ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಮೋದಿ ಸರ್ಕಾರದ ಆದೇಶವಲ್ಲ: ಬಿಜೆಪಿ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಫೆಬ್ರವರಿ 4: ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಕಮಿಷನರ್ ಅವರ ಮನೆಗೆ ಬಂದ ಸಿಬಿಐ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ ಘಟನೆ ದೇಶದಾದ್ಯಂತ ಸದ್ದು ಮಾಡಿದೆ.

ಈ ಘಟನೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಸಿಬಿಐ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ವಾದಿಸಿದೆ.

ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ವಾರಂಟ್ ಇಲ್ಲದೆ ಪೊಲೀಸ್ ಅಧಿಕಾರಿಗಳನ್ನು ಅರೆಸ್ಟ್ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದಾರೆ. ಅವರಿಗೆ ಇತರೆ ವಿರೋಧ ಪಕ್ಷಗಳು ಬೆಂಬಲ ನೀಡಿವೆ.

ದೀದಿ-ಸಿಬಿಐ ವಿವಾದ LIVE: ಬೆಂಬಲಕ್ಕೆ ನಿಂತ ವಿಪಕ್ಷಗಳು ದೀದಿ-ಸಿಬಿಐ ವಿವಾದ LIVE: ಬೆಂಬಲಕ್ಕೆ ನಿಂತ ವಿಪಕ್ಷಗಳು

ಇತ್ತ ಬಿಜೆಪಿ ಸಿಬಿಐ ನಡೆಯನ್ನು ಸಮರ್ಥಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚಿಟ್‌ಫಂಡ್ ಹಗರಣದಲ್ಲಿ ಆರೋಪಿಗಳಾಗಿರುವವರನ್ನು ವಿಚಾರಣೆ ನಡೆಸಲು ಬಂದರೆ ಅವರನ್ನೇ ಬಂಧಿಸುವ ಉದ್ಧಟತನ ತೋರಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.

Array

ಮೊದಲು ವ್ಯತ್ಯಾಸ ಅರ್ಥ ಮಾಡಿಕೊಳ್ಳಿ

ಇದು ಟ್ಯೂಷನ್ ಸಮಯ. ಸುಪ್ರೀಂಕೋರ್ಟ್ ಅದೇಶದ ಅಡಿಯಲ್ಲಿ ಸುಪ್ರೀಂಕೋರ್ಟ್ ಅಧಿಕಾರಿಗಳು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆಯೇ ಹೊರತು ಮೋದಿ ಸರ್ಕಾರದ ಅದೇಶಕ್ಕೆ ಅನುಗುಣವಾಗಿ ಅಲ್ಲ. ರಾಹುಲ್ ಗಾಂಧಿ ಅವರು ಸರ್ಕಾರ ಮತ್ತು ಸುಪ್ರೀಂಕೋರ್ಟ್‌ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡಿಲ್ಲ. ಮಮತಾ ಬ್ಯಾನರ್ಜಿ ಸರ್ಕಾರವನ್ನು ಬೆಂಬಲಿಸುವ ನಿಮ್ಮ ನಿಲುವು ಅಚ್ಚರಿಯೇನಲ್ಲ. ಎಷ್ಟೆಂದರೂ ಮಹಾ ಘಟಬಂಧನವು ಪ್ರಾದೇಶಿಕವಾಗಿ ಒಡೆದಿದೆ, ಆದರೆ ಭ್ರಷ್ಟಾಚಾರದಲ್ಲಿ ಒಂದಾಗಿವೆ ಎಂದು ಕರ್ನಾಟಕ ಬಿಜೆಪಿ ರಾಹುಲ್ ಗಾಂಧಿ ಅವರ ನಿಲುವಿಗೆ ಚಾಟಿ ಬೀಸಿದೆ.

ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ

Array

ಪ್ರಜಾಪ್ರಭುತ್ವ ಉಳಿಸಿ ಎಂದು ಅಳುತ್ತಾರೆ

-ಸಿಬಿಐ ಅಧಿಕಾರಿಗಳನ್ನು ಬಂಧಿಸಲಾಯಿತು.
- Rallyಗಳಿಗೆ ಅನುಮತಿ ನಿರಾಕರಿಸಲಾಯಿತು.
- ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಸಲು ಬಿಡಲಿಲ್ಲ.
- ಬಿಜೆಪಿ ಬೆಂಬಲಿಗರನ್ನು ಅವರ ಗೂಂಡಾ ಪಕ್ಷದ ಜನರು ಕೊಲ್ಲಲು ಬಿಟ್ಟರು.
- ಒಕ್ಕೂಟ ವ್ಯವಸ್ಥೆಯನ್ನು ಅವಮಾನಿಸಿದರು.

ಅವರು 'ಪ್ರಜಾಪ್ರಭುತ್ವ ಉಳಿಸಿ' ಎಂದೂ ಅಳುತ್ತಾರೆ. ನಾವು ಬೂಟಾಟಿಕೆ ಎಂಬ ಪದವನ್ನು ಬಳಸುತ್ತೇವೆ. ನೀವು ಅದನ್ನು ಮಮತಾ ಬ್ಯಾನರ್ಜಿ ಎಂದು ಭಾವಿಸಿದರೆ ಕ್ಷಮಿಸಿ! ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.

ಪಶ್ಚಿಮ ಬಂಗಾಳದ ಘಟನೆ ತುರ್ತು ಪರಿಸ್ಥಿತಿ ದಿನ ನೆನಪಿಸುತ್ತೆ: ದೇವೇಗೌಡ ಪಶ್ಚಿಮ ಬಂಗಾಳದ ಘಟನೆ ತುರ್ತು ಪರಿಸ್ಥಿತಿ ದಿನ ನೆನಪಿಸುತ್ತೆ: ದೇವೇಗೌಡ

ಕಾನೂನು ನಿಮ್ಮನ್ನು ಶೀಘ್ರದಲ್ಲೇ ಹಿಡಿಯುತ್ತದೆ

ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಬಿಐ ಒಬ್ಬ ಪೊಲೀಸ್ ಅಧಿಕಾರಿಯನ್ನು ಬಂಧಿಸುವುದು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಳ್ಳುವುದು ಹೇಗಾಗುತ್ತದೆ? ತಮ್ಮನ್ನು ರಕ್ಷಿಸಿಕೊಳ್ಳಲು ಕಳ್ಳರೆಲ್ಲ ಒಂದುಗೂಡುವಂತೆ ಕಾಣಿಸುತ್ತದೆ. ಆದರೆ, ನಮ್ಮ ಸಂಸ್ಥೆಗಳು ಮತ್ತು ಸಂವಿಧಾನ ನ್ಯಾಯ ಒದಗಿಸುವಲ್ಲಿ ಮತ್ತು ಭ್ರಷ್ಟರನ್ನು ಶಿಕ್ಷಿಸುವಲ್ಲಿ ಪ್ರಬಲವಾಗಿವೆ. ಎನ್. ಚಂದ್ರಬಾಬು ನಾಯ್ಡು ಅವರೇ ಕಾನೂನು ನಿಮ್ಮನ್ನು ಶೀಘ್ರದಲ್ಲಿಯೇ ಹಿಡಿಯುತ್ತದೆ ಎಂದು ಆಂಧ್ರಪ್ರದೇಶ ಬಿಜೆಪಿ ಘಟಕವು ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ನೀಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪ್ರತಿಕ್ರಿಯೆ ನೀಡಿದೆ.

ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ಸಿಬಿಐ ವಿರುದ್ಧ ದೀದಿ ಕೆಂಡಾಮಂಡಲ ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ಸಿಬಿಐ ವಿರುದ್ಧ ದೀದಿ ಕೆಂಡಾಮಂಡಲ

ಆಗ ಸಂವಿಧಾನಕ್ಕೆ ಅಪಾಯವಿರಲಿಲ್ಲವೇ?

2013ರಲ್ಲಿ ಪೊಲೀಸ್ ಅಧಿಕಾರಿಯನ್ನು ಕೊಂದ ಪ್ರಕರಣದಲ್ಲಿ ಟಿಎಂಸಿ ಅಭ್ಯರ್ಥಿಯೊಬ್ಬನನ್ನು ಬಂಧಿಸಿದ್ದಕ್ಕೆ ಪೊಲೀಸ್ ಆಯುಕ್ತ ಆರ್‌ಕೆ ಪಚ್ನಾಂಡಾ ಅವರನ್ನು ಕಿತ್ತು ಹಾಕಿದ್ದನ್ನು ಈಗ ಧರಣಿ ಕುಳಿತಿರುವ ಮಮತಾ ಬ್ಯಾನರ್ಜಿ ನೆನಪಿಸಿಕೊಳ್ಳಬೇಕು. ಆಗ ಸಂವಿಧಾನ ಅಪಾಯದಲ್ಲಿ ಇರಲಿಲ್ಲವೇ? ಆದರೆ, ಬೃಹತ್ ಹಗರಣದಲ್ಲಿ ಸುಪ್ರೀಂಕೋರ್ಟ್ ನಿಗಾವಣೆಯಲ್ಲಿ ನಡೆಯುತ್ತಿರುವ ತನಿಖೆ ಅಪಾಯ ತಂದೊಡ್ಡಿದೆಯೇ? ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.

ತಿಹಾರ ಜೈಲಿನಲ್ಲಿಯೂ ಜತೆಗಿರುತ್ತೀರಾ?

ತಿಹಾರ್ ಜೈಲಿನಲ್ಲಿಯೂ ಹೆಗಲಿಗೆ ಹೆಗಲು ನೀಡಿ ಜತೆಗೆ ನಿಲ್ಲುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ಹೇಳುತ್ತೀರಾ? ಸಿಬಿಐಅನ್ನು ಬಳಸಿಕೊಂಡು ನಿಮ್ಮ ತಾಯಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಹೇಗೆ ಕಾಡಿದ್ದರು ಎಂಬುದು ನೆನಪಾಗುತ್ತದೆಯೇ? ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಕೋಲ್ಕತಾಗೆ ತನಿಖೆಗಾಗಿ ತೆರಳಿತ್ತು ಎನ್ನುವುದು ಅರಿವಿದೆಯೇ? ಎಂದು ಶಾಸಕ ಸಿ.ಟಿ. ರವಿ, ಮಮತಾ ಬ್ಯಾನರ್ಜಿ ಅವರ ಜತೆಗಿರುವುದಾಗಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಬೆಂಬಲ ಅಚ್ಚರಿಯೇನಿಲ್ಲ

ಹಗರಣಗಳ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ತನಿಖೆಗೆ ಸಹಕರಿಸುತ್ತಿಲ್ಲ. ತಮ್ಮ ಹಗರಣಗಳನ್ನು ಮುಚ್ಚಿ ಹಾಕಲು ರಾಜ್ಯ ಯಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸ್ವತಂತ್ರ ಸಂಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ದೇಶದೆಲ್ಲೆಡೆಗಿನ ರಾಜಕಾರಣಿಗಳು ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ಧಾವಿಸುತ್ತಿರುವುದು ಅಚ್ಚರಿ ಏನಿಲ್ಲ. ಆಕೆ ಒಂದು ಉದಾಹರಣೆಯನ್ನು ಸೃಷ್ಟಿಸುತ್ತಿದ್ದಾರೆಯೇ? ಎಂದು ಸಂಸದೆ ಶೋಭಾ ಕರಂದ್ಲಾಜೆ, ದೇವೇಗೌಡ ಅವರು ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ನೀಡಿ ಪ್ರಕಟಿಸಿರುವ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದಾರೆ.

English summary
Leaders from BJP comes to the support of Centre in West Bengal CBI issue. Its a order by Supreme Court, not by Narendra Modi government, BJP argued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X