ಚಂದ್ರಯಾನ-3 ಕ್ಲೈಮ್ಯಾಕ್ಸ್ : ಹೇಗಿರಲಿದೆ ಲ್ಯಾಂಡಿಂಗ್‌ನ ಕೊನೆ ಕ್ಷಣಗಳು?
ಹೊಸದಿಲ್ಲಿ, ಆಗಸ್ಟ್ 23: ವಿಶ್ವಾದ್ಯತಂತ ಭಾರಿ ಕುತೂಹಲ ಮೂಡಿಸಿರುವ ಭಾರತದ ಮಹತ್ವಾಕಾಂಕ್ಷೆಯ 'ಚಂದ್ರಯಾನ-3'. ಬಾಹ್ಯಕಾಶ ಲೋಕದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ.
ಚಂದ್ರಯಾನ -3 ಯೋಜನೆಯ ಲ್ಯಾಂಡರ್ ಶಶಿಯ ಸ್ಪರ್ಶಕ್ಕೆ ರೆಡಿಯಾಗಿದೆ. ಇಂದು(ಗುರುವಾರ) ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ಲ್ಯಾಂಡರ್ ಲ್ಯಾಂಡ್ ಆಗಲು ಸಮಯ ನಿಗದಿ ಮಾಡಲಾಗಿದೆ. ಆದರೆ ಸಂಜೆ 5.45ಕ್ಕೆ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ಎಲ್ಲವೂ ಯೋಜನೆಯಂತೆ ನಡೆದರೆ, ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುತ್ತದೆ ಮತ್ತು ಯುಎಸ್, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.
ಇನ್ನೂ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್ ಲ್ಯಾಂಡರ್ ಮೂರು ಲಕ್ಷ 84 ಸಾವಿರ ಕಿಲೋ ಮೀಟರ್ ದೂರ ಇರುವ ಚಂದ್ರನ ಸಮೀಪಕ್ಕೆ ತಲುಪಿದೆ. ಇನ್ನು ಚಂದ್ರನ ಕಕ್ಷೆಗೆ ಸೇರಿದ ಬಳಿಕ ನೌಕೆ ಈವರೆಗೂ ಐದು ಬಾರಿ ಪ್ರದಕ್ಷಿಣೆ ಹಾಕಿದೆ. ಲ್ಯಾಂಡರ್ನಿಂದ ಪ್ರಗ್ಯಾನ್ ರೋವರ್ ಹೊರಬರುವ ಕ್ಷಣಗಣನೆ ಆರಂಭವಾಗಿದೆ
ಬೆಂಗಳೂರಲ್ಲೇ ಚಂದ್ರನ 3 ಕಮಾಂಡ್ ಸೆಂಟರ್ ಇದ್ದು, ವಿಕ್ರಮ್ ಲ್ಯಾಂಡರ್‌ಅನ್ನು ಬೆಂಗಳೂರಿನಿಂದಲೇ ಕಂಟ್ರೋಲ್ ಮಾಡಲಾಗುತ್ತೆ. ಚಂದ್ರನ ಮೇಲ್ಮೈನಿಂದ 25 ಕಿಲೋ ಮೀಟರ್ ಎತ್ತರದಲ್ಲಿದ್ದು, ವೇಗ ಕಡಿಮೆಯಾದ ಬೆನ್ನಲ್ಲೇ ಲ್ಯಾಂಡಿಂಗ್ ಪ್ರಕ್ರಿಯೆ ಶುರುವಾಗಲಿದೆ. ಅಲ್ಲದೇ ಕೊನೆಯ 20 ನಿಮಿಷದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, 20 ನಿಮಿಷವೇ ದೊಡ್ಡ ಸವಾಲಾಗಿದೆ.
ಚಂದ್ರಯಾನದ ಕೊನೆಯ 20 ರಿಂದ 17 ನಿಮಿಷಗಳು ಅತ್ಯಂತ ಸವಾಲಿನ ಸಮಯವಾಗಿದೆ. ಚಂದ್ರಯಾನ-2 ವೇಳೆ ಈ ಹಂತದಲ್ಲೇ ಲ್ಯಾಂಡರ್ ನಿಯಂತ್ರಣ ತಪ್ಪಿ ಚಂದ್ರನ ಮೇಲೆ ಕ್ರ್ಯಾಶ್ ಲ್ಯಾಂಡ್ ಆಗಿತ್ತು. ಹೀಗಾಗಿ ಚಂದ್ರಯಾನ 2 ಯೋಜನೆ ವಿಫಲಗೊಂಡಿತ್ತು. ಕಳೆದ ಬಾರಿಯ ದೋಷ ಈ ಬಾರಿ ಸಂಭವಿಸದಂತೆ, ಒಂದು ವೇಳೆ ಸಣ್ಣಪುಟ್ಟ ಸಮಸ್ಯೆಗಳು ಉಂಟಾದರೂ ಸುರಕ್ಷಿತವಾಗಿ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿಇಳಿಸಲು ಇಸ್ರೊ ಈ ಬಾರಿ ಎಲ್ಲಾ ರೀತಿಯಲ್ಲೂ ಪೂರ್ವಸಿದ್ಧತೆ ನಡೆಸಿದೆ.ಇನ್ನೂ ಚಂದ್ರಯಾನ-3 ಲ್ಯಾಂಡರ್ ಚಂದಿರನ ದಕ್ಷಿಣ ಧ್ರುವದಲ್ಲಿಇಳಿಯಲಿದೆ.
ಚಂದ್ರನ ಈ ಭಾಗದಲ್ಲಿ ಕಾಲಿರಿಸಲಿರುವ ವಿಶ್ವದ ಮೊದಲ ಲ್ಯಾಂಡರ್ ಇದಾಗಿದೆ. ಬಹುತೇಕ ಕಾಲ ಕತ್ತಲೆ ಇರುವ ದಕ್ಷಿಣ ಧ್ರುವದಲ್ಲಿಇದುವರೆಗೂ ಯಾರೂ ಸಂಶೋಧನೆ ನಡೆಸಿಲ್ಲ. ಈ ಭಾಗದಲ್ಲಿ ಘನ ರೂಪದಲ್ಲಿ ನೀರು ಇರುವ ಸಾಧ್ಯತೆಯೂ ಇದೆ. ಹೀಗಾಗಿ ಈ ಬಗ್ಗೆ ತಿಳಿಯಲು ದಕ್ಷಿಣ ಧ್ರುವದಲ್ಲೇ ನೌಕೆ ಇಳಿಸಲು ಇಸ್ರೊ ಯೋಜಿಸಿದೆ.
ಚಂದ್ರನ ಅಂಗಳದಿಂದ 30 ಕಿ.ಮೀ. ಎತ್ತರದಲ್ಲಿ ಸೆಕೆಂಡ್‌ಗೆ 1.68 ಕಿ.ಮೀ.ವೇಗದಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ಲ್ಯಾಂಡರ್ ಅನ್ನು ನಿಧಾನಗೊಳಿಸಿ ಚಂದ್ರನ ಅಂಗಳದತ್ತ ಕೊಂಡೊಯ್ಯಬೇಕು. ಅಲ್ಲದೇ ಸಮತಲ ಸ್ಥಿತಿಯಲ್ಲಿ ಸುತ್ತುತ್ತಿರುವ ಲ್ಯಾಂಡರ್ ಅನ್ನು ಕ್ರಮೇಣ ಲಂಬ ಸ್ಥಿತಿಗೆ ತಿರುಗಿಸುತ್ತಾ ಚಂದ್ರನ ಅಂಗಳದತ್ತ ರವಾನಿಸಬೇಕು.












Click it and Unblock the Notifications