ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಪದವಿ ಪ್ರಮಾಣ ಪತ್ರ ಮತ್ತೆ ಚರ್ಚೆಯಲ್ಲಿ; ಆಸಕ್ತಿಕರ ಮಾಹಿತಿ

|
Google Oneindia Kannada News

Recommended Video

ಹೆಸರು ಬದಲಾಯಿಸಿದ್ದ ರಾಹುಲ್ ಗಾಂಧಿ

ಉತ್ತರಪ್ರದೇಶದ ಅಮೇಥಿಯಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಫಿಡವಿಟ್ ಗೆ ಆಕ್ಷೇಪ ಎತ್ತಲಾಗಿದೆ. ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಆಕ್ಷೇಪಣೆಗೆ ಉತ್ತರ ನೀಡುವಂತೆ ಚುನಾವಣೆ ಅಧಿಕಾರಿಗಳು ರಾಹುಲ್ ಗಾಂಧಿಗೆ ಸೂಚಿಸಿದ್ದಾರೆ. ಇದಕ್ಕೆ ಸ್ವಲ್ಪ ಸಮಯ ಬೇಕು ಎಂದು ರಾಹುಲ್ ಪರ ವಕೀಲ ರಾಹುಲ್ ಕೌಶಿಕ್ ಕೇಳಿದ್ದಾರೆ.

ಆಕ್ಷೇಪಕ್ಕೆ ಉತ್ತರ ನೀಡಲು ವಕೀಲರು ಸಮಯ ಕೇಳುತ್ತಿರುವುದು ಅಚ್ಚರಿಯಾಗುವಂತಿದೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಹೇಳಿದ್ದಾರೆ. ಇವೆಲ್ಲ ಗಂಭೀರ ಆರೋಪಗಳು. ರಾಹುಲ್ ಗಾಂಧಿ ಭಾರತ ನಾಗರಿಕರೋ ಅಲ್ಲವೋ? ಯಾವಾಗಲಾದರೂ ಬ್ರಿಟಿಷ್ ನಾಗರಿಕರಾಗಿದ್ದರಾ? ಅವರು ಸತ್ಯ ಹೇಳಬೇಕಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಅವರು 2004ರಿಂದ ಸಲ್ಲಿಸುತ್ತಾ ಬಂದಿರುವ ಚುನಾವಣೆ ಅಫಿಡವಿಟ್ ನಲ್ಲಿ ರೌಲ್ ವಿನ್ಸಿ ಎಂಬ ಹೆಸರಿನಲ್ಲೇ ಪದವಿ ಪ್ರಮಾಣ ಪತ್ರ ಇದೆ. ರಾಹುಲ್ ಗಾಂಧಿ ಅವರಿಗೆ ಬೇರೆ ದೇಶಗಳಲ್ಲಿ ಬೇರೆ ಹೆಸರುಗಳಿವೆಯಾ ಅಂತ ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ರಾವ್ ಹೇಳಿದ್ದಾರೆ.

ರಾಹುಲ್ ಗಾಂಧಿ ನಾಮಪತ್ರದ ಬಗ್ಗೆ ಆಕ್ಷೇಪಣೆ; ಸೋಮವಾರ ಉತ್ತರಿಸಬೇಕುರಾಹುಲ್ ಗಾಂಧಿ ನಾಮಪತ್ರದ ಬಗ್ಗೆ ಆಕ್ಷೇಪಣೆ; ಸೋಮವಾರ ಉತ್ತರಿಸಬೇಕು

ಧ್ರುವ್ ಲಾಲ್ ಸಲ್ಲಿಸಿದ ಆಕ್ಷೇಪದಲ್ಲಿ ಕೇಂಬ್ರಿಡ್ಜ್ ವಿ.ವಿ. ನೀಡಿದ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿದೆ. ಅದರಲ್ಲಿ ಮಿಸ್ಟರ್ ರೌಲ್ ವಿನ್ಸಿ ಅವರು ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಎಂ.ಫಿಲ್., ಅನ್ನು 2004-05ರಲ್ಲಿ ಸರಾಸರಿ 62.88% ಪಡೆದು, ಅಂದರೆ ತೇರ್ಗಡೆ ಆಗಲು ಬೇಕಾದ ಶೇ 60ಕ್ಕಿಂತ ಹೆಚ್ಚು ಅಂಕದೊಂದಿಗೆ 2004-05ರ ಶೈಕ್ಷಣಿಕ ವರ್ಷದಲ್ಲಿ ಪಾಸಾಗಿದ್ದಾರೆ ಅಂತಿದೆ.

Rahul Gandhi

ರಾಹುಲ್ ಗಾಂಧಿ ನಾಮಪತ್ರದಲ್ಲಿ ಹೇಳಿರುವ ಪ್ರಕಾರ ಬೇರೆ ವರ್ಷದಲ್ಲಿ ಎಂ.ಫಿಲ್., ಮಾಡಿದ್ದಾರೆ. ಆದರೆ ಪ್ರಮಾಣ ಪತ್ರದ ಪ್ರಕಾರ ಹೆಸರು ಕೂಡ ರೌಲ್ ವಿನ್ಸಿ ಅಂತಿದೆ. ಇನ್ನು ಈ ಪದವಿ ಪ್ರಮಾಣ ಪತ್ರದ ಬಗ್ಗೆ ಅನುಮಾನದಿಂದ ಒಬ್ಬರು ಕೇಂಬ್ರಿಡ್ಜ್ ವಿ.ವಿ.ಗೆ ಈ ಬಗ್ಗೆ ಮೇಲ್ ಮಾಡಿ, ವಿಚಾರಿಸಿದ್ದಾರೆ.

ಅದಕ್ಕೆ ವಿ.ವಿ. ಉತ್ತರ ನೀಡಿದೆ. ಆ ಪ್ರಕಾರ ಪ್ರಮಾಣ ಪತ್ರ ಅಸಲಿಯೇ. ಆದರೆ ಶೈಕ್ಷಣಿಕ ವರ್ಷ 2004-05ನೇ ಇಸವಿಯಲ್ಲ. ಅದು 1994-95 ಎನ್ನಲಾಗಿದೆ. ಅದರರ್ಥ ರಾಹುಲ್ ಗಾಂಧಿ ಅಫಿಡವಿಟ್ ಸರಿಯಿದೆ. ಜತೆಗೆ ರೌಲ್ ವಿನ್ಸಿ ಹೆಸರಿನಲ್ಲಿ ಪ್ರಮಾಣ ಪತ್ರ ನೀಡಿರುವುದು ಸರಿಯಿದೆ. ಅದನ್ನು ತಮ್ಮ ನಾಮಪತ್ರದಲ್ಲಿ ರಾಹುಲ್ ಹಾಕಿಲ್ಲ.

ಈಗ ರಾಹುಲ್ ಗಾಂಧಿ ತಮ್ಮ ಪ್ರಮಾಣ ಪತ್ರ ಅಸಲಿಯೋ ನಕಲಿಯೋ ಸಾಬೀತು ಮಾಡಬೇಕಿಲ್ಲ. ಆದರೆ ಹೆಸರು ಬದಲಾಗಿದ್ದು ಏಕೆ ಎಂದು ಚುನಾವಣೆ ಅಧಿಕಾರಿಗೆ ನಂಬಲರ್ಹವಾದ ಉತ್ತರ ನೀಡಬೇಕು. ಜತೆಗೆ ಅವರು ಬ್ರಿಟಿಷ್ ನಾಗರಿಕರೆ ಎಂಬ ಬಗ್ಗೆ ಕೂಡ ಸಮಜಾಯಿಷಿ ನೀಡಬೇಕು.

ಅಣ್ಣನ ಕುರಿತು ಭಾವನಾತ್ಮಕ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿಅಣ್ಣನ ಕುರಿತು ಭಾವನಾತ್ಮಕ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ

ಕೆಲ ವರ್ಷದ ಹಿಂದೆ ವರದಿ ಆದ ಪ್ರಕಾರ, ತಾವು ರಾಜೀವ್ ಗಾಂಧಿ ಮಗ ಎಂಬ ಗುರುತು ಪತ್ತೆ ಆಗಬಾರದು ಎಂಬ ಕಾರಣಕ್ಕೆ ಕೇಂಬ್ರಿಡ್ಜ್ ವಿ.ವಿ. ಅಡಿಯಲ್ಲಿ ಬರುವ ಟ್ರಿನಿಟಿ ಕಾಲೇಜಿನಲ್ಲಿ ರೌಲ್ ವಿನ್ಸಿ ಎಂದು ಬಳಸುತ್ತಿದ್ದರು. ಆ ನಂತರ ಕೇಂಬ್ರಿಡ್ಜ್ ನ ವೈಸ್ ಚಾನ್ಸಲರ್ ಪ್ರೊ.ಆಲಿಸನ್ ರಿಚರ್ಡ್ ಸ್ವತಃ ಸ್ಪಷ್ಟನೆ ನೀಡಿದ್ದರು. ರಾಹುಲ್ ಗಾಂಧಿ ಅವರು ರೌಲ್ ವಿನ್ಸಿ ಹೆಸರಲ್ಲಿ 1995ರಲ್ಲಿ ಎಂ.ಫಿಲ್., ಮಾಡಿದ್ದಾರೆ ಎಂದಿದ್ದರು.

ಆದರೆ, ಭಾರತದ ಮಾಧ್ಯಮಗಳಲ್ಲಿ ವರ್ಷವು ತಪ್ಪಾಗಿ ತೋರಿಸಲಾಗಿದೆ. ಅತಿ ಗಣ್ಯ ವಿದ್ಯಾರ್ಥಿಗಳಿಗೆ ಭದ್ರತಾ ಕಾರಣಗಳಿಗಾಗಿ ಬೇರೆ ಹೆಸರು ನೀಡುವ ಸಂಪ್ರದಾಯ ಇದೆ ಎಂದು ವರದಿಗಳು ತಿಳಿಸಿವೆ.

English summary
It may be noted that many years ago it was reported that Rahul Gandhi had used the name Raul Vinci at the Trinity College under Cambridge to hide his identity following the assassination of his father Rajiv Gandhi. Later Vice Chancellor Cambridge Prof Alison Richard had also clarified that Rahul Gandhi did his MPhil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X