ಬಿಹಾರದಲ್ಲಿ ಕೆರೆಗೆ ಬಿದ್ದ ಕಾರು: ಆರು ಮಕ್ಕಳ ದುರಂತ ಸಾವು
ಅರಾರ್ರಿಯಾ(ಬಿಹಾರ್), ಜೂನ್ 18: ಬಿಹಾರದ ಅರಾರ್ರಿಯಾದ ತರಬಾಡಿ ಎಂಬಲ್ಲಿ ನಡೆದ ಅಪಘಾತದಲ್ಲಿ ಆರು ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ. ಮಕ್ಕಳನ್ನು ಹೊತ್ತಿದ್ದ ಕಾರು ಕೆರೆಯೊಂದಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.
ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಉತ್ತರ ಪ್ರದೇಶದ ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಜೂನ್ 11 ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಸೊಂದು ಆರು ಜನ ವಿದ್ಯಾರ್ಥಿಗಳ ಮೇಲೆ ಹರಿದ ಪರಿಣಾಮ ಆರು ವಿದ್ಯಾರ್ಥಿಗಳೂ ಸ್ಥಳದಲ್ಲೇ ಮೃತರಾಗಿದ್ದರು.

ಉತ್ತರ ಪ್ರದೇಶದ ಖುಷಿನಗರದಲ್ಲಿ ಏಪ್ರಿಲ್ 26 ರಂದು ಸ್ಕೂಲ್ ಬಸ್ ವೊಂದು ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 13 ಮಕ್ಕಳು ದುರ್ಮರಣಕ್ಕೀಡಾಗಿದ್ದರು. ಇಯರ್ ಫೋನ್ ಹಾಕಿಕೊಂದು, ಚಾಲಕ ಉಡಾಫೆಯಿಂದ ಗಾಡಿ ಓಡಿಸುತ್ತಿದ್ದುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿತ್ತು.












Click it and Unblock the Notifications