ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ; ತುಟ್ಟಿಭತ್ಯೆ ಏರಿಕೆ: ಎಷ್ಟು ಹೆಚ್ಚಳ? ಜಾರಿ ಯಾವಾಗ?
ನವದೆಹಲಿ, ಅಕ್ಟೋಬರ್ 02: ದೀಪಾವಳಿ ಹಬ್ಬಕ್ಕೂ ಮುನ್ನವೇ ಸರ್ಕಾರಿ ನೌಕರರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3 ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದು ದೀಪಾವಳಿ ಹಬ್ಬಕ್ಕೆ ಸಿಕ್ಕ ಬಹು ದೊಡ್ಡ ಕೊಡುಗೆಯಾಗಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3 ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ದೀಪಾವಳಿಗೂ ಮುನ್ನ ಬುಧವಾರ, ಅಕ್ಟೋಬರ್ 1 ರಂದು ಕೇಂದ್ರ ಸರ್ಕಾರಿ ನೌಕರರಿಗೆ ಡಿಎ (ಡಿಎ) ಶೇ. 3 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿತು.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಬೆಲೆ ಏರಿಕೆಯನ್ನು ಸರಿದೂಗಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಅನ್ನು 01.07.2025 ರಿಂದ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಇದು ಮೂಲ ವೇತನ/ಪಿಂಚಣಿಯ 55% ದರಕ್ಕಿಂತ 3% ಹೆಚ್ಚಳವಾಗಿದೆ ಎಂದು ಸಚಿವ ಸಂಪುಟ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಹೆಚ್ಚಳವು ಜುಲೈ 2025 ರಿಂದ ಜಾರಿಗೆ ಬರಲಿದ್ದು, ಡಿಎ ದರವು ಶೇಕಡಾ 55 ರಿಂದ 58 ಕ್ಕೆ ಏರಿಕೆಯಾಗಲಿದೆ. ಇದು 1.2 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನ ನೀಡಲಿದ್ದು, ಸರ್ಕಾರಕ್ಕೆ 10,084 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳಲಿದೆ. ಇನ್ನೂ 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡರ ಹೆಚ್ಚಳದಿಂದಾಗಿ ಬೊಕ್ಕಸದ ಮೇಲೆ ಒಟ್ಟು ವಾರ್ಷಿಕ ಪರಿಣಾಮ ಸುಮಾರು ₹ 10,084 ಕೋಟಿಗಳಾಗಲಿದೆ. ಪ್ರಸ್ತಾವಿತ ಹೆಚ್ಚಳವು ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ತಮ್ಮ ಮೂಲ ವೇತನದ ಶೇಡಾ 55 ರಷ್ಟು ಡಿಎ ಪಡೆಯುತ್ತಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಹೆಚ್ಚುವರಿ ಹಣವನ್ನು ನೀಡುತ್ತದೆ.
ಡಿಎ ಹೆಚ್ಚಳವನ್ನು ವರ್ಷಕ್ಕೆ ಎರಡು ಬಾರಿ ಘೋಷಿಸಲಾಗುತ್ತದೆ. ಜನವರಿ ತಿಂಗಳಿಗಾಗಿ ಫೆಬ್ರವರಿ - ಮಾರ್ಚ್‌ನಲ್ಲಿ ಮತ್ತು ಜುಲೈ ತಿಂಗಳಿಗಾಗಿ ಸೆಪ್ಟೆಂಬರ್ - ಅಕ್ಟೋಬರ್‌ನಲ್ಲಿ ಘೋಷಿಸಲಾಗುತ್ತದೆ. ಇದು ಹಿಂದಿನ ದಿನಾಂಕದಿಂದ ಜಾರಿಗೆ ಬರುತ್ತದೆ.
ಸರ್ಕಾರಿ ನೌಕರರ ವೇತನವು ಮೂಲ ವೇತನ, ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆಯನ್ನು ಒಳಗೊಂಡಿರುತ್ತದೆ. ನೌಕರರ ಮೂಲ ವೇತನವು ಅವರ ಒಟ್ಟು ಆದಾಯದ 51.5% ರಷ್ಟಿದೆ. DA ಸರಿಸುಮಾರು 30.9%, HRA ಸುಮಾರು 15.4% ಮತ್ತು ಪ್ರಯಾಣ ಭತ್ಯೆ ಸುಮಾರು 2.2% ರಷ್ಟಿದೆ .












Click it and Unblock the Notifications