Get Updates
Get notified of breaking news, exclusive insights, and must-see stories!

Chandrayaan 3 Landing Live: ಚಂದ್ರಯಾನ-3 ಸಕ್ಸಸ್: ವಿಕ್ರಂನಿಂದ ಮೂರುವರೆ ಗಂಟೆಗಳ ಬಳಿಕ ಪ್ರಗ್ಯಾನ್ ರೋವರ್ ಹೊರಕ್ಕೆ

ಚಂದ್ರನ ಮೇಲೆ ಗಗನ ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿದೆ. ಇಸ್ರೋ ವಿಜ್ಞಾನಿಗಳು ಹಗಲಿರುಳು ಪಟ್ಟ ಶ್ರಮಕ್ಕೆ ತಕ್ಕ ಫಲ ಇಂದು ಸಿಕ್ಕಿದೆ. ಇದರಿಂದಾಗಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ದೇಶದ ಸಹಸ್ರ ಜನರ ಪ್ರಾರ್ಥನೆ ಫಲಿಸಿದೆ. ಇನ್ನೂ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್‌ನಿಂದ ಯಶಸ್ವಿಯಾಗಿ ಪ್ರಗ್ಯಾನ್ ರೋವರ್ ಹೊರಬರಬೇಕಿದೆ. ಚಂದ್ರಯಾನ 3 ಲ್ಯಾಂಡಿಂಗ್ ಕುರಿತು ಇತ್ತೀಚಿನ ನವೀಕರಣಗಳಿಗಾಗಿ ಇಲ್ಲಿ ವೀಕ್ಷಿಸಿ.

Chandrayaan 3 Landing Live

Aug 24, 2023, 11:09 am IST

Chandrayaan 3 Landing Live
ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Aug 24, 2023, 8:38 am IST

ಚಂದ್ರಯಾನ 3 ಯಶಸ್ವಿ; ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ ದ್ರೌಪದಿ ಮುರ್ಮು

ಪ್ರಗ್ಯಾನ್-ರೋವರ್ ಅನ್ನು ಯಶಸ್ವಿಯಾಗಿ ನಿಯೋಜಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಇಸ್ರೋ ತಂಡವನ್ನು ಮತ್ತು ಎಲ್ಲಾ ಸಹ ನಾಗರಿಕರನ್ನು ಅಭಿನಂದಿಸುತ್ತೇನೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. ವಿಕ್ರಮ್ ಲ್ಯಾಂಡಿಂಗ್ ಆದ ಕೆಲವೇ ಗಂಟೆಗಳ ನಂತರ ಚಂದ್ರಯಾನ 3 ರ ಮತ್ತೊಂದು ಹಂತದ ಯಶಸ್ಸನ್ನು ಗುರುತಿಸಲಾಗಿದೆ.
Aug 24, 2023, 7:55 am IST

ಚಂದ್ರಯಾನ-3: ಭಾರತವನ್ನು ಶ್ಲಾಘಿಸಿದ ಅಮೆರಿಕ

ಅಮೆರಿಕದ ರಾಜಕಾರಣಿಗಳು, ಪತ್ರಿಕೆಗಳು ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಚಂದ್ರಯಾನ-3 ರ ಯಶಸ್ವಿ ಚಂದ್ರನ ಲ್ಯಾಂಡಿಂಗ್‌ನಲ್ಲಿ ಭಾರತವನ್ನು ಬುಧವಾರ ಶ್ಲಾಘಿಸಿದೆ. ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ರೋವರ್ ಅನ್ನು ಹೊಂದಿರುವ ಗಣ್ಯ ಗುಂಪಿನಲ್ಲಿ ಮೊದಲ ದೇಶವಾಗಿದೆ.
Aug 24, 2023, 7:55 am IST

ಜೋಹಾನ್ಸ್‌ಬರ್ಗ್‌ನಲ್ಲಿ ಬುಧವಾರ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಔತಣಕೂಟದಲ್ಲಿ, ಚಂದ್ರಯಾನ-3 ರ ಯಶಸ್ಸಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಹಲವಾರು ವಿಶ್ವ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.
Aug 24, 2023, 7:54 am IST

ಚಂದ್ರಯಾನ-3 ಅನ್ನು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಸಿದ ನಂತರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿತು.
Aug 23, 2023, 11:15 pm IST

ಇಸ್ರೋಗೆ ಯುಎಸ್‌ ರಾಯಭಾರಿ ಅಭಿನಂದನೆ

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಮತ್ತು ವಿಜ್ಞಾನಿಗಳ ತಂಡಕ್ಕೆ ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಅಭಿನಂದಿಸಿದ್ದಾರೆ. ಸಾಮಾಜಿಕ ಮಾಧ್ಯಮ 'X' ನಲ್ಲಿ ಪೋಸ್ಟ್ ಮಾಡಿ ಶುಭಾಶಯ ಕೋರಿದ್ದಾರೆ. USIndiaSpace ಸಹಯೋಗಕ್ಕಾಗಿ ನಾನು ಮುಂದೆ ರೋಮಾಂಚಕಾರಿ ಅವಕಾಶಗಳನ್ನು ನೋಡಬಹುದು ಎನ್ನುವ ಮೂಲಕ ಭಾರತ ಜೊತೆಗೆ ಯುಎಸ್ ಬಾಹ್ಯಾಕಾಶ ಸಹಯೋಗ ಸಾಧ್ಯತೆಗಳನ್ನು ಅವರು ಬಹಿರಂಗಪಡಿಸಿದ್ದಾರೆ.
Aug 23, 2023, 11:02 pm IST

ಲ್ಯಾಂಡರ್‌ನಿಂದ ಹೊರ ಬಂದ ರೋವರ್ ಪ್ರಗ್ಯಾನ್

ಚಂದ್ರಯಾನ 3 ಯಶಸ್ವಿ ಹಂತದ ಕೊನೆಯ ಭಾಗವಾಗಿ ಲ್ಯಾಂಡರ್‌ನಿಂದ ರೋವರ್ ಪ್ರಗ್ಯಾನ್ ಯಶಸ್ವಿಯಾಗಿ ಹೊರ ಬಂದಿದೆ. ಮುಂದಿನ ಭೂಮಿಯ 14 ದಿನ ಹಾಗೂ ಚಂದ್ರ ಒಂದು ದಿನ ಕಾರ್ಯಾಚರಣೆ ಆರಂಭಿಸಲಿದೆ. ಚಂದ್ರನ ಮೇಲ್ಮೈ, ನೀರು, ಕಿರಣಗಳಲ್ಲಿನ ಬದಲಾವಣೆ ಸೇರಿದಂತೆ ಹತ್ತು ಹಲವು ವಿಷಯಗಳ ಮೇಲೆ ಅಧ್ಯಯನ ಮಾಡಲಿದೆ ಎಂದು ತಿಳಿಸಿದೆ. ಈಗಾಗಲೇ ಪ್ರಗ್ಯಾನ್ ಕೆಲವು ಚಿತ್ರಗಳನ್ನು ಇಸ್ರೋಗೆ ಕಳುಹಿಸಿದೆ.
Aug 23, 2023, 10:28 pm IST

ಚಂದ್ರ ಆಯ್ತು ಈಗ ಸೂರ್ಯನತ್ತ ಆದಿತ್ಯ ಎಲ್ 1

ಚಂದ್ರ ಆಯ್ತು ಈಗ ಸೂರ್ಯನತ್ತ ಆದಿತ್ಯ ಎಲ್ 1
ಚಂದ್ರನ ಮೇಲೆ ಕಾಲಿಡುತ್ತಿದ್ದಂತೆ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ-ಎಲ್1 ಮಿಷನ್ ಅನ್ನು ಮುಂದಿನ ತಿಂಗಳು ಉಡಾವಣೆ ಮಾಡಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ವಿಕ್ರಮ್ ಲ್ಯಾಂಡರ್‌ ಲ್ಯಾಂಡ್ ಆಗುತ್ತಿದ್ದಂತೆ ಮಾತನಾಡಿ ಅವರು ಅಧಿಕೃತ ಮಾಹಿತಿ ನೀಡಿದರು.
Aug 23, 2023, 10:17 pm IST

ಚಂದ್ರಯಾನ-3: ಎಂಪಿ ಕಪಿಲ್ ಸಿಬಲ್ ಪ್ರತಿಕ್ರಿಯೆ

ಚಂದ್ರಯಾನ 3 ಯಶಸ್ಸು ಇಸ್ರೋಗೆ ಮಾತ್ರವಲ್ಲ, ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಐತಿಹಾಸಿಕ ಕ್ಷಣವಾಗಿದೆ. ಇದು ವರ್ಷಗಳು ಮತ್ತು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ಕ್ಷಣ. ಇದು ಭಾರತದ ವಿಜ್ಞಾನಿಗಳಿಗೆ ಮತ್ತು ಭಾರತದ ಪ್ರತಿಯೊಬ್ಬರಿಗೂ ಇದು ಒಂದು ಹೆಗ್ಗುರುತು ಸಾಧನೆ ಮತ್ತು ಸ್ಫೂರ್ತಿ ಆಗಿದೆ. ಸ್ವಾತಂತ್ರ್ಯದ ನಂತರ ಸ್ಥಾಪಿಸಲಾದ ನಮ್ಮ ಸಂಸ್ಥೆಯು ಈಗ ಇಸ್ರೋವನ್ನು ಪ್ರಮುಖ ಸಂಸ್ಥೆಯಾಗಿ ಗುರುತಿಸುವಷ್ಟು ಅಸಾಧಾರಣ ಎತ್ತರವನ್ನು ತಲುಪಿದೆ ಮತ್ತು ಆದ್ದರಿಂದ ಚಂದ್ರಯಾನ-3 ಚಂದ್ರನ ಮೇಲೆ ಇಳಿದುದಕ್ಕಾಗಿ ನಾನು ಚಂದ್ರನ ಮೇಲೆ ಇದ್ದೇನೆ... ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹರ್ಷ ವ್ಯಕ್ತಪಡಿಸಿದರು.
Aug 23, 2023, 10:10 pm IST

ಲ್ಯಾಂಡರ್‌ನಿಂದ ರೋವರ್ ಹೊರ ಬರುವ ದೃಶ್ಯ

ಚಂದ್ರಯಾನ 3 ವಿಕ್ರಮ ಲ್ಯಾಂಡರ್‌ ಲ್ಯಾಂಡ್ ಆದ ಬಳಿಕ ರಾಂಪ್‌ನಲ್ಲಿ ಲ್ಯಾಂಡರ್‌ನಿಂದ ರೋವರ್ ಹೊರಬರುತ್ತಿರುವ ಮೊದಲ ಫೋಟೋ ಇದಾಗಿದೆ.
Aug 23, 2023, 10:06 pm IST

ಚಂದ್ರಯಾನ-3: ಲ್ಯಾಂಡಿಂಗ್ ಬಳಿಕ ಸೆರೆಯಾದ ಮೊದಲ ಚಿತ್ರ

ಚಂದ್ರಯಾನ-3: ಲ್ಯಾಂಡಿಂಗ್ ಬಳಿಕ ಸೆರೆಯಾದ ಮೊದಲ ಚಿತ್ರ
ಚಂದ್ರಯಾನ-3ದ ವಿಕ್ರಮ್ ಲ್ಯಾಂಡರ್ ಸುಸೂತ್ರವಾಗಿ ಲ್ಯಾಂಡಿಂಗ್ ಆದ ಬಳಿಕ ಚಂದ್ರನ ಮೇಲ್ಮೈನ ಮೂಲದ ಫೋಟೊವನ್ನು ಭೂಮಿಗೆ ರವಾನಿಸಿದೆ. ಈ ಫೋಟೊದಲ್ಲಿ ಲ್ಯಾಂಡಿಂಗ್ ಸೈಟ್‌ನ ಒಂದು ಭಾಗವನ್ನು ತೋರಿಸುತ್ತದೆ. ರೋವರ್‌ನ ಒಂದು ಕಾಲು ಮತ್ತು ಅದರ ಜೊತೆಗಿರುವ ನೆರಳು ಕೂಡ ಸಹ ಫೋಟೊದಲ್ಲಿ ಕಾಣಿಸುತ್ತದೆ. ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿತ್ತು. ಅದರ ಮೊದಲ ಫೋಟೊ ಇದಾಗಿದೆ ಎಂದು ಇಸ್ರೋ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
Aug 23, 2023, 10:03 pm IST

ವಿಕ್ರಂ ಲ್ಯಾಂಡಿಂಗ್ ವೀಕ್ಷಿಸಿದ ದ್ರೌಪದಿ ಮುರ್ಮು

ಅಧ್ಯಕ್ಷೆ ದ್ರೌಪದಿ ಮುರ್ಮು ಇಸ್ರೋದ ಮೂರನೇ ಚಂದ್ರಯಾನ-3 ರ ಐತಿಹಾಸಿಕ ಲ್ಯಾಂಡಿಂಗ್ ಅನ್ನು ವೀಕ್ಷಿಸಿದರು.
Aug 23, 2023, 9:30 pm IST

ಇಸ್ರೋ ಮುಖ್ಯಸ್ಥ ಸೋಮನಾಥ್ ಸೇರಿದಂತೆ ವಿಜ್ಞಾನಿಗಳ ಸಂಭ್ರಮ
Aug 23, 2023, 9:29 pm IST

ಚಂದ್ರಯಾನ 3 ಯಶಸ್ಸಿಗೆ ನಟ ರಜನಿಕಾಂತ್ ಅಭಿನಂದನೆ

ಚಂದ್ರಯಾನ 3 ಯಶಸ್ಸಿಗೆ ನಟ ರಜನಿಕಾಂತ್ ಅಭಿನಂದನೆ
Aug 23, 2023, 9:11 pm IST

ಚಂದ್ರಯಾನ-3 ಸಕ್ಸಸ್: ಎಸ್ ಸೋಮನಾಥ್‌ಗೆ ಪ್ರಧಾನಿಯಿಂದ ಕರೆ

ಚಂದ್ರಯಾನ-3 ಯಶಸ್ಸಿನ ನಂತರ ದಕ್ಷಿಣ ಆಫ್ರಿಕಾದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.
Aug 23, 2023, 8:44 pm IST

ವಿಕ್ರಮ್ ಚಂದ್ರಯಾನ-2 ಗಿಂತ ಎಷ್ಟು ಭಿನ್ನವಾಗಿದೆ?

ಹಿಂದಿನ ತಪ್ಪುಗಳಿಂದ ಪಾಠ ಕಲಿತ ಇಸ್ರೋ ಅದನ್ನು ಮರುಕಳಿಸದಂತೆ ಚಂದ್ರಯಾನ-3 ರಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ವಿಕ್ರಮ್ ಲ್ಯಾಂಡರ್ ಗೆ ಹಿಂದಿಗಿಂತ ಬಲವಾದ ಕಾಲುಗಳನ್ನು ಸಿದ್ದಪಡಿಸಲಾಗಿತ್ತು. ಮಾತ್ರವಲ್ಲದೆ ಇದು ಮೊದಲಿಗಿಂತ ಹೆಚ್ಚಿನ ವೇಗದಲ್ಲಿ ಲ್ಯಾಂಡಿಂಗ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
Aug 23, 2023, 8:40 pm IST

ಚಂದ್ರಯಾನ-3 ಲ್ಯಾಂಡ್ ಬಳಿಕ ಮೊದಲ ಚಿತ್ರ ಬಿಡುಗಡೆ

ಚಂದ್ರಯಾನ-3 ಲ್ಯಾಂಡ್ ಬಳಿಕ ಅದರ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ತೆಗೆದ ಚಂದ್ರನ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ. CH-3 ಲ್ಯಾಂಡರ್ ಮತ್ತು ಬೆಂಗಳೂರಿನ MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಇಸ್ರೋ ಹೇಳಿದೆ.
Aug 23, 2023, 8:33 pm IST

ವಿಕ್ರಮ್‌ನ ಹೊಟ್ಟೆಯಲ್ಲಿ ಪ್ರಗ್ಯಾನ್ ರೋವರ್

ವಿಕ್ರಮ್‌ನ ಹೊಟ್ಟೆಯಲ್ಲಿ ಪ್ರಗ್ಯಾನ್ ರೋವರ್ ಇದೆ. ಚಂದ್ರನ ಮೇಲೆ ಇಳಿದ ನಂತರ ಸ್ವಲ್ಪ ಹೊತ್ತು ಹೆಚ್ಚು ಧೂಳು ಇರುತ್ತದೆ. ಹೀಗಾಗಿ ಪ್ರಗ್ಯಾನ್ ವಿಕ್ರಮ್ ಲ್ಯಾಂಡರ್‌ನಿಂದ ಹೊರಬರುವುದಿಲ್ಲ. ನಾಲ್ಕು ಗಂಟೆಗಳ ನಂತರ ಅದು ಹೊರಬರಲಿದೆ. ಧೂಳು ಕಡಿಮೆಯಾಗುತ್ತಿದ್ದಂತೆ ವಿಕ್ರಂ ಒಳಗಿರುವ ಪ್ರಗ್ಯಾನ್ ರೋವರ್ ಹೊರಬರಲಿದೆ. ಆರು ಚಕ್ರಗಳ ವಾಹನ ಇದಾಗಿದೆ. ರೋವರ್‌ನ ವೇಗವನ್ನು ಸಹ ವಿಕ್ರಮ್ ಮೂಲಕ ನಿಯಂತ್ರಿಸಲಾಗುತ್ತದೆ. ಪ್ರಗ್ಯಾನ್ ಪ್ರತಿ ಸೆಕೆಂಡಿಗೆ 1 ಸೆಂಟಿಮೀಟರ್ ವೇಗದಲ್ಲಿ ಇಳಿಯುತ್ತದೆ ಮತ್ತು ನ್ಯಾವಿಗೇಷನ್ ಕ್ಯಾಮೆರಾದ ಸಹಾಯದಿಂದ ಅದು ಮುಂದಿನ ಪ್ರಯಾಣಕ್ಕೆ ಸ್ಥಳವನ್ನು ಕಂಡುಕೊಳ್ಳುತ್ತದೆ.
Aug 23, 2023, 8:30 pm IST

ರೋವರ್ ಕೆಲಸ ಮಾಡಿದರೆ, ವಿಕ್ರಮ್ ಏನು ಮಾಡುತ್ತದೆ?

ವಾಸ್ತವವಾಗಿ ನಿಜವಾದ ಕೆಲಸವನ್ನು ಲ್ಯಾಂಡರ್ ಮೂಲಕ ಮಾಡಲಾಗುತ್ತದೆ. ಆದರೆ ಲ್ಯಾಂಡರ್ ಲ್ಯಾಂಡಿಂಗ್ ಸ್ಥಳದಿಂದ ಚಲಿಸುವುದಿಲ್ಲ. ರೋವರ್ 'ಪ್ರಗ್ಯಾನ್' ಚಂದ್ರನ ಮೇಲ್ಮೈಯಲ್ಲಿ ಎಲ್ಲಾ ಚಲನೆಯನ್ನು ಮಾಡುತ್ತದೆ ಮತ್ತು ಅದು ಹಾದುಹೋಗುವ ಸ್ಥಳದಿಂದ ಡೇಟಾವನ್ನು ಸಂಗ್ರಹಿಸುತ್ತದೆ. ರೋವರ್ ಈ ಡೇಟಾವನ್ನು ಲ್ಯಾಂಡರ್‌ಗೆ ತಿಳಿಸುತ್ತದೆ, ಲ್ಯಾಂಡರ್‌ ಅದನ್ನು ಭೂಮಿಗೆ ಕಳುಹಿಸುತ್ತದೆ.
Aug 23, 2023, 8:30 pm IST

ಚಂದ್ರಯಾನ-3: ನಿಜವಾದ ಕಾರ್ಯ ಈಗ ಶುರು

ಇಂದು ಚಂದ್ರನ ಮೇಲೆ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದೆ. ಹಾಗಂತ ಎಲ್ಲಾ ಕೆಲಸ ಪೂರ್ಣಗೊಂಡಿವೆ ಎಂಬ ಅರ್ಥವಲ್ಲ. ವಿಕ್ರಂ ಲ್ಯಾಂಡರ್ ಒಳಗಿರುವ ಪ್ರಗ್ಯಾನ್ ರೋವರ್ ಅದರಿಂದ ಹೊರಬರಬೇಕಿದೆ. ಈ ಪ್ರಗ್ಯಾನ್ ರೋವರ್ 14 ದಿನಗಳವರೆಗೆ ಚಂದ್ರನ ಮೇಲೆ ಸಂಶೋದನೆ ನಡೆಸಲಿದೆ.
Aug 23, 2023, 8:14 pm IST

ಚಂದ್ರಯಾನ 3 ಯಶಸ್ವಿ; ಇಸ್ರೋ ಸಂಸ್ಥೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿನಂದನೆ

"ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟಿದೆ. ಆ ಮೂಲಕ ಚಂದ್ರಗ್ರಹದ ಮೇಲೆ ಭಾರತದ ಹೆಗ್ಗುರುತು ಮೂಡಿದೆ. ಇದಕ್ಕಾಗಿ ಅವಿರತ ಶ್ರಮಿಸಿದ ಇಸ್ರೋ ಸಂಸ್ಥೆಗೆ ಶುಭಾಶಯಗಳು. ಇಸ್ರೋ ಸಂಸ್ಥೆ ಈವರೆಗೂ ಮೂರು ಚಂದ್ರಯಾನ ಯೋಜನೆ ಯಶಸ್ವಿಗೊಳಿಸಿರುವುದು ದೊಡ್ಡ ಸಾಧನೆಯೇ ಸರಿ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿರುವುದು ಇಡೀ ದೇಶವೇ ಹೆಮ್ಮೆಪಡುವ ವಿಚಾರ. ಈ ಯೋಜನೆ ಯಶಸ್ಸಿನ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ'' ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ.
Aug 23, 2023, 7:53 pm IST

'ಇಸ್ರೋಗೆ ಧನ್ಯವಾದಗಳು' ಸಿಎಂ ಸಿದ್ದರಾಮಯ್ಯ ಟ್ವೀಟ್

'ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡೆ. ಇಸ್ರೋ ವಿಜ್ಞಾನಿಗಳ ದಶಕಗಳ ಪರಿಶ್ರಮವು ನನ್ನಂತ ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದೆ. ಚಂದ್ರನ ಮೇಲೆ ಭಾರತದ ಪತಾಕೆ ಹಾರಿಸಿ ದೇಶವಾಸಿಗಳು ಹೆಮ್ಮೆಪಡುವಂತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಧನ್ಯವಾದಗಳು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Aug 23, 2023, 7:35 pm IST

ಭಾರತಕ್ಕೆ ಅಭಿನಂದನೆಗಳು ತಿಳಿಸಿದ ಬಿಲ್ ನೆಲ್ಸನ್

"ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗೆ ಅಭಿನಂದನೆಗಳು ಮತ್ತು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ 4 ನೇ ದೇಶವಾಗಿರುವ ಭಾರತಕ್ಕೆ ಅಭಿನಂದನೆಗಳು. ಈ ಕಾರ್ಯಾಚರಣೆಯಲ್ಲಿ ನಿಮ್ಮ ಪಾಲುದಾರರಾಗಲು ನಮಗೆ ಸಂತೋಷವಾಗಿದೆ" ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಟ್ವೀಟ್ ಮಾಡಿದ್ದಾರೆ.
Aug 23, 2023, 7:28 pm IST

ಚಂದ್ರಯಾನ-3 ಯಶಸ್ವಿ: CRPF ಯೋಧರ ಸಂಭ್ರಮ

J&K: ಇಸ್ರೋದ ಮೂರನೇ ಚಂದ್ರಯಾನ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗುತ್ತಿದ್ದಂತೆ ಜಮ್ಮುವಿನಲ್ಲಿ CRPF ಯೋಧರು ಸಂಭ್ರಮಿಸಿದರು ಮತ್ತು 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗಿದರು.
Aug 23, 2023, 7:28 pm IST

ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸೇಫ್ ಆಗಿ ಲ್ಯಾಂಡಿಗ್ ಆಗುತ್ತಿದ್ದಂತೆಯೇ ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದ್ದಾರೆ.
Aug 23, 2023, 7:28 pm IST

ವಿಕ್ರಂನಿಂದ ಮೂರುವರೆ ಗಂಟೆಗಳ ಬಳಿಕ ರೋವರ್ ಹೊರಕ್ಕೆ

ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ಆದರೆ ಅದರೊಳಗೆ ಇರುವ ರೋವರ್ ಹೊರಬರಲು ಕೆಲ ಗಂಟೆಗಳ ಸಮಯ ತೆಗೆದುಕೊಳ್ಳಲಿದೆ. ಮೂರುವರೆ ಗಂಟೆಗಳ ಬಳಿಕ ರೋವರ್ ಹೊರಬರಲಿದೆ. ವಿಕ್ರಂ ಲ್ಯಾಂಡ್‌ನಿಂದಾಗಿ ಚಂದ್ರನ ಮೇಲೆ ಧೂಳು ಹೆಚ್ಚಾಗಿದ್ದು, ಅದು ಕಡಿಮೆ ಆದ ಬಳಿಕ ರೋವರ್ ನೆಲಕ್ಕೆ ಇಳಿಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
Aug 23, 2023, 7:27 pm IST

ಚಂದ್ರಯಾನ-3: ಕೇಕ್ ಕತ್ತರಿಸಿ ಸಂಭ್ರಮಿಸಿದ ಕೇಂದ್ರ ಸಚಿವ

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲ್ಮೈಗೆ ಇಳಿಯುತ್ತಿದ್ದಂತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
Aug 23, 2023, 7:05 pm IST

Chandrayaan 3 Landing Live
ಚಂದಿರನ ಮೇಲೆ ವಿಕ್ರಂ ಲ್ಯಾಂಡಿಂಗ್ ವೀಕ್ಷಿಸಿದ ಸಿಎಂ
Aug 23, 2023, 6:59 pm IST

ಚಂದ್ರಯಾನ ಲ್ಯಾಂಡಿಂಗ್ ವೀಕ್ಷಿಸಿದ ಉತ್ತರಾದಿ ಮಠದ ಶ್ರೀಗಳು

Chandrayaan 3 Landing Live
ಹೊಳೆಹೊನ್ನೂರಿನಲ್ಲಿ ಉತ್ತರಾದಿ ಮಠದ ಶ್ರೀಗಳಾದ ಸತ್ಯತ್ಮಾತೀರ್ಥರು ಮತ್ತು ಶಿಷ್ಯವೃಂದದಿಂದ ಚಂದ್ರಯಾನ ಲ್ಯಾಂಡಿಂಗ್ ವೀಕ್ಷಣೆ ಮಾಡಿದರು.
Aug 23, 2023, 6:54 pm IST

ಚಂದ್ರನ ಮೇಲೆ ತಿರಂಗ- ಸಿಎಂ ಮನೋಹರ್ ಲಾಲ್ ಖಟ್ಟರ್

"ಚಂದ್ರನು ನಮಗೆ ಹೆಚ್ಚು ಹತ್ತಿರವಾಗಿದ್ದಾನೆ. ತಿರಂಗ ಚಂದ್ರನ ಮೇಲೆ ಹಾರುವುದು ಸಂತೋಷದ ಕ್ಷಣವಾಗಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನಂತರ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಭಾರತದ ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಈ ಮಹತ್ತರವಾದ ಸಂದರ್ಭದಲ್ಲಿ ನಾನು ಇಸ್ರೋ ಮತ್ತು ಅದರ ವಿಜ್ಞಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಏಕೆಂದರೆ ಅವರ ಕೌಶಲ್ಯ, ಧೈರ್ಯ ಮತ್ತು ಪ್ರತಿಭೆಯಿಂದಾಗಿ ನಾವು ಈ ಸಾಧನೆಯನ್ನು ಮಾಡಿದ್ದೇವೆ...," ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+