ಪಾಕ್ ಪೌರತ್ವ ಪಡೆದ ಗೋವಾ ಪ್ರಜೆಗಳ 100 ಕೋಟಿ ರು. ಆಸ್ತಿ ಪತ್ತೆ!

ದಶಕಗಳ ಹಿಂದೆ ಗೋವದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿ ಅಲ್ಲಿನ ಪೌರತ್ವದ ಪಡೆದವರ ಸುಮಾರು 100 ಕೋಟಿ ರು. ಆಸ್ತಿ ಗೋವಾದಲ್ಲಿ ಇರುವುದನ್ನು ಕೇಂದ್ರ ಗೃಹಸಚಿವಾಲಯ ಪತ್ತೆ ಮಾಡಿದೆ.

ಗೋವಾ, ಫೆಬ್ರವರಿ. 27 : ಶತ್ರು ದೇಶ ಪಾಕಿಸ್ತಾನ ಪ್ರಜೆಗಳ ಸುಮಾರು 100 ಕೋಟಿ ರು. ಅಧಿಕ ಆಸ್ತಿಯನ್ನು ಗೋವಾದಲ್ಲಿ ಇರುವುದನ್ನು ಕೇಂದ್ರ ಗೃಹ ಸಚಿವಾಲಯ ಪತ್ತೆ ಮಾಡಿದೆ.

ಗೋವಾದ ವಿವಿಧ ಸರ್ವೆ ನಂಬರ್ ಗಳಲ್ಲಿ ದಾಖಲಾಗಿರುವ ಹೆಸರುಗಳು ಮೂಲತಃ ಗೋವಾ ವಾಸಿಗಳದ್ದಾಗಿವೆ. ಆದರೆ, ದಶಕಗಳ ಹಿಂದೆ ಗೋವಾ ತೊರೆದು ಪಾಕಿಸ್ತಾನಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ.

ಆದ್ದರಿಂದ ಇದೀಗ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಆಸ್ತಿ ಮಾಲೀಕರು ಪಾಕಿಸ್ತಾನದ ಪೌರತ್ವ ಪಡೆದಿದ್ದಾರೆ ಎಂಬ ಮಾಹಿತಿ ಕಲೆಹಾಕಿದೆ.

Central home ministry identifies Rs 100 crore enemy properties' in Goa

ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸತ್ತಿನಲ್ಲಿ ಕಾನೂನು ರಚಿಸಬೇಕು ಎಂಬ ಯೋಜನೆ ನಡೆಸಿದೆ. ಗೋವಾದ ಬರ್ದೆಜ್, ಸಾಲ್ಸೆಟ್, ಟಿಸ್ ವಾಡಿ, ಬೈಕೊಲಿಮ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿ ಇರುವುದು ಕಂಡುಬಂದಿದೆ.

ಇದರಿಂದ ಕೇಂದ್ರ ಗೃಹ ಸಚಿವಾಲಯ ಸಂಬಂಧಿಸಿದ ವಿವರಗಳನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದು ಕೂಡಲೇ ಆ ಆಸ್ತಿಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+