ಭವಿಷ್ಯದ ಅತಿ ದೊಡ್ಡ ಗೆಲುವು ಸಾಧಿಸುತ್ತೇವೆ: ರಾಜನಾಥ್ ಸಿಂಗ್
ಭೋಪಾಲ್, ಮೇ 29: "ದೊಡ್ಡ ಗೆಲುವು ಸಾಧಿಸುವ ಮುನ್ನ ಒಂದೆರಡು ಹೆಜ್ಜೆ ಹಿಂದಕ್ಕೆ ಹೋಗಬೇಕಾಗುತ್ತದೆ" ಎಂದು ಉಪ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಮೇ 28 ರಂದು ನಡೆದ 4 ಲೋಕಸಭಾ ಕ್ಷೇತ್ರಗಳು ಮತ್ತು 9 ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಿದೆ. ಫಲಿತಾಂಶದಲ್ಲಿ ಮಹಾರಾಷ್ಟ್ರದ ಪಲ್ಘರ್ ಕ್ಷೇತ್ರವನ್ನು ಬಿಟ್ಟರೆ ಮತ್ತೆಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಸೋತಿದೆ.
ಆದರೆ ಈ ಸೋಲನ್ನು 2019 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಭಾವಿಸುವ ಅಗತ್ಯವಿಲ್ಲ ಎಂದಿರುವ ರಾಜನಾಥ್ ಸಿಂಗ್, 'ಭವಿಷ್ಯದಲ್ಲಿ ಅತಿ ದೊಡ್ಡ ಗೆಲುವು ಪಡೆಯುವುದಕ್ಕೆ ಈ ಸೋಲು ಮುನ್ನುಡಿ. ದೊಡ್ಡ ಗೆಲುವನ್ನು ಪಡೆಯುವ ಮೊದು ಒಂದೆರಡು ಹೆಜ್ಜೆ ಹಿಂದಕ್ಕೆ ಸರಿಯಬೇಕು' ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ಎಸ್ಪಿ ಮುಖಂಡ ಅಖಿಲೇಶ್ ಯಾದವ್, ಮತದಾರರು ಬಿಜೆಪಿಗೆ ಯೋಗ್ಯ ಪಾಠ ಕಲಿಸಿದ್ದಾರೆ ಎಂದಿದ್ದರು. ಬಿಜೆಪಿಯನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ವಿಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿದ್ದು ವಿಶೇಷ.












Click it and Unblock the Notifications