Union Budget 2021; ಸ್ವಚ್ಛ ಭಾರತ ಅಭಿಯಾನಕ್ಕೆ 1,41,000 ಕೋಟಿ ರೂ
ನವದೆಹಲಿ, ಫೆಬ್ರುವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಾರಿ ಸ್ವಚ್ಛ ಅಭಿಯಾನ 2.0 ಮಿಷನ್ ಗೆ ಕೇಂದ್ರ ಹಣಕಾಸು ಸಚಿವೆ 1,41,000 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ.
"ಅರ್ಬನ್ ಕ್ಲೀನ್ ಇಂಡಿಯಾ ಮಿಷನ್" ಗಾಗಿ 1,41,000 ಕೋಟಿ ರೂಪಾಯಿ ಪ್ಯಾಕೇಜ್ ನೀಡಿರುವುದಾಗಿ ತಿಳಿಸಿದ್ದಾರೆ. ಮುಂದಿನ ಐದು ವರ್ಷದ ಅವಧಿಗೆ 1.41 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಿದ್ದು, ಜಲಜೀವನ್ ಮಿಷನ್ ಅರ್ಬನ್ ಗೆ 2.87 ಲಕ್ಷ ಕೋಟಿ ಮೀಸಲಿರಿಸುವುದಾಗಿ ಘೋಷಿಸಿದ್ದಾರೆ.
2014ರಲ್ಲಿ ದೇಶಾದ್ಯಂತ ಈ ಸ್ವಚ್ಛತಾ ಅಭಿಯಾನ ಆರಂಭವಾಗಿತ್ತು. ಇಡೀ ದೇಶವನ್ನು ಸಂಪೂರ್ಣ ಸ್ವಚ್ಛ ಭಾರತವನ್ನಾಗಿ ಮಾಡಲು ಹಾಗೂ ಬಹಿರ್ದೆಸೆ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದೊಂದಿಗೆ ಈ ಅಭಿಯಾನ ಆರಂಭವಾಗಿತ್ತು.

2020ರ ಸಾಲಿನ ಬಜೆಟ್ ನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ 12.300 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿತ್ತು. 2019ರಲ್ಲಿ ಒಟ್ಟು 12,644 ಕೋಟಿ ರೂಪಾಯಿ ಹಣವನ್ನು ಘೋಷಿಲಾಗಿತ್ತು. 2018ನೇ ಸಾಲಿನ ಬಜೆಟ್ ನಲ್ಲಿ 15,373 ಕೋಟಿ ಹಣವನ್ನು ಮೀಸಲಿರಿಸಲಾಗಿತ್ತು. ಈ ಬಾರಿ 1,41,000 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.












Click it and Unblock the Notifications