Chandra Grahan 2026: ವರ್ಷದ ಮೊದಲ ಚಂದ್ರಗ್ರಹಣ: ಹೋಳಿ ಹುಣ್ಣಿಮೆಯಂದೇ ದೀರ್ಘಕಾಲದ ಗ್ರಹಣ; ಭಾರತದಲ್ಲಿ ಗೋಚರ ಸಮಯ
Chandra Grahan 2026: ಈ ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ ತಿಂಗಳ ಆರಂಭದಲ್ಲೇ ಸಂಭವಿಸಲಿದೆ. ಹೋಳಿ ಹುಣ್ಣಿಮೆ ದಿನ ಮಾರ್ಚ್ 3ರಂದು ಚಂದ್ರಗ್ರಹಣ ಸಂಭವಿಸಲಿದೆ. ದೀರ್ಘ ಸಮಯದ ಚಂದ್ರಗ್ರಹಣ ಇದಾಗಿದ್ದು, ಸಿಂಹ ಮತ್ತು ಫಾಲ್ಗುಣಿ ನಕ್ಷತ್ರ ಪುಂಜದಲ್ಲಿ ಜರುಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರನು ಸಿಂಹ ರಾಶಿಯಲ್ಲಿ ಬರುತ್ತದೆ. ಈ ರಾಶಿಯವರು ಹೆಚ್ಚು ಎಚ್ಚರಿಕೆ ವಹಿಸುವಂತೆಯೂ ಹೇಳಲಾಗಿದೆ. ಕಾಮ ದಹನವನ್ನು ಹೋಳಿ ಹುಣ್ಣಿಮೆ ಹಿಂದಿನ ದಿನ ಫಾಲ್ಗುಣಿ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕಾಮ ದಹನದ ಮಾಡಕೂಡದು ಅಂತಲೂ ಹೇಳಲಾಗಿದೆ. ಈ ಗ್ರಹಣ ಭಾರತದಲ್ಲಿ ಗೋಚಿಸುತ್ತದೆಯೇ? ಸಮಯ ಪೂರ್ಣ ಮಾಹಿತಿ ಇಲ್ಲಿದೆ.
2026ರ ಚಂದ್ರಗ್ರಹಣ ಸಮಯ ನೋಡುವುದಾದರೆ ಮಾರ್ಚ್ 3 ಮಂಗಳವಾರ ಮಧ್ಯಾಹ್ನ 3:20 ಕ್ಕೆ ಚಂದ್ರನಿಗೆ ಗ್ರಹಣ ಹಿಡಿಯಲು ಆರಂಭವಾಗುತ್ತದೆ. ಸಂಜೆ 6:47 ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಚಂದ್ರಗ್ರಹಣದ ಅವಧಿ 3 ಗಂಟೆ 27 ನಿಮಿಷಗಳಷ್ಟು ಸುದೀರ್ಘವಾಗಿರುತ್ತದೆ. ಒಟ್ಟು ಚಂದ್ರಗ್ರಹಣವು ಸಂಜೆ 4:34 ಕ್ಕೆ ಪ್ರಾರಂಭವಾಗುತ್ತದೆ.

ಭಾರತದಲ್ಲಿ ಚಂದ್ರಗ್ರಹಣ ಗೋಚರದ ಸಮಯ
ಭಾರತದಲ್ಲೂ ಚಂದ್ರಗ್ರಹಣವು ಗೋಚರಿಸುತ್ತದೆ. ಆ ದಿನ ಸಂಜೆ 6.22ಗಂಟೆಗೆ ಚಂದ್ರ ಗ್ರಹಣವನ್ನು ನೋಡಬಹುದಾಗಿದೆ. ಹುಣ್ಣಿಮೆ ಬೆಳದಿಂಗಳಲ್ಲಿ ಗೋಚರಿಸಲಿದೆ. ಸಂಜೆ 6:47ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದ ಪ್ರಕಾರ, ಭಾರತದಲ್ಲಿ ಚಂದ್ರಗ್ರಹಣವು ಕಡಿಮೆ ಸಮಯದವರೆಗೆ ಗೋಚರಿಸುತ್ತದೆ. ಒಟ್ಟು 25 ನಿಮಿಷಗಳಷ್ಟು ಕಾಲ ಚಂದ್ರನಿಗೆ ಗ್ರಹಣ ಹಿಡಿದಿರುವುದನ್ನು ಭಾರತೀಯರು ನೋಡಬಹುದಾಗಿದೆ. ಇದರಿಂದಾಗಿ ದೇಶದ ವಿವಿಧ ಕಡೆಗಳಲ್ಲಿ ಚಂದ್ರೋದಯದ ಸಮಯದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ.
ಈಗಾಗಲೇ ಚಂದ್ರನ ಪ್ರಭಾವದಲ್ಲಿರುವ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಎಚ್ಚರಿಕೆ ವಹಿಸಬೇಕು. ಮಾರ್ಚ್ ತಿಂಗಳು ಅವರ ಪಾಲಿಗೆ ಸವಾಲಿನ ತಿಂಗಳವಾಗಬಹುದೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಸಿಂಹ ರಾಶಿಯವರು ಎಚ್ಚರಿಕೆ ವಹಿಸುವಂತೆ ಜ್ಯೋತಿಷಿಗಳು ಶಿಫಾರಸು ಮಾಡಿದ್ದಾರೆ.
ಉದ್ಯೋಗ ಮತ್ತು ಹಣಸಿನ ವಿಚಾರದಲ್ಲಿ ಜಾಗೃತರಾಗಿರಿ
ಗ್ರಹಣದ ಪ್ರಭಾವವು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೆಚ್ಚಿಸಬಹುದು. ಸಿಂಹ ರಾಶಿಯವರು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಆದರೆ ಫಲಿತಾಂಶಗಳು ನಿರೀಕ್ಷೆಯಂತೆ ಸಿಗದಿರುಬಹುದು. ಅದು ಉದ್ಯೋಗದಲ್ಲಿನ ನಿರಾಶೆಗೆ ಕಾರಣವಾಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳು ಹಾಗೂ ನಿಮ್ಮ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮುಂದಿನ ತಿಂಗಳು ನೀವು ಆರ್ಥಿಕ ಹೂಡಿಕೆ, ಹೊಸ ಒಪ್ಪಂದಗಳನ್ನು ಮಾಡಿಕೊಳ್ಳದಿರುವುದೇ ಉತ್ತಮ. ಹೆಚ್ಚು ತಾಳ್ಮೆಯಿಂದ ಇರುವುದು ಒಳಿತು.
ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅತ್ಯಗತ್ಯ.
ಶನಿಯ ಪ್ರಭಾವ ಮತ್ತು ಚಂದ್ರಗ್ರಹಣ ಸಂಯೋಜನೆಯು ನಿಮ್ಮ ಮೇಲೆ ಆರ್ಥಿಕ ನಕಾರಾತ್ಮಕ ಪ್ರಭಾವ ಉಂಟು ಮಾಡಬಹುದು. ವೆಚ್ಚ ಹೆಚ್ಚಾಗಬಹುದು. ಸಿಗಬೇಕಾದ ಹಣವು ನಿಮ್ಮ ಕೈ ಸೇರುವುದು ತಡವಾಗಬಹುದು. ನಿಮ್ಮ ಖರ್ಚು, ವೆಚ್ಚ, ಹೂಡಿಕೆ ಮೇಲೆ ಗಮನ ಇರಲಿ. ಆರ್ಥಿಕ ವಿಚಾರದಲ್ಲಿ ಬುದ್ಧಿವಂತಿಕೆ, ಉದ್ಯೋಗ ವಿಚಾರದಲ್ಲಿ ತಾಳ್ಮೆಯಿಂದಿರಬೇಕಿದೆ.
ಚಂದ್ರ ಮನಸ್ಸಿನ ಸೂಚಕ ಆಗಿರುವ ಕಾರಣ, ಸಿಂಹ ರಾಶಿಯವರು ತಮ್ಮ ಸಂಗಾತಿಯೊಂದಿಗೆ ವಿವಾದಗಳು ಅಥವಾ ಭಿನ್ನಾಭಿಪ್ರಾಯ ಆಗದಂತೆ ಎಚ್ಚರಿಕೆ ವಹಿಸಬೇಕು. ಸಣ್ಣ ವಿಷಯಗಳು ದೊಡ್ಡ ತಿರುವು ಪಡೆಯುವುದಿದ್ದರೆ ಅದನ್ನು ತಪ್ಪಿಸಿ ಶಾಂತಿವಾಗಿರುವ ಮೂಲಕ ಕುಟುಂಬ ಸದಸ್ಯರೊಂದಿಗೆ ಜಗಳ ತಪ್ಪಿಸಬಹುದು..












Click it and Unblock the Notifications