ಕೇಂದ್ರ ಸಚಿವ ಸಂಪುಟ ಪುನರ್‌ರಚನೆ, ಹಣಕಾಸು ಸಚಿವ ಸ್ಥಾನ ಬದಲು
ನವ ದೆಹಲಿ, ಮೇ 14: ಲೋಕಸಭಾ ಚುನಾವಣೆಗೆ ಇನ್ನು ಕೇವಲ ಒಂದು ವರ್ಷ ಮಾತ್ರವೇ ಇದ್ದ ಸಮಯದಲ್ಲಿ ಕೇಂದ್ರ ಸರ್ಕಾರವು ತನ್ನ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಿದೆ.
ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಜವಳಿ ಖಾತೆ ಸಚಿವೆ ಆಗಿದ್ದ ಸ್ಮೃತಿ ಇರಾನಿ ಕೈಯಿಂದ ವಾರ್ತಾ ಇಲಾಖೆ ಕಸಿದುಕೊಂಡು ಕ್ರೀಡಾ ಮಂತ್ರಿ ಆಗಿದ್ದ ರಾಜವರ್ಧನ್ ಸಿಂಗ್ ರಾಥೋಡ್ ಕೈಗೆ ನೀಡಲಾಗಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕಾರಣ ಅವರ ಹಣಕಾಸು ಖಾತೆಯನ್ನು ಪಿಯೂಷ್ ಘೋಯಲ್ ಅವರು ನಿರ್ವಹಿಸಲಿದ್ದಾರೆ.
ಲೋಕಸಭೆ ಚುನಾವಣೆ ಒಂದು ವರ್ಷ ಇದ್ದಾಗ ಸಚಿವ ಸಂಪುಟ ಪುನರ್ ರಚನೆ ಮಾಡಿರುವುದು ಕುತೂಹಲ ಮೂಡಿಸಿದೆ. ರಾಜಸ್ಥಾನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.












Click it and Unblock the Notifications