ಆಹಾ... ಎಷ್ಟು ಚೆಂದ! ಈ ಕುಟುಂಬಕ್ಕೆ ದೃಷ್ಟಿಯಾದೀತು ಜೋಕೆ..!

Recommended Video

      ಭಾರತದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಕುಟುಂಬದ ಅದ್ಭುತ ಕ್ಷಣಗಳು | Oneindia Kannada

      ಗಾಂಧಿನಗರ, ಫೆಬ್ರವರಿ 20: ಒಂದು ವಾರಗಳ ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೋ ಗುಜರಾತಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ಅವರು ಗುಜರಾತಿನ ಸಾಬರಮತಿ, ಅಕ್ಷರಧಾಮಗಳಿಗೆ ಭೇಟಿ ನೀಡಿದ ಚಿತ್ರಗಳು ಭಾರತೀಯರ ಕಣ್ಮನ ಸೆಳೆಯುತ್ತಿವೆ.

      ದಂಪತಿ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು, ಭಾರತೀಯರಂತೇ ಸಂಭ್ರಮಿಸಿದ್ದು ಎಲ್ಲರ ಮೆಚ್ಚಿಗೆ ಗಳಿಸಿದೆ.

      ಆದರೆ ಟ್ರುಡ್ಯೋ ಅವರು ಗುಜರಾತಿಗೆ ತೆರಳಿದ್ದಾಗ ಅವರನ್ನು ಸ್ವಾಗತಿಸಲು ಪ್ರಧಾನಿ ಮೋದಿಯವರು ಅಲ್ಲಿಲ್ಲದಿದ್ದುದು ಕೊಂಚ ಬೇಸರವೆನ್ನಿಸಿತು. ಗುಜರಾತಿಗೆ ವಿದೇಶದ ಯಾರೇ ನಾಯಕರು ಬಂದರೂ ಅವರೊಂದಿಗೆ ಪ್ರಧಾನಿ ಮೋದಿಯವರೂ ಗುಜರಾತಿಗೆ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮೋದಿಯವರ ಕರ್ನಾಟಕ ಪ್ರವಾಸದಲ್ಲಿದ್ದುದರಿಂದ ಟ್ರುಡ್ಯೋ ಅವರೊಂದಿಗೆ ತೆರಳಿಲ್ಲ.

      ಕೆನಡಾದಲ್ಲಿ ಪ್ರತ್ಯೇಕ ಖಾಲಿಸ್ತಾನ್ ರಾಜ್ಯ ನಿರ್ಮಾಣದ ಕೂಗು ಎದ್ದಿದ್ದು, ಇದನ್ನು ಭಾರತ ಬೆಂಬಲಿಸುತ್ತಿರುವುದಕ್ಕೂ, ಮೋದಿಯವರು ಟ್ರುಡ್ಯೋ ಅವರ ಜೊತೆಗೆ ಗುಜರಾತಿಗೆ ತೆರಳದಿರುವುದಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ!

      ಅದೇನೇ ಇರಲಿ, ಭಾರತಕ್ಕೆ ಬಂದ ವಿದೇಶಿ ಗಣ್ಯರು ಹೀಗೆ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾರತೀಯರ ಮೆಚ್ಚುಗೆ ಗಳಿಸುತ್ತಿರುವುದಂತೂ ಅತ್ಯಂತ ಸಂತಸದ ವಿಚಾರ ಎನ್ನಿಸಿದೆ.
      ಅದರ ಕೆಲವು ಚಿತ್ರಗಳು ನಿಮಗಾಗಿ ಇಲ್ಲಿವೆ...

      ಈ ರಕ್ಷೆ ಹೀಗೇ ಇರಲಿ...

      ಈ ರಕ್ಷೆ ಹೀಗೇ ಇರಲಿ...

      ಗುಜರಾತಿನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ಭೇಟಿ ನೀಡಿದ್ದ ಈ ಕುಟುಂಬ ಅಕ್ಷರಧಾಮದ ಸೌಂದರ್ಯವನ್ನು ಸವಿಯಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ನೀಡಿದ ರಕ್ಷೆಯನ್ನು ಟ್ರುಡ್ಯೋ ತಮ್ಮ ಪತ್ನಿಯ ಕೈಗೆ ಕಟ್ಟಿದರು. ಅವರ ಮಟ್ಟಿಗೆ ಅಪರೂಪವೆನ್ನಿಸಿದ ಈ ಆಚರಣೆಯನ್ನು ಮಂತ್ರಮುಗ್ಧರಾಗಿ ಅವರ ಮಕ್ಕಳು ನೋಡಿದರು.

      ಸಂತರೊಂದಿಗೆ ಕೆನಡಾ ಪ್ರಧಾನಿ

      ಸಂತರೊಂದಿಗೆ ಕೆನಡಾ ಪ್ರಧಾನಿ

      ಅಕ್ಷರಧಾಮದಲ್ಲಿದ್ದ ಸಂತರೊಂದಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಚರ್ಚಿಸಿದ ಕೆನಡಾ ಪ್ರಧಾನಿ ಅವರೊಮದಿಗೆ ಫೋಟೋಕ್ಕೆ ಪೋಸು ನೀಡಿದ್ದು ಹೀಗೆ.

      ಪ್ರೇಮಸೌಧದೆದುರಲ್ಲಿ ಜೋಡಿಹಕ್ಕಿ!

      ಪ್ರೇಮಸೌಧದೆದುರಲ್ಲಿ ಜೋಡಿಹಕ್ಕಿ!

      ವಿಶ್ವದ ಏಳು ಅದ್ಭುತಗಳಲ್ಲೊಂದಾದ ಆಗ್ರಾದ ತಾಜ್ ಮಹಲ್ ಎದುರಲ್ಲಿ ಕುಳಿತ ಜೋಡಿಹಕ್ಕಿ ಕುಟುಂಬ ಪೋಸು ಕೊಟ್ಟಿದ್ದು ಹೀಗೆ.

      ರಾಷ್ಟ್ರಪಿತನಿಗೆ ನಮನ

      ರಾಷ್ಟ್ರಪಿತನಿಗೆ ನಮನ

      ಗುಜರಾತಿನ ಮಹಾತ್ಮಾ ಗಾಧೀಜಿಯವರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ದಂಪತಿ ಗಾಂಧೀಜಿಯವರ ಚಿತ್ರಕ್ಕೆ ಹಾರ ಹಾಕಿ, ನಮನ ಸಲ್ಲಿಸಿದರು.

      ಇದೇನಿದು.. ವ್ಹೀಲ್ ಥರಾ ಇದ್ಯಲ್ಲ..!?

      ಇದೇನಿದು.. ವ್ಹೀಲ್ ಥರಾ ಇದ್ಯಲ್ಲ..!?

      ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚರಕದಲ್ಲಿ ನೂಲು ನೇಯ್ದು ಸಂಭ್ರಮಿಸಿದ ಕೆನಡಾ ಪ್ರಧಾನಿ ದಂಪತಿ. ಈ ಸಸಂದರ್ಭದಲ್ಲಿ ಅವರ ಮಕ್ಕಳು ಚರಕವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು!

      ಸಂಭ್ರಮದ ಕ್ಷಣ

      ಸಂಭ್ರಮದ ಕ್ಷಣ

      ಅಕ್ಷರಧಾಮದ ಸೌಂದರ್ಯವನ್ನು ಮೆಲಕು ಹಾಕುತ್ತ ಅತ್ಯಂತ ಸಂಭ್ರಮದಿಂದ ಕೆನಡಾ ಪ್ರಧಾನಿ ಕುಟುಂಬ ಹೊರಬಂದಿದ್ದು ಹೀಗೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+