ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ಹೇಳಿಕೆ ಆರೋಪ, ಪ್ರಕಾಶ್ ರೈ ವಿರುದ್ಧ ಕೇಸ್

By Mahesh
|
Google Oneindia Kannada News

ಲಕ್ನೋ, ಅಕ್ಟೋಬರ್ 05: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ (ರೈ) ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕಾಶ್ ಅವರು ಸಮ್ಮೇಳನವೊಂದರಲ್ಲಿ ಭಾಷಣ ಮಾಡುವಾಗ ಮೋದಿ ಅವರ ಹೆಸರು ಪ್ರಸ್ತಾಪಿಸಿ ನೀಡಿದ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ವಕೀಲ ಸರ್ದಾರ್ ಪರ್ವಿಂದರ್ ಸಿಂಗ್ ದೂರಿನಲ್ಲಿ ಹೇಳಿದ್ದಾರೆ.

ಪ್ರಕಾಶ್ ರೈ ಅಂದು ನಿಜಕ್ಕೂ ಹೇಳಿದ್ದೇನು? ಇಲ್ಲಿದೆ ವಿಡಿಯೋ ಸಮಜಾಯಿಷಿಪ್ರಕಾಶ್ ರೈ ಅಂದು ನಿಜಕ್ಕೂ ಹೇಳಿದ್ದೇನು? ಇಲ್ಲಿದೆ ವಿಡಿಯೋ ಸಮಜಾಯಿಷಿ

ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ 11ನೇ ರಾಜ್ಯ ಸಭೆಯಲ್ಲಿ ಪ್ರಕಾಶ್ ರಾಜ್ ಮಾತನಾಡಿದ್ದರು.


ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುವಂಥ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತಿದ್ದು, ಇಂತಹ ಟ್ರೋಲ್‍ಗಳನ್ನ ಹಾಕಿದ ಕೆಲವು ಟ್ವಿಟ್ಟರ್ ಖಾತೆಗಳನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ. ಗೌರಿ ಹತ್ಯೆ ಬಗ್ಗೆ ಮೋದಿ ಅವರ ಮೌನ ಏಕೆ ಎಂದು ಪ್ರಶ್ನಿಸಿದ್ದರು.

Case filed against Prakash Raj after his comments on PM Narendra Modi


ನಂತರ ಮಾತು ಮುಂದುವರೆಸಿ, ಪ್ರಧಾನಿ ಮೋದಿ ಫಾಲೋ ಮಾಡ್ತಿರೋ ಕೆಲವು ಜನರು ತುಂಬಾ ಕ್ರೂರಿಗಳು, ಅದರ ಬಗ್ಗೆ ಕಣ್ಣು ಮುಚ್ಚಿ ಕುಳಿತಿರೋ ಪ್ರಧಾನಿ ನಮ್ಮಲ್ಲಿದ್ದಾರೆ.

ಉತ್ತರಪ್ರದೇಶದ ವಿಡಿಯೋಗಳನ್ನ ನೋಡಿದ್ರೆ ಅವರು(ಯೋಗಿ ಆದಿತ್ಯನಾಥ್) ಮುಖ್ಯಮಂತ್ರಿಯೋ ಅಥವಾ ದೇವಸ್ಥಾನದ ಪೂಜಾರಿಯೋ ಎಂದು ಗೊಂದಲವಾಗುತ್ತದೆ. ಇಂಥ ಡಬಲ್ ರೋಲ್ ಮಾಡೋ ಜನರು ನಮ್ಮಲ್ಲಿದ್ದಾರೆ. ನನಗೆ 5 ರಾಷ್ಟ್ರಪ್ರಶಸ್ತಿಗಳನ್ನ ನೀಡಿದ್ದಾರೆ. ಅದನ್ನು ಅವರಿಗೆ ನೀಡಬೇಕೆಂದಿದ್ದೇನೆ. ಅವರು ನನಗಿಂತ ದೊಡ್ಡ ನಟರು' ಎಂದು ಪ್ರಕಾಶ್ ರಾಜ್ ಹೇಳಿದ್ದರು.

ಈ ಹೇಳಿಕೆ ಬಗ್ಗೆ ಸಾಕಷ್ಟು ಟ್ರೋಲ್‍ಗಳಾಗಿದ್ದು, ನಾನು ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ದೇಶದ ನಾಗರಿಕನಾಗಿ ನಾನು ಪ್ರಧಾನಿಯನ್ನು ಪ್ರಶ್ನಿಸಿದ್ದೇನೆ. ಗೌರಿ ಹತ್ಯೆ ವಿಷಯದಲ್ಲಿ ಪ್ರಧಾನಿಯವರ ಮೌನ ಬೆಚ್ಚಿಬೀಳಿಸುತ್ತದೆ ಎಂದು ವಿಡಿಯೋ ಮೂಲಕ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದರು.

English summary
A court in Lucknow has filed a case against Prakash Raj for his 'inappropriate' comments about Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X