ಮಹಿಳೆಯರ ನೆರವಿಗೆ ಕೇಂದ್ರ 'ಒನ್ ಸ್ಟಾಪ್ ಸೆಂಟರ್' ಸ್ಥಾಪನೆ: ಏನಿದು, ಇದರ ಉದ್ದೇಶ, ಕೆಲಸವೇನು?
ಬೆಂಗಳೂರು, ಸೆಪ್ಟಂಬರ್ 01: ಭಾರತದಲ್ಲಿ ಲಿಂಗ ಆಧಾರಿತ ಹಿಂಸೆ, ದೌರ್ಜನ್ಯಗಳಲ್ಲಿ ಬಹುತೇಕವಾಗಿ ಮಹಿಳೆಯರೇ ಸಾಕಷ್ಟು ನೋವು, ಅವಮಾನ ಅನುಭವಿಸುತ್ತಿದ್ದಾರೆ. ಯಾರೊಂದಿಗೂ ಹೇಳಿಕೊಳ್ಳದೇ ಕೆಲವು ಆತ್ಮಹತ್ಯೆ ದಾರಿಯನ್ನು ಹಿಡಿಯುತ್ತಾರೆ. ಅಂತಹ ಮಹಿಳೆಯರಿಗೆ ಸಕಾಲಕ್ಕೆ ನೆರವು ಒದಗಿಸಲು ಕೇಂದ್ರ ಸರ್ಕಾರ 'ಒನ್ ಸ್ಟಾಪ್ ಸೆಂಟರ್' ಯೋಜನೆ ಜಾರಿಗೊಳಿಸಿತು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (MWCD), ಇಂದಿರಾ ಗಾಂಧಿ ಮಾತೃತ್ವ ಸಹಾಯ್ ಯೋಜನೆ ಸೇರಿದಂತೆ ಮಹಿಳೆಯರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಮಿಷನ್‌ಗಾಗಿ ಅಂಬ್ರೆಲಾ ಯೋಜನೆಯ ಉಪ ಯೋಜನೆಯಾಗಿ ಒನ್ ಸ್ಟಾಪ್ ಸೆಂಟರ್'ಗಳನ್ನು ಜಿಲ್ಲೆಗಳಾದ್ಯಂತ ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತು. 'ಸಖಿ' ಎಂದು ಜನಪ್ರಿಯವಾಗಿರುವ ಈ ಯೋಜನೆ 2015ರ ಏಪ್ರಿಲ್ 01ರಿಂದು ಕಾರ್ಯರೂಪಕ್ಕೆ ಬಂದಿತು.

'ಒನ್ ಸ್ಟಾಪ್ ಸೆಂಟರ್' ಯೋಜನೆ ಉದ್ದೇಶ
ಹಿಂಸಾಚಾರಿಗಳಿಗೆ ಒಳಗಾದ ಮಹಿಳೆಯರಿಗೆ ಅಗತ್ಯ ನೆರವು ನೀಡುವುದು ಯೋಜನೆ ಉದ್ದೇಶವಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇವುಗಳ ಸ್ಥಾಪನೆಗೆ ಜಿಲ್ಲೆಗೆ ಒಂದರಂತೆ ಸ್ಥಾಪಿಸಲು ಕೇಂದ್ರ ಉದ್ದೇಶ ಹೊಂದಿತ್ತು. ಮಹಿಳೆಯರಿಗೆ ವಯಸ್ಸು, ವರ್ಗ, ಜಾತಿ, ವೈವಾಹಿಕ ಸ್ಥಿತಿ, ಜನಾಂಗ ಇದ್ಯಾವುದೇ ನೋಡದೇ ದೈಹಿಕ, ಲೈಂಗಿಕ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯಕ್ಕೆ ಒಳಗಾದವರು ಇಲ್ಲಿ ನೆರವು ಪಡೆಯಬಹುದಾಗಿದೆ.
ಇಂತಹ ಅನೇಕ ಘಟನೆಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ. ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಕೌಟುಂಬಿಕವಾಗಿ ಹಿಂಸೆ ಅನುಭವಿಸಿರುವುದು, ಕಳ್ಳಸಾಗಣೆ, ಮರಿಯಾದೆ ವಿಚಾರಕ್ಕೆ ತೊಂದರೆ ಎದುರಿಸಿದ್ದರೆ, ಆಸಿಡ್ ದಾಳಿಗೆ ಒಳಲಾಗಿದ್ದರೆ ಇಂತಹ ಹಲವು ರೀತಿಯ ಹಿಂಸೆಯನ್ನು ಎದುರಿಸಿ ನೊಂದ ಮಹಿಳೆಯರಿಗೆ 'ಒನ್ ಸ್ಟಾಪ್ ಸೆಂಟರ್' ಕೇಂದ್ರಗಳು ಆಸರೆಗೆ ಬರುತ್ತವೆ.
'ಒನ್ ಸ್ಟಾಪ್ ಸೆಂಟರ್' ಕಾರ್ಯದ ಮಾಹಿತಿ
ವ್ಯಕ್ತಿ ಇಲ್ಲವೇ ಕುಟುಂಬ ಸದಸ್ಯರಿಂದ ದೈಹಿಕವಾಗಿ ಹಲ್ಲೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಏಕಕಾಲಕ್ಕೆ ವಸತಿ, ಊಟ ಇಲ್ಲಿ ಸಿಗಲಿದೆ. ಸಂತ್ರಸ್ತೆಗೆ ಕೌನ್ಸೆಲಿಂಗ್, ಚಿಕಿತ್ಸೆ ಹಾಗೂ ರಕ್ಷಣೆಯನ್ನು ಇಲ್ಲಿ ಒದಗಿಸಲಾಗುತ್ತದೆ. ಈ ಮೂಲಕ ಸಂತ್ರಸ್ತ ಮಹಿಳೆಗೆ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.

ಈಯೋಜನೆ ಬಾರದಿದ್ದರೆ ಮಹಿಳೆಯರು ಕೌನ್ಸೆಲಿಂಗ್ ಒಂದೆಡೆ, ಚಿಕಿತ್ಸೆಗೆ ಮತ್ತೊಂದೆಡೆ ಅಲೆಯಬೇಕಿತ್ತು. ಅಲ್ಲದೆ ಊಟ, ವಸತಿ ಬೇರೊಂದು ಕಡೆ ಸಿಗುತ್ತಿತ್ತು. ಹೀಗಾದರೆ ಮಹಿಳೆಗೆ ನ್ಯಾಯ ಸಿಗುವುದು ತಡವಾಗಬಹುದು.
ಇದೆಲ್ಲ ಮನಗಂಡು ಸರ್ಕಾರ ಈ ಕೇಂದ್ರಗಳನ್ನು ಜಿಲ್ಲಾವಾರು ಸ್ಥಾಪಿಸಲು ಯೋಜನೆ ಜಾರಿ ಮಾಡಿತು. ನಿಗದಿತ ಅವಧಿಯಲ್ಲಿ ಕೆಲಸಗಳು ನಡೆದರೆ, ಎಲ್ಲಾ ತರಹದ ದಮನಿತ ಹೆಣ್ಣು ಮಕ್ಕಳು 2020ರ ಕೊನೆಯ ವೇಳೆಗೆ 'ಒನ್ ಸ್ಟಾಪ್ ಸೆಂಟರ್'ಗಳಲ್ಲಿ (ಸ್ವಂತ ಕಟ್ಟಡಗಳಲ್ಲಿ) ನಿರಾತಂಕವಾಗಿ ತಮಗೆ ಬೇಕಾದ ಸೇವಾ ಸೌಲಭ್ಯಗಳನ್ನು ಪಡೆಯಬಹುದು. ಇದು ತುರ್ತು ಮತ್ತು ತತ್‌ಕ್ಷಣಕ್ಕೆ ಸೇವೆ ನೀಡಲಿದೆ ಎಂದು ಸರ್ಕಾರಿ ತಿಳಿಸಿದೆ.
'ಒನ್ ಸ್ಟಾಪ್ ಸೆಂಟರ್' ಸಿಗುವ ಸೌಲಭ್ಯಗಳು
'ಒನ್ ಸ್ಟಾಪ್ ಸೆಂಟರ್' ನೀಡಲಾಗುವ ಸೇವೆಗಳು ಯಾವವು ಎಂದರೆ 'ಮಹಿಳಾ ಸಹಾಯವಾಣಿ, ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಸೇವೆ (AHTUs), ಮಹಿಳಾ ಸಹಾಯ ಕೇಂದ್ರ (WHD) ಹಾಗೂ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಂತಹ ನಿರ್ಭಯಾ ನಿಧಿಯಡಿಯಲ್ಲಿ ಇತರ ಉಪಕ್ರಮಗಳ ಕುರಿತು ಸೇವೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ(DLSA) ಸೇವೆಗಳು ಸೇರಿದಂತೆ ಮತ್ತಿತರ ಸೇವೆಗಳು ಒಂದೇ ಸೂರಿನಡಿ ಸಿಗುತ್ತವೆ.
ಸಂತ್ರಸ್ತ ಮಹಿಳೆಯರು ಅಥವಾ ಅವರಿಗೆ ನೆರವಾಗುವವರು ಅನುಕೂಲವಾಗಲೆಂದು ಈ ಸೆಂಟರ್ ಸೇವೆಯನ್ನು ''ಪೊಲೀಸ್, ಆಂಬ್ಯುಲೆನ್ಸ್ ಮತ್ತು ಇತರ ತುರ್ತು ಪ್ರತಿಕ್ರಿಯೆ ಸಹಾಯವಾಣಿಗಳೊಂದಿಗೆ ಸಂಯೋಜಿಸಲಾಗಿದೆ. ನೀವು 108, 100 ಇನ್ನಿತರ ಸಹಾಯವಾಣಿ ಸಂಖ್ಯೆಗೂ ಸಂಪರ್ಕಿಸಿ ಸೆಂಟರ್‌ಗಳ ಸಹಾಯ ಪಡೆಯಬಹುದು.
ಜಿಲ್ಲಾವಾರು ಸೆಂಟರ್ ಸ್ಥಾಪನೆ ಕೇಂದ್ರ ಅನುದಾನ
ಒನ್ ಸ್ಟಾಪ್ ಸೆಂಟರ್ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿ, ಅದಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಗೆ ಒಂದು ಸೆಂಟರ್ ಸ್ಥಾಪನೆಗೆ ತಲಾ 48 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ಮಾಹಿತಿ ನೀಡಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications