Get Updates
Get notified of breaking news, exclusive insights, and must-see stories!

ಜಾತಿ ತಾರತಮ್ಯ: ಪುದುಚೇರಿಯ ಏಕೈಕ ಮಹಿಳಾ ಸಚಿವೆ ರಾಜೀನಾಮೆ

ಚೆನ್ನೈ, ಅಕ್ಟೋಬರ್‌ 10: ಪುದುಚೇರಿಯ ಏಕೈಕ ಮಹಿಳಾ ಶಾಸಕಿ ಮತ್ತು ಸಚಿವೆ ಎಸ್ ಚಂದಿರ ಪ್ರಿಯಾಂಗ ಅವರು ಮಂಗಳವಾರ ಎಐಎನ್‌ಆರ್‌ಸಿ-ಬಿಜೆಪಿ ಸಮ್ಮಿಶ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ತಮ್ಮ ಮೇಲೆ ಪಿತೂರಿ ಮತ್ತು ಹಣಬಲದ ರಾಜಕೀಯದ ಜೊತೆಗೆ ಜಾತೀಯತೆ ಮತ್ತು ಲಿಂಗ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 2021 ರಲ್ಲಿ ನೆಡುಂಗಾಡು ಶಾಸಕರಾಗಿ ಆಯ್ಕೆಯಾಗಿದ್ದ ಅವರು 40 ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಮಂತ್ರಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Caste discrimination: Puducherrys only woman minister resigns

ನಂತರ ಮುಖ್ಯಮಂತ್ರಿ ಎನ್ ರಂಗಸಾಮಿ ನೇತೃತ್ವದ ಸಮ್ಮಿಶ್ರ ಸಂಪುಟದಲ್ಲಿ ಅವರಿಗೆ ಸಾರಿಗೆ ಖಾತೆಯನ್ನು ನೀಡಲಾಗಿತ್ತು. 2021 ರ ವಿಧಾನಸಭಾ ಚುನಾವಣೆಯಲ್ಲಿ ಎಐಎನ್‌ಆರ್‌ಸಿ ಟಿಕೆಟ್‌ನಲ್ಲಿ ಕಾರೈಕಲ್‌ನ ನೆಡುಂಗಾಡು ಮೀಸಲು ಕ್ಷೇತ್ರದಿಂದ ಚಂದಿರ ಪ್ರಿಯಂಗ ಆಯ್ಕೆಯಾಗಿದ್ದರು. ಮಂಗಳವಾರ ಚಂದಿರಾ ಪ್ರಿಯಾಂಗ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ತಮ್ಮ ಕಾರ್ಯದರ್ಶಿಯ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಅವರ ರಾಜೀನಾಮೆ ಪತ್ರವನ್ನು ಸಿಎಂಒ ಮೂಲಗಳು ಖಚಿತಪಡಿಸಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಲಾಗಿದೆ. ತನ್ನ ಕ್ಷೇತ್ರದ ಜನರಲ್ಲಿರುವ ಜನಪ್ರಿಯತೆಯಿಂದಾಗಿ ತಾನು ವಿಧಾನಸಭೆಗೆ ಪ್ರವೇಶಿಸಿದ್ದರೂ ಈ ಪಿತೂರಿಯ ರಾಜಕೀಯವನ್ನು ಜಯಿಸುವುದು ಅಷ್ಟು ಸುಲಭವಲ್ಲ. ಹಣದ ಶಕ್ತಿಯ ವಿರುದ್ಧ ಹೋರಾಡಲು ನನಗೆ ಸಾಧ್ಯವಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ತಾವು ಜಾತೀಯತೆ ಮತ್ತು ಲಿಂಗ ತಾರತಮ್ಮ ಅನುಭವಿಸಿರುವುದಾಗಿ ಅವರು ತಿಳಿಸಿದ್ದಾರೆ. ನನ್ನನ್ನೂ ನಿರಂತರವಾಗಿ ಶೋಷಿಸಲಾಯಿತು. ಕೆಲವು ಮಿತಿಗಳನ್ನು ಮೀರಿ ಪಿತೂರಿ ಮಾಡಿದ್ದು, ಈ ಹಣದ ಶಕ್ತಿಯ ದೊಡ್ಡ ಭೂತವನ್ನು ನಾನು ಸಹಿಸಲಾರೆ ಎಂದು ಅವರು ವಿವರಿಸಿದ್ದಾರೆ. "ನಾನು ಸಚಿವೆಯಾಗಿ ನಾನು ನೋಡಿಕೊಳ್ಳುತ್ತಿರುವ ಇಲಾಖೆಯಲ್ಲಿ ಯಾವ ಬದಲಾವಣೆಗಳು, ಸುಧಾರಣೆಗಳನ್ನು ಮಾಡಿದ್ದೇನೆ ಎಂಬುದನ್ನು ಜನರ ಮುಂದೆ ತೋರಿಸಲು ವಿವರವಾದ ವರದಿಯೊಂದಿಗೆ ಶೀಘ್ರದಲ್ಲೇ ತಿಳಿಸುವುದಾಗಿ ಚಂದಿರ ಪ್ರಿಯಂಗಾ ಹೇಳಿದರು.

ತನ್ನ ಕ್ಷೇತ್ರದ ಜನತೆಗೆ ಋಣಿಯಾಗಿದ್ದೇನೆ. ನಾನು ಪ್ರಬಲ ಶಕ್ತಿಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ನಾನು ಸಚಿವ ಸ್ಥಾನವನ್ನು ತ್ಯಜಿಸಿದ್ದೇನೆ. ನನ್ನ ಭಾಗದ ಜನರಲ್ಲಿ ನಾನು ನನ್ನ ಕ್ಷಮೆಯಾಚಿಸುತ್ತೇನೆ. ಆದರೆ ನಾನು ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಸೇವೆಯನ್ನು ಮುಂದುವರಿಸುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಚಂದಿರ ಪ್ರಿಯಂಗಾ ಹೇಳಿದರು.

ಹಣ ಬಲ ಅಥವಾ ಪ್ರಭಾವದ ಆಧಾರದ ಮೇಲೆ ಸಚಿವರಾಗಲು ಉತ್ಸುಕರಾಗಿರುವ ಯಾರನ್ನೂ ಅವರ ಉತ್ತರಾಧಿಕಾರಿಯನ್ನಾಗಿ ಮಾಡಬಾರದು, ಅದು ವನ್ನಿಯಾರ್ ಅಥವಾ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅವರು ತಮ್ಮ ಕ್ಷೇತ್ರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸರ್ಕಾರದ ಎಲ್ಲಾ ಕಲ್ಯಾಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+