತು. ಇದೀಗ ಚಂದ್ರನ ಸಮೀಪ ಇಸ್ರೋ ನೌಕೆ ಸಾಗುತ್ತಿದ್ದಂತೆ ಕಕ್ಷೆ ಬದಲಿಸುವ ಕಾರ್ಯ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ಕೂಡ ಅದೇ ಕಾರ್ಯದಲ್ಲಿ ಇಸ್ರೋ ಯಶಸ್ವಿಯಾಗಿದೆ. ಆ ಮೂಲಕ ಚಂದ್ರನಿಗೆ ನಮ್ಮ ಇಸ್ರೋ ಉಡಾಯಿಸಿದ್ದ 'ಚಂದ್ರಯಾನ-3' ನೌಕೆ ಇನ್ನಷ್ಟು ಹತ್ತಿರವಾಗಿದೆ. ಶತಕೋಟಿ ಭಾರತೀಯ ಹೃದಯಗಳ ಕನಸು ನನಸಾಗುವ ಸಮಯ ಬಂದುಬಿಟ್ಟಿದೆ.

Chandrayaan-3 passed another orbit of Moon

ಎಲ್ಲಿದೆ 'ಚಂದ್ರಯಾನ-3' ಬಾಹ್ಯಾಕಾಶ ನೌಕೆ?

ಇಂದು ಕಕ್ಷೆ ಬದಲಿಸುವ ಕಾರ್ಯ ಯಶಸ್ವಿಯಾದ ನಂತರ ಚಂದ್ರಯಾನ ಬಹುತೇಕ ತನ್ನ ಗುರಿ ತಲುಪಿದಂತಾಗಿದೆ. ಅಲ್ಲದೆ ನೌಕೆಯ ಆರೋಗ್ಯ ಕೂಡ ಉತ್ತಮವಾಗಿದ್ದು, ಮುಂದಿನ ಕಠಿಣ ಪರೀಕ್ಷೆಗೆ ಸಜ್ಜಾಗಿದೆ. ಇದೀಗ ಚಂದ್ರನ ಮೇಲ್ಮೈನ 174 x 1437 ಕಿಮೀ ಕಕ್ಷೆಗೆ ಎಂಟ್ರಿ ಕೊಟ್ಟಿದೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ. ಮುಂದಿನ ಕಕ್ಷೆ ಬದಲಾಯಿಸುವ ಕಾರ್ಯ ಆಗಸ್ಟ್ 14 ರಂದು 11:30 ಮತ್ತು 12:30ರ ನಡುವೆ ನಡೆಯಲಿದೆ. ಹೀಗಾಗಿ ತನ್ನ ಮುಂದಿನ ಮಹತ್ವದ ಕಾರ್ಯಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ಹಗಲು, ರಾತ್ರಿ ನೌಕೆಯನ್ನ ಕಾಯುತ್ತಿದೆ ಇಸ್ರೋ ಸಂಸ್ಥೆ.

ಭಾರತದ ಸಾಧನೆಗೆ ಜಗತ್ತಿನ ಶ್ಲಾಘನೆ

ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ.

Chandrayaan-3 passed another orbit of Moon

ಭಾರತದ ಈ ಮಹತ್ವದ ಯೋಜನೆ ಕ್ಷಣಕ್ಷಣಕ್ಕೂ ಅಂತಿಮ ಹಂತಕ್ಕೆ ಹತ್ತಿರವಾಗ್ತಿದೆ. ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಈ ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತಲೂ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಇಂದು ಅಧಿಕೃತವಾಗಿ ಚಂದ್ರನ ಕಕ್ಷೆಗೆ ಎಂಟ್ರಿ ಕೊಟ್ಟಿರುವ ಇಸ್ರೋ ನೌಕೆ ಇನ್ನೇನು ತನ್ನ ಕೆಲಸದಲ್ಲಿ ನಿರತವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+