ಏರ್ ಇಂಡಿಯಾದ ಸಂಪೂರ್ಣ ಮಾರಾಟಕ್ಕೆ ಮುಂದಾದ ಸರ್ಕಾರ

ನವದೆಹಲಿ, ಜೂನ್ 12: ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಹರಾಜಿನ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿರುವ ಕೇಂದ್ರ ಸರ್ಕಾರ, ಈಗ ಅದರ ಸಂಪೂರ್ಣ ಶೇ 100ರಷ್ಟು ಷೇರುಗಳ ಮಾರಾಟಕ್ಕೆ ತೀರ್ಮಾನಿಸಿದೆ.

ಸರ್ಕಾರವು ಏರ್ ಇಂಡಿಯಾದಲ್ಲಿ ಶೆ 24ರಷ್ಟು ಬಂಡವಾಳವನ್ನು ಉಳಿಸಿಕೊಂಡು ಉಳಿದ ಶೇ 76ರಷ್ಟನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿತ್ತು.

ಈ ಸಂಬಂಧ ಎರಡು ಹಂತದ ಬಿಡ್ ಕರೆಯಲಾಗಿತ್ತು. ಮೊದಲ ಹಂತದಲ್ಲಿ ಏರ್ ಇಂಡಿಯಾದ ಬಿಡ್ಡಿಂಗ್‌ಗೆ ಆಸಕ್ತಿ ವ್ಯಕ್ತಪಡಿಸುವುದು. ಎರಡನೆಯ ಹಂತದಲ್ಲಿ ಆಯ್ದ ಆಸಕ್ತರನ್ನು ಬಿಡ್ಡಿಂಗ್‌ಗೆ ಕರೆಯುವುದು ಎಂದು ಸರ್ಕಾರ ತೀರ್ಮಾನಿಸಿತ್ತು.

Centre mulls to re-examine air indias privatisation process

ಆದರೆ, ಮೊದಲ ಹಂತದಲ್ಲಿಯೇ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿತ್ತು. ಯಾವ ಸಂಸ್ಥೆಯೂ ಏರ್ ಇಂಡಿಯಾದ ಬಿಡ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿರಲಿಲ್ಲ.,

ಹೀಗಾಗಿ ನಿಯಮಾವಳಿಗಳನ್ನು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿರುವ ಸರ್ಕಾರ, ಶೇ 24ರ ಬಂಡವಾಳವನ್ನೂ ಬಿಟ್ಟು ಸಂಪೂರ್ಣವಾಗಿ ಸಂಸ್ಥೆಯನ್ನು ಮಾರಾಟ ಮಾಡಲು ಉದ್ದೇಶಿಸಿದೆ.

ಆರಂಭದಲ್ಲಿ ಮಾಡಿದ ಕೆಲವು ಪ್ರಯತ್ನಗಳು ಸಫಲವಾಗಲಿಲ್ಲ. ಯಾವ ಖರೀದಿದಾರರೂ ಮುಂದೆ ಬರಲಿಲ್ಲ. ಹೀಗಾಗಿ ಬೇರೆ ವಿಭಿನ್ನ ಪ್ರಯತ್ನವನ್ನು ಮಾಡಬೇಕಿದೆ. ಸರ್ಕಾರ ಶೇ 24ರಷ್ಟು ಬಂಡವಾಳವನ್ನು ಹೊಂದಿರಬೇಕು ಎಂಬ ನಿರ್ದಿಷ್ಟ ನಿಯಮವೇನೂ ಇಲ್ಲ. ಅದರ ಕುರಿತು ಪುನರ್ ಪರಿಶೀಲನೆ ಮಾಡಬಹುದು ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+