ಕಾರ್, ಬೈಕ್ ಮಾಲೀಕರು ಉಪವಾಸ ಬಿದ್ದಿದ್ದಾರಾ?: ಕೇಂದ್ರ ಸಚಿವ

Posted By:
Subscribe to Oneindia Kannada

ಗೋಹತ್ಯೆ ಬಗ್ಗೆ ಹೇಳಿಕೆ ನೀಡಿ, ವಿವಾದಕ್ಕೆ ಕಾರಣರಾಗಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತನಮ್ ಶನಿವಾರ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ಯಾರ ಹತ್ತಿರ ಬೈಕ್-ಕಾರು ಇರುತ್ತದೋ ಅಂಥವರೇ ಪೆಟ್ರೋಲ್ ಖರೀದಿಸುತ್ತಾರೆ. ಇದರಿಂದಾಗಿ ಖಂಡಿತವಾಗಿಯೂ ಉಪವಾಸ ಇರಲ್ಲ. ಯಾರಿಗೂ ಅಷ್ಟು ಹಣ ಕೊಡಲು ಸಾಧ್ಯವೋ ಕೊಡಲಿ ಬಿಡಿ" ಎಂದಿದ್ದಾರೆ.

ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಬಂದರೆ ಲೀಟರ್ ಗೆ ಬರೀ 38 ರುಪಾಯಿ

ಸಮಾಜದಲ್ಲಿರುವ ತಳ ವರ್ಗದ ಜನರ ಏಳ್ಗೆಗಾಗಿ ಬಹಳ ಹಣ ಬೇಕಾಗುತ್ತದೆ. ಆದ್ದರಿಂದ ಯಾರಿಗೆ ಹಣ ತೆರಲು ಸಾಧ್ಯವಿದೆಯೋ ಅಂಥವರಿಗೆ ತೆರಿಗೆ ಹಾಕ್ತೀವಿ ಎಂದು ಸಚಿವ ಅಲ್ಫೋನ್ಸ್ ಹೇಳಿದ್ದಾರೆ.

Car, bike owners can afford petrol, says Union minister

ನಾವು ತೆರಿಗೆ ಹಾಕುತ್ತಿರುವುದರಿಂದ ಬಡವರು ಗೌರವಯುತವಾಗಿ ಬದುಕಲು ಸಾಧ್ಯವಾಗುತ್ತಿದೆ. ನಾವು ಇಂದು ಸಂಗ್ರಹಿಸುತ್ತಿರುವ ಹಣವನ್ನು ಕದ್ದುಕೊಂಡು ಹೋಗಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಕಳೆದ ಜುಲೈನಿಂದ ಈಚೆಗೆ ಪೆಟ್ರೋಲ್ ಬೆಲೆ ಆರು ರುಪಾಯಿ ಏರಿಕೆಯಾಗಿದೆ. ಸದ್ಯದ ಪೆಟ್ರೋಲ್ ದರವು ಮೂರು ವರ್ಷದ ಹಿಂದೆ ಇದ್ದಷ್ಟು ಇದೆ. ಡೀಸೆಲ್ ದರ ಕೂಡ ಏರಿಕೆಯಾಗಿದೆ. ನಿತ್ಯವೂ ತೈಲ ದರ ಪರಿಷ್ಕರಣೆ ಆರಂಭವಾದ ನಂತರ ಈ ಸನ್ನಿವೇಶ ಸೃಷ್ಟಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Justifying the rising fuel prices, central minister Kannanthanam said, "Who buys petrol? Somebody who has a car, bike; certainly he is not starving. Somebody who can afford to pay, has to pay."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ