ಗ್ಯಾಂಗ್‌ಸ್ಟರ್‌ ಮನೆ ಮೇಲೆ ಯುಪಿ ಸರ್ಕಾರದಿಂದ ಬುಲ್ಡೋಜರ್‌ ದಾಳಿ

ಶುಕ್ರವಾರ ವಕೀಲ ಉಮೇಶ್ ಪಾಲ್ 2005ರ ರಾಜಕಾರಣಿಯ ಹತ್ಯೆಯ ಸಾಕ್ಷಿಯಾಗಿದ್ದರು. ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿ ಹತ್ಯೆಯಾಗಿದ್ದರು.

ಲಕ್ನೋ, ಮಾರ್ಚ್‌ 1: ಉತ್ತರಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಕೊಲೆಯೊಂದರ ಸಾಕ್ಷಿಯಾದ ವ್ಯಕ್ತಿಯ ಬರ್ಬರ ಹತ್ಯೆಯ ನಂತರ ಈ ಹತ್ಯೆಯ ಸಂಚು ರೂಪಿಸಿದ ಆರೋಪ ಹೊತ್ತಿರುವ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಅವರ ಹತ್ತಿರದ ಸಂಬಂಧಿಯ ಮನೆಯ ಮೇಲೆ ಬುಲ್ಡೋಜರ್‌ಗಳು ದಾಳಿ ಮಾಡಿವೆ.

ಶುಕ್ರವಾರ ವಕೀಲ ಉಮೇಶ್ ಪಾಲ್ 2005ರ ರಾಜಕಾರಣಿಯ ಹತ್ಯೆಯ ಸಾಕ್ಷಿಯಾಗಿದ್ದರು. ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿ ಹತ್ಯೆಯಾಗಿದ್ದರು. ಐವರು ನಡೆಸಿದ ಗುಂಡಿನ ದಾಳಿಯಲ್ಲಿ ಆತನ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದರು. ಇದನ್ನು ಗ್ಯಾಂಗ್‌ಸ್ಟಾರ್‌ ರಾಜಕಾರಣಿ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್ ಅವರು ಹತ್ಯೆಯನ್ನು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.

Bulldozer attack on Gangstars house by UP Government

ಅತಿಕ್ ಅಹ್ಮದ್ ಅವರ ಕಡು ಪ್ರತಿಸ್ಪರ್ಧಿಯಾಗಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕ ರಾಜು ಪಾಲ್ ಅವರ ಹತ್ಯೆಯನ್ನು ಉಮೇಶ್ ಪಾಲ್ ನೋಡಿದ್ದರು. ಅಹಮದಾಬಾದ್‌ನ ಜೈಲಿನಲ್ಲಿರುವ ಅತೀಕ್ ಅಹ್ಮದ್ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುವ ಮೊದಲು ಸಾಕ್ಷಿಯನ್ನು ಕೊಲ್ಲಲು ತನ್ನ ಹತ್ತಿರದ ಐದು ಅಥವಾ ಆರು ಸಹಚರರನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇಲ್ಲಿ ಅತಿಕ್ ಅಹ್ಮದ್, ಅವರ ಪುತ್ರ ಅಸದ್ ಅಹ್ಮದ್ ಮತ್ತು ಪತ್ನಿ ಮತ್ತು ಬಿಎಸ್ಪಿ ನಾಯಕಿ ಶೈಸ್ತಾ ಪರ್ವೀನ್ ಅವರನ್ನು ಹತ್ಯೆಯ ಎಫ್ಐಆರ್‌ಲ್ಲಿ ಹೆಸರಿಸಲಾಗಿದೆ. ಸೋಮವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಅಹ್ಮದ್‌ ಸಹಚರ ಒಬ್ಬ ಆರೋಪಿ ಹತನಾಗಿದ್ದನು. ಇಂದು ಮುಂಜಾನೆ ಪೊಲೀಸರು ಲಕ್ನೋದಲ್ಲಿರುವ ಅತೀಕ್ ಅಹ್ಮದ್ ಅವರ ಮನೆಯ ಮೇಲೆ ದಾಳಿ ನಡೆಸಿ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇತ್ತೀಚೆಗೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮ್ಮ ಸರ್ಕಾರವು ಮಾಫಿಯಾವನ್ನು ಹತ್ತಿಕ್ಕುತ್ತದೆ ಎಂದು ಆಕ್ರೋಶ ವ್ಯಕ್ಯಪಡಿಸಿದ್ದರು. ಎಫ್‌ಐಆರ್ ದಾಖಲಾಗಿರುವ ಆರೋಪಿಯನ್ನು ಸಮಾಜವಾದಿ ಪಕ್ಷದಿಂದ ಸಂಸದರನ್ನಾಗಿಸಿದ್ದು ಸತ್ಯಲ್ಲವೇ? ನೀವು ಎಲ್ಲಾ ಕ್ರಿಮಿನಲ್‌ಗಳನ್ನು ಬೆಳೆಸಿ ಪೋಷಿಸಿ, ಹಾರ ಹಾಕಿ ನಂತರ ಅಪರಾಧ ನಡೆದಾಗ ಇತರರನ್ನು ದೂಷಿಸುತ್ತೀರಿ. ಈ ಮೂಲಕ ನೀವು ಸುಮ್ಮನೆ ಈಗ ಮಾತನಾಡುತ್ತೀರಿ ಎಂದು ಮುಖ್ಯಮಂತ್ರಿ ಹೇಳಿದ್ದರು.

ಯೋಗಿ ಆದಿತ್ಯನಾಥ್ ಅವರ "ಬುಲ್ಡೋಜರ್ ನೀತಿ" ಉತ್ತರ ಪ್ರದೇಶದಲ್ಲಿ ಅಪರಾಧಿಗಳ ಮನೆಗಳನ್ನು ಧ್ವಂಸಗೊಳಿಸುವುದನ್ನು ಮುಂದುವರಿಸಿದೆ. ಆದರೆ ವಿಪಕ್ಷಗಳಿಂದ ಭಾರೀ ಟೀಕೆ ಎದುರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+