7th Pay Commission: ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್
ಬೆಂಗಳೂರು, ಫೆಬ್ರವರಿ 21: ಸರ್ಕಾರಿ ನೌಕರರಿಗೆ ಹೋಳಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಲಿದೆ. ವರ್ಷಕ್ಕೆ ಎರಡು ಭಾರಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ (DA hike) ಮಾಡುತ್ತದೆ. ಇದರೊಂದಿಗೆ ತುಟ್ಟಿ ಪರಿಹಾರವನ್ನು (DR Hike) ಸಹ ನೀಡುತ್ತದೆ. ಜನವರಿ 2025ರ ತುಟ್ಟಿಭತ್ಯೆ ಹೆಚ್ಚಳಕ್ಕೆ ಕಾಯುತ್ತಿರುವ ಕೋಟ್ಯಾಂತರ ನೌಕರರಿಗೆ ಹೋಳಿ ಹಬ್ಬಕ್ಕೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಜನವರಿಯಲ್ಲಿ ಹಾಗೂ ಜುಲೈ ತಿಂಗಳಲ್ಲಿ ಎರಡು ಭಾರಿ ತುಟ್ಟಿಭತ್ಯೆ ಏರಿಕೆ ಆಗುತ್ತದೆ. ಈ ಹಿಂದೆ ನೌಕರರು ಶೇಕಡ 3 ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಅಕ್ಟೋಬರ್ 2024ರಲ್ಲಿಪಡೆದಿದ್ದರು. ಆಗ ತುಟ್ಟಿ ಭತ್ಯೆಯು ಶೇಕಡಾ 50ರಿಂದ ಶೇ. 53ಕ್ಕೆ ಹೆಚ್ಚಾಯಿತು. ಇದೀಗ ಮಾರ್ಚ್ 2025 ರಲ್ಲಿ ಮತ್ತೊಂದು ಹೆಚ್ಚಳ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ. ಈ ಹೆಚ್ಚಳವರು ಜನವರಿ 1ರಿಂದ ಅನ್ವಯವಾಗುವಂತೆ ಮಾರ್ಚ್ ತಿಂಗಳಲ್ಲಿ ಜಾರಿಯಾಗಲಿದೆ. ಜುಲೈ ತಿಂಗಳ ಹೆಚ್ಚಳ ಬಗ್ಗೆ ಸೆಪ್ಟಂಬರ್ ಅಥವಾ ಅಕ್ಟೋಬರ್ ಹೊತ್ತಿಗೆ ಅಧಿಕೃತ ಆದೇಶವಾಗುತ್ತಿದೆ.

ಜನವರಿ ತಿಂಗಳ ಹೆಚ್ಚಳದ ಅಪ್ಡೇಟ್
ಕೇಂದ್ರವು ಒಂದು ವೇಳೆ ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 3ರಷ್ಟು ಹೆಚ್ಚಿಸಿದರೆ ರೂ. 18,000 ಮೂಲ ವೇತನ ಹೊಂದಿರುವ ಉದ್ಯೋಗಿಯ ವೇತನವು ಮಾಸಿಕವಾಗಿ 540 ರಷ್ಟು ಏರಿಕೆ ಆಗುತ್ತದೆ. ಒಂದು ವೇಳೆ ಡಿಎ ಅನ್ನು ಸರ್ಕಾರ ಶೇಕಡಾ 4 ರಷ್ಟು ಹೆಚ್ಚಿಸಿದರೆ ಮೂಲ ವೇತನವು ಮಾಸಿಕ 720 ರಷ್ಟು ಹೆಚ್ಚಾಗಲಿದೆ. ಇನ್ನೂ ಪಿಂಚಣಿದಾರರಿಗೆ ಪಿಂಚಣಿ ಪರಿಹಾರವು ಹೆಚ್ಚಳವಾಗುತ್ತದೆ.
ನೌಕರರು ತುಟ್ಟಿಭತ್ಯೆ ಹೆಚ್ಚಳ ಎಷ್ಟಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ತಿಂಗಳು ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ಹೆಚ್ಚಿಸಿದರೆ ಹೋಳಿ ಹಬ್ಬಕ್ಕೆ ನೌಕರರಿಗೆ ಖುಷಿ ಇಮ್ಮಡಿಯಾಗಲಿದೆ. ಈ ಕಾರಣದಿಂದ ಸರ್ಕಾರದ ಆದೇಶದತ್ತ ನೌಕರರ ಗಮನ ಕೇಂದ್ರೀಕೃತವಾಗಿದೆ.

ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಆಧರಿಸಿ ಲೆಕ್ಕ ಹಾಕಲಾಗುತ್ತದೆ. 12 ತಿಂಗಳ ಸರಾಸರಿ AICPI ಆಧರಿಸಿ ಸರ್ಕಾರವು ತುಟ್ಟಿಭತ್ಯೆ ಅಂಶಗವು ಬದಲಾಗುತ್ತದೆ. ಪ್ರತಿ ಬಾರಿಯು ಆರು ತಿಂಗಳಿಗೆ ಒಮ್ಮೆ ಅಧಿಕೃತ ಆದೇಶ ಮಾಡುತ್ತಾರೆ.
8ನೇ ವೇತನ ಆಯೋಗ ಅಪ್ಡೇಟ್
ಕೇಂದ್ರ ಸರ್ಕಾರಿ ನೌಕರರ ಮತ್ತೊಂದು ಮಹತ್ವ ನಿರೀಕ್ಷೆ ಎಂದರೆ ಅದು ಎಂಟನೇ ವೇತನ ಆಯೋಗ ಜಾರಿ. 8ನೇ ವೇತನ ಆಯೋಗ ಜಾರಿ ಮಾಡಿದರೆ ಮೂಲ ವೇತನ ಹಾಗೂ ಇತರ ಭತ್ಯೆಗಳು ಪರಿಣಾಮಕಾರಿಯಾಗಿ ಏರಿಕೆ ಆಗುತ್ತವೆ. 7ನೇ ವೇತನ ಆಯೋಗದ ಅವಧಿ ಇದೇ 2025ರ ಡಿಸೆಂಬರ್ 31ಕ್ಕೆ ಮುಗಿಯಲಿದೆ. ನಂತರ 8ನೇ ವೇತನ ಆಯೋಗ ಜಾರಿಯಾಗಲಿದೆ ಎಂದು ಹೇಳಲಾಗುತ್ತದೆ. ಮೂಲಗಳ ಪ್ರಕಾರ, ಅನುಷ್ಠಾನಕ್ಕೆ ಹೆಚ್ಚಿನ ಸಮಯ ಹಿಡಿಯಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications