ಸಾಯಿಬಾಬಾ ಮಂದಿರದಲ್ಲಿ ವೃದ್ಧನಿಗೆ ಒದ್ದ ಬಿಜೆಪಿ ಸಂಸದ!

Posted By:
Subscribe to Oneindia Kannada

ಪೋರ್ ಬಂದರ್ (ಗುಜರಾತ್), ಮಾರ್ಚ್ 27: ಮಹಾತ್ಮ ಗಾಂಧೀಜಿ, ಸರ್ದಾರ್ ಪಟೇಲ್, ನರೇಂದ್ರ ಮೋದಿ ಅವರ ನಾಡು ಗುಜರಾತಿನ ಬಿಜೆಪಿ ಸಂಸದರೊಬ್ಬರು ನಡೆಸಿದ ಕೃತ್ಯ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಸಾಯಿಬಾಬಾ ಮಂದಿರವೊಂದರಲ್ಲಿ ಕುಳಿತ್ತಿದ್ದ ವಯಸ್ಸಾದ ವ್ಯಕ್ತಿಯೊಬ್ಬರನ್ನು ಸಂಸದ ವಿಠಲ್ ಅವರು ಕಾಲಿನಿಂದ ಒದೆಯುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಗುಜರಾತಿನ ಪೋರಬಂದರಿನ ಬಿಜೆಪಿ ಸಂಸದ ವಿಠ್ಠಲ್ ರಾಧಾಡಿಯಾ ಅವರು ಈ ಘಟನೆ ಬಗ್ಗೆ ನನಗೇನು ತಿಳಿದಿಲ್ಲ. ಆ ವ್ಯಕ್ತಿ ಮೂಢನಂಬಿಕೆ ಹರಡಲು ಮಂದಿರಕ್ಕೆ ಬಂದಿದ್ದ ಎಂದು ಪ್ರತಿಕ್ರಿಯಿಸಿದ್ದಾರೆ. ['ಸಾಯಿಬಾಬಾ, ರಾಘವೇಂದ್ರ ಶ್ರೀಗಳು ದೇವರಲ್ಲ']

BJP MP Radadiya 'kicking' elderly man in Gujarat

ಸಾಯಿಬಾಬಾ ಮಂದಿರವೊಂದರಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ವಯಸ್ಸಾದ ವ್ಯಕ್ತಿಯೊಬ್ಬರ ಬಳಿಗೆ ಬರುವ ರಾಧಾಡಿಯಾ ಅವರು ಜಾಡಿಸಿ ಒದ್ದು, ಅಲ್ಲಿಂದ ಹೊರ ಹೋಗುವಂತೆ ಸೂಚಿಸುತ್ತಾರೆ. ಸಂಸದ ರಾಧಾಡಿಯಾ ಅವರ ದೌರ್ಜನ್ಯವನ್ನು ಮೊಬೈಲಿನಲ್ಲಿ ಯಾರೋ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ್ದಾರೆ.[ಗುಜರಾತಿನ ದೇಗುಲ ಧ್ವಂಸಗೊಳಿಸಲು ಉಗ್ರರ ಎಂಟ್ರಿ?]

ಈ ಹಿಂದೆ 2012ರಲ್ಲಿ ವಿಠಲ್ ರಾಧಾಡಿಯಾ ಅವರುವಡೋದರದ ಕರ್ಜಾನ್ ನ ಟೋಲ್ ವೊಂದರ ಬಳಿ ಹಣ ಕೇಳಿದ್ದಕ್ಕೆ ರೈಫಲ್ ಹಿಡಿದು ರಂಪಾಟ ಮಾಡಿ, ಸುದ್ದಿಯಾಗಿದ್ದರು.


ಈಗ ರಾಜ್ ಕೋಟ್ ಜಿಲ್ಲೆಯ ಜಾಮ್ ಕೊಂಡೊರ್ನಾದ ಸಾಯಿಬಾಬಾ ಮಂದಿರದ ಘಟನೆ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A video purportedly showing BJP MP from Porbandar Vitthal Radadiya kicking an elderly man at a religious function has gone viral on social media. However, Radadiya has denied kicking the person.
Please Wait while comments are loading...