10 ಸಾವಿರ ಹೊಸ ಎಲ್ ಪಿಜಿ ವಿತರಕರ ನೇಮಕ

Subscribe to Oneindia Kannada

ಲಕ್ನೊ, ಏಪ್ರಿಲ್, 25: ಎಲ್ ಪಿಜಿ ವಿತರಣೆಯನ್ನು ಸರಳ ಮತ್ತು ಸುಲಭ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದೊಳಗಾಗಿ 10 ಸಾವಿರ ಹೊಸ ಎಲ್‌ಪಿಜಿ ವಿತರಕರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಸದ್ಯ ದೇಶದಲ್ಲಿ 18 ಸಾವಿರ ಎಲ್‌ಪಿಜಿ ವಿತರಕರಿದ್ದು, ಮುಂದಿನ ಮೂರು ತಿಂಗಳಿನಲ್ಲಿ 2 ಸಾವಿರ ಹೊಸ ವಿತರಕರನ್ನು ನೇಮಿಸಲಾಗುವುದು. ಈ ಹಣಕಾಸು ವರ್ಷಾಂತ್ಯಕ್ಕೆ 8 ಸಾವಿರ ಹೊಸ ವಿತರಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]

lpg

8 ಸಾವಿರ ಕೋಟಿ ರು. ವೆಚ್ಚದಲ್ಲಿ 5 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ "ಉಜ್ವಲ" ಯೋಜನೆಗೆ ಪ್ರಧಾನಿ ಮೋದಿ ಮೇ 1ರಂದು ಚಾಲನೆ ನೀಡಲಿದ್ದಾರೆ.ಇದಕ್ಕಾಗಿ ಎಲ್‌ಪಿಜಿ ಸಬ್ಸಿಡಿ ತ್ಯಜಿಸಿರುವ 1.13 ಕೋಟಿ ಗ್ರಾಹಕರ ಉಳಿತಾಯದ ಹಣವನ್ನು ಬಳಸಿಕೊಳ್ಳಲಾಗುತ್ತದೆ. ದೇಶಾದ್ಯಂತ ಶೇ. 61 ಕುಟುಂಬಗಳು ಎಲ್‌ಪಿಜಿ ಸಂಪರ್ಕ ಪಡೆದಿದ್ದು ಇನ್ನು ಹೆಚ್ಚಿನ ಸಂಪರ್ಕ ನೀಡುವ ಗುರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ತಿಳಿಸಿದ್ದಾರೆ.[ಆಧಾರ್ ಲಿಂಕ್ ಮಾಡದಿದ್ದರೆ ಎಲ್ ಪಿಜಿ ಸಬ್ಸಿಡಿ ಇಲ್ಲ]

ಪರ್ಯಾಯ ಇಂಧನ ಮೂಲಗಳತ್ತ ಕೇಂದ್ರ ಸರ್ಕಾರ ಗಮನ ನೀಡುತ್ತಿದ್ದು ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಮುಂದೆ ಸಾಗಲಾಗುವುದು ಎಂದು ತಿಳಿಸಿದ್ದಾರೆ. ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ನೀಡಿದ್ದ ದೇಶದ ಲಕ್ಷಾಂತರ ಜನ ಎಲ್ ಪಿಜಿ ಸಬ್ಸಿಡಿ ತ್ಯಜಿಸಿದ್ದರು. ಅದನ್ನು ಈಗ ಬಿಪಿಎಲ್ ಕಾರ್ಡ್ ದಾರರ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Petroleum Minister Dharmendra Pradhan said 10,000 new LPG distributors will be appointed in the current financial year. "At present, there are 18,000 gas distributors in the country and in the coming three months, 2,000 new distributors will be made and by the end of this financial year 8,000 more distributors will be made," Pradhan told.
Please Wait while comments are loading...