ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಅಡಿಯ ಹೋಟೆಲ್ ಬಿಲ್ಲುಗಳ ಗೊಂದಲಕ್ಕೆ ಕೇಂದ್ರದ ಸ್ಪಷ್ಟನೆ

ಸರಕು ಮತ್ತು ಸೇವಾ ತೆರಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಡಾ. ಹನ್ಸ್ ರಾಜ್ ಆದಿಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಜಿಎಸ್ ಟಿ ಅಡಿಯ

|
Google Oneindia Kannada News

ನವದೆಹಲಿ, ಜುಲೈ 3: ಕೆಲವಾರು ಹೋಟೆಲ್ ಗಳ ಬಿಲ್ಲುಗಳು, ಕಾಫಿ ಬಿಲ್ಲುಗಳು ಸಾಮಾಜಿ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಇದು ಹಗಲು ದರೋಡೆ ಎಂಬರ್ಥದಲ್ಲಿ ಅನಿಸಿಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ತೆರಿಗೆ ಇಲಾಖೆ ಕಾರ್ಯದರ್ಶಿ, ಡಾ. ಹನ್ಸ್ ಮುಖ್ ಆದಿಯಾ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಹೋಟೆಲ್ ಬಿಲ್ಲುಗಳಲ್ಲಿನ ದರದಲ್ಲಿ ಯಾವುದೇ ಮೋಸವಿಲ್ಲ ಎಂದಿದ್ದಾರೆ.

Central Revenue Secreatary Dr. Hansmukh Adhia clear air regarding GST

ಈ ಮೊದಲು ಹೋಟೆಲ್ ಗಳಲ್ಲಿ ತಿನ್ನಲಾಗುತ್ತಿದ್ದ ಖಾದ್ಯಗಳ ಮೇಲೆ ಹಾಕುತತಿದ್ದ ಬಿಲ್ ಗಳ ಮೇಲೆ ಅಬಕಾರಿ ತೆರಿಗೆ ಹಾಗೂ ಇನ್ನಿತರ ತೆರಿಗೆಗಳು ಹೇರಲ್ಪಡುತ್ತಿದ್ದವು. ಅಲ್ಲದೆ, ಹಿಂದಿನ ಬಿಲ್ಲುಗಳಲ್ಲಿ ಆ ತೆರಿಗೆಗಳ್ಯಾವೂ ಕಾಣುತ್ತಿರಲಿಲ್ಲ. ಪದಾರ್ಥಗಳ ಮೂಲ ಬೆಲೆ ಹಾಗೂ ವ್ಯಾಟ್ ತೆರಿಗೆ ಎಂಬ ಹೆಸರಿನಡಿ ದರಗಳನ್ನು ನಮೂದಿಸಲಾಗುತ್ತಿತ್ತು.

ಆದರೀಗ, ಜಿಎಸ್ ಟಿಯಡಿ ಮುದ್ರಿತವಾಗುತ್ತಿರುವ ರಸೀದಿಯಲ್ಲಿ, ಈ ಎಲ್ಲಾ ತೆರಿಗೆಗಳನ್ನೂ ಲೆಕ್ಕ ಹಾಕಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿಗಳಿಗೆ ಸಲ್ಲುವ ತೆರಿಗಗಳನ್ನು CGST ಹಾಗೂ SGST ಎಂಬ ಎರಡ ರೀತಿಯ ತೆರಿಗೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿದೆ. ಹಾಗಾಗಿ, ಇದು ಹೆಚ್ಚಳವೆಂದು ಅನ್ನಿಸುತ್ತಿದೆಯಷ್ಟೇ ಎಂದು ಹೇಳಿದ್ದಾರೆ.

ಇನ್ನು, ಖ್ಯಾದಗಳ ಮೇಲೆ ಬೀಳುತ್ತಿದ್ದ ವ್ಯಾಟ್ ಗಿಂತಲೂ ಜಿಎಸ್ ಟಿ ದುಬಾರಿ ಎನ್ನುವ ಅನಿಸಿಕೆಗಳನ್ನು ಆದಿಯಾ ಅಲ್ಲಗಳೆದಿದ್ದಾರೆ. ಕೇವಲ ಐಶಾರಾಮಿ ವಸ್ತುಗಳ ಮೇಲಷ್ಟೇ ಜಿಎಸ್ ಟಿ ದುಬಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Central Revenue department Secreatary Dr. Hansmukh Adhia clears air regarding GST misconceptions that people have. He said, negative comments regarding the hotel bills which are being circulated in social media are false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X