8th Pay Commission: 8ನೇ ವೇತನ ಆಯೋಗ ರಚನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ, ಮುಂದಿನ ತಿಂಗಳೂ ಸಿಹಿಸುದ್ದಿ!
ನವದೆಹಲಿ, ಜೂನ್. 22: ಕೇಂದ್ರ ಸರ್ಕಾರಿ ನೌಕರರು ಬಹು ನಿರೀಕ್ಷೆಯಿಂದ ಕಾಯುತ್ತಿರುವ 8ನೇ ವೇತನ ಆಯೋಗ (8th Pay Commission)ದ ಬಗ್ಗೆ 2024 ರ ಮುಂಬರುವ ಬಜೆಟ್‌ನಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ವೇತನ ಆಯೋಗವನ್ನು (CPC) ರಚಿಸಲು ಕೇಂದ್ರ ಸರ್ಕಾರವು ಸಮಗ್ರ ಪ್ರಸ್ತಾವನೆಯನ್ನು ಸ್ವೀಕರಿಸಿದೆ.
ಈ ಪ್ರಸ್ತಾವನೆಯು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮೂಲ ವೇತನ, ಭತ್ಯೆಗಳು, ಪಿಂಚಣಿಗಳು ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿಸುವ ಮತ್ತು ಪರಿಷ್ಕರಿಸುವ ಗುರಿಯನ್ನು ಹೊಂದಿದೆ. ಜುಲೈನಲ್ಲಿ 8ನೇ ವೇತನ ಆಯೋಗ ರಚನೆಯಾಗುವ ಸಾಧ್ಯತೆಯುದೆ.

ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ರಾಷ್ಟ್ರೀಯ ಮಂಡಳಿ (ಸಿಬ್ಬಂದಿ ಕಡೆ)ರಾಷ್ಟ್ರೀಯ ಕೌನ್ಸಿಲ್ (ಸಿಬ್ಬಂದಿ ಭಾಗ) ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು 8 ನೇ ಸಿಪಿಸಿ ರಚನೆಗೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಂಪುಟ ಕಾರ್ಯದರ್ಶಿಗೆ ಬರೆದಿರುವ ವಿವರವಾದ ಪತ್ರದಲ್ಲಿ ಶಿವ ಗೋಪಾಲ್ ಮಿಶ್ರಾ ಅವರು ಸರ್ಕಾರಿ ನೌಕರರು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಪರಿಹರಿಸಲು ಈ ಆಯೋಗ ಅತ್ಯಗತ್ಯ ಎಂದು ಹೇಳಿದ್ದಾರೆ.
ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ
ಕೇಂದ್ರ ಸರ್ಕಾರಿ ನೌಕರರ ವೇತನ ರಚನೆ, ಭತ್ಯೆಗಳು ಮತ್ತು ಪ್ರಯೋಜನಗಳ ಬದಲಾವಣೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ಕೇಂದ್ರ ವೇತನ ಆಯೋಗವನ್ನು ರಚಿಸಲಾಗುತ್ತದೆ. ದೇಶದಲ್ಲಿ ಏರುತ್ತಿರುವ ಹಣದುಬ್ಬರಕ್ಕೆ ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಲು ಇದು ಸಹಾಯ ಮಾಡುತ್ತದೆ.
ಫೆಬ್ರವರಿ 28, 2014 ರಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಸ್ಥಾಪಿಸಿದ 7 ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಜನವರಿ 1, 2016 ರಿಂದ ಜಾರಿಗೆ ತಂದಿತು. 8ನೇ ವೇತನ ಆಯೋಗವನ್ನು ಜನವರಿ 1, 2026 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ಆದರೆ, ಸರ್ಕಾರವು ತನ್ನ ಔಪಚಾರಿಕವಾಗಿ ಈ ಬಗ್ಗೆ ಏನು ಘೋಷಿಸಿಲ್ಲ. 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ.

ಕೋವಿಡ್-19 ನಂತರದ ಹಣದುಬ್ಬರ ಸರ್ಕಾರಿ ನೌಕರರನ್ನು ಬಾಧಿಸುತ್ತಿದೆ. ಇದು ಸರಾಸರಿ 5.5 ಏರಿಕೆಯಾಗಿದೆ. "2016 ರಿಂದ 2023 ರವರೆಗೆ ದೈನಂದಿನ ಜೀವನಕ್ಕೆ ಅಗತ್ಯವಿರುವ ಅಗತ್ಯ ಸರಕುಗಳು ಮತ್ತು ಸರಕುಗಳ ಚಿಲ್ಲರೆ ಬೆಲೆಗಳು 80% ಕ್ಕಿಂತ ಹೆಚ್ಚಿವೆ. ಆದರೆ, ಜುಲೈ 1, 2023 ರಂತೆ ನಾವು ಕೇವಲ 46% ರಷ್ಟು ತುಟ್ಟಿಭತ್ಯೆಯನ್ನು ಪಡೆದಿದ್ದೇವೆ. ಬೆಲೆ ಏರಿಕೆ ಮತ್ತು ಪಿಂಚಣಿದಾರರಿಗೆ ಒದಗಿಸಲಾದ ಡಿಎ ನಡುವಿನ ಅಸಮಾನತೆ ಹೆಚ್ಚಿದೆ ಎಂದು ನೌಕರರು ಹೇಳುತ್ತಾರೆ.
ಜನವರಿ 1, 2024 ರಂತೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA) 50% ತಲುಪಿದ್ದರೂ, ಜನವರಿ 1 ರ ನಂತರ ನೇಮಕಗೊಂಡವರಿಗೆ ಪಿಂಚಣಿ ನಿಯಮಗಳ ಅಡಿಯಲ್ಲಿ ಪಿಂಚಣಿ ಮರುಸ್ಥಾಪಿಸಲು ಯಾವುದೇ ನಿರ್ಧಾರವಾಗಿಲ್ಲ. 20 ಲಕ್ಷಕ್ಕೂ ಹೆಚ್ಚು ನಾಗರಿಕ ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ತಮ್ಮ ಮೂಲ ವೇತನ ಮತ್ತು ಡಿಎ ಮಾಸಿಕ 10% ರಷ್ಟು ಕೊಡುಗೆ ನೀಡುತ್ತಾರೆ. ಇದರಿಂದ ಅವರ ಕೈಗೆ ಸಿಗುವ ವೇತನ ಅತ್ಯಂತ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರಿ ನೌಕರರು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಮತ್ತು ಸರ್ಕಾರಿ ಸೇವೆಯಲ್ಲಿ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ನೌಕರಿಯತ್ತ ಸೆಳೆಯಲು ಮತ್ತು ಉಳಿಸಿಕೊಳ್ಳಲು 8 ನೇ ವೇತನ ಆಯೋಗದ ಸ್ಥಾಪನೆಯು ನಿರ್ಣಾಯಕವಾಗಿದೆ. ತಡಮಾಡದೆ 8ನೇ ಕೇಂದ್ರೀಯ ವೇತನ ಆಯೋಗವನ್ನು ರಚಿಸಬೇಕು ಎಂದು ಶಿವ ಗೋಪಾಲ್ ಮಿಶ್ರಾ ಒತ್ತಾಯಿಸಿದ್ದಾರೆ.












Click it and Unblock the Notifications