14 ವರ್ಷಗಳ ಐಟಿ ಕೆಲಸ ಬಿಟ್ಟು ಅಣಬೆ ಕೃಷಿಗಿಳಿದ ಟೆಕ್ಕಿ: ಈಗ ತಿಂಗಳ ಆದಾಯ ಬರೋಬ್ಬರಿ 10 ಲಕ್ಷ ರೂ.

ಇತ್ತೀಚಿನ ದಿನಗಳಲ್ಲಿ ಕೈತುಂಬಾ ಸಂಬಳ ಬರುವ ಐಟಿ ಉದ್ಯೋಗ ಎಂದರೆ ಯುವಜನತೆಗೆ ಎಲ್ಲಿಲ್ಲದ ಕ್ರೇಜ್. ಆದರೆ, ಒಡಿಶಾದ ಬಿಟೆಕ್ ಪದವೀಧರರೊಬ್ಬರು ಬರೋಬ್ಬರಿ 14 ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ದುಡಿದು, ಆ ಐಷಾರಾಮಿ ಬದುಕಿಗೆ ಇದೀಗ ಗುಡ್ ಬೈ ಹೇಳಿದ್ದಾರೆ.

ತಮ್ಮ ಸ್ವಂತ ಊರಿಗೆ ಮರಳಿ ಅಣಬೆ ಕೃಷಿ ಆರಂಭಿಸಿರುವ ಇವರು, ಇಂದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳಿಗೂ ಅಧಿಕ ಆದಾಯ ಗಳಿಸುವ ಮೂಲಕ ಯಶಸ್ವಿ ರೈತರಾಗಿ ಹೊರಹೊಮ್ಮಿದ್ದಾರೆ. ಆ ಟೆಕ್ಕಿಯ ಹೆಸರು ವಿಕ್ರಮ್‌ದೇವ್ ಮಹಾಪಾತ್ರ.

BTech

ಸಾಫ್ಟ್‌ವೇರ್ ಕೆಲಸದಿಂದ ಅಣಬೆ ಕೃಷಿಯತ್ತ

ವಿಕ್ರಮ್‌ದೇವ್ ಅವರು 2012ರಲ್ಲಿ ಒಡಿಶಾದ ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಬಳಿಕ ಐಟಿ ಉದ್ಯಮ ಪ್ರವೇಶಿಸಿದ ಅವರು ಮೈಂಡ್‌ಟ್ರೀ, ಮತ್ತು ಎಲ್‌ಟಿಐ-ಮೈಂಡ್‌ಟ್ರೀನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಟೆಕ್ನಿಕಲ್ ಲೀಡ್ ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಆದರೆ, ಅವರ ಮನಸ್ಸು ಮಾತ್ರ ಕೃಷಿಯತ್ತ ತುಡಿಯುತ್ತಿತ್ತು. ಹೀಗಾಗಿ, ತಮ್ಮ ಐಟಿ ಅನುಭವ ಹಾಗೂ ಕಾರ್ಪೊರೇಟ್ ಕೆಲಸಗಳನ್ನ ಬದಿಗಿಟ್ಟು ಒಡಿಶಾದ ನಬರಂಗಪುರಕ್ಕೆ ಮರಳಿ, ಕೃಷಿಯತ್ತ ಮುಖ ಮಾಡಿದರು.

ಗಂಗಾ ಭೂಮಿ ಮಶ್ರೂಮ್ಸ್ - ಬೃಹತ್ ಪ್ರಮಾಣದ ಉತ್ಪಾದನೆ

ವಿಕ್ರಮ್‌ದೇವ್ ಅವರು ಆರಂಭಿಸಿದ ಘಟಕದ ಹೆಸರು ಗಂಗಾ ಭೂಮಿ ಮಶ್ರೂಮ್ಸ್. ಇದು ಕೇವಲ ಸಣ್ಣ ಪ್ರಮಾಣದ ಕೃಷಿಯಲ್ಲ, ಬದಲಾಗಿ ಕಾರ್ಪೊರೇಟ್ ಮಾದರಿಯ ಬೃಹತ್ ವಾಣಿಜ್ಯ ಉದ್ಯಮ. ಇಲ್ಲಿ ಪ್ರತಿದಿನ 500ರಿಂದ 600 ಕೆಜಿ ಅಣಬೆ ಉತ್ಪಾದನೆಯಾಗುತ್ತಿದೆ. ಅಂದರೆ ತಿಂಗಳಿಗೆ ಸುಮಾರು 15 ರಿಂದ 18 ಟನ್ ಅಣಬೆ ಬೆಳೆಯಲಾಗುತ್ತಿದೆ.

ಇಲ್ಲಿ ಬೆಳೆದ ತಾಜಾ ಅಣಬೆಗಳನ್ನ ಬ್ರಹ್ಮಪುರ ಮತ್ತು ಭುವನೇಶ್ವರದ ಮಾರುಕಟ್ಟೆಗಳಿಗೆ ಪೂರೈಸಲಾಗುತ್ತದೆ. ಕೃಷಿಯಲ್ಲಿ ಕಾರ್ಪೊರೇಟ್ ಮಾದರಿಯ ನಿರ್ವಹಣೆ ತಂದಿರುವುದರಿಂದ ವರ್ಷವಿಡೀ ಈ ಘಟಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ತಿಂಗಳಿಗೆ 10 ಲಕ್ಷ ರೂ ಲಾಭ

ಈ ಕೃಷಿ ಮಾಡಲು ಸುಮಾರು 2.56 ಕೋಟಿ ರೂ. ವೆಚ್ಚವಾಗಿದೆ. ಇದಕ್ಕೆ ಮುಖ್ಯಮಂತ್ರಿ ಕೃಷಿ ಉದ್ಯೋಗ ಯೋಜನೆಯಡಿ ಸರ್ಕಾರದಿಂದ 97 ಲಕ್ಷ ರೂ. ಸಬ್ಸಿಡಿಯೂ ದೊರೆತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಅಣಬೆಗೆ 100ರಿಂದ 110 ರೂ. ಬೆಲೆಯಿದ್ದು, ಇದರಿಂದ ತಿಂಗಳಿಗೆ 16 ರಿಂದ 19 ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿದೆ. ಕೆಲಸಗಾರರ ಸಂಬಳ, ನಿರ್ವಹಣಾ ವೆಚ್ಚ ಸೇರಿದಂತೆ ಎಲ್ಲಾ ಖರ್ಚುಗಳನ್ನ ಕಳೆದರೂ, ವಿಕ್ರಮ್‌ದೇವ್ ಅವರಿಗೆ ಪ್ರತಿ ತಿಂಗಳು 10 ಲಕ್ಷ ರೂಪಾಯಿಗಿಂತ ಹೆಚ್ಚು ನಿವ್ವಳ ಲಾಭ ಸಿಗುತ್ತಿದೆ.

ಸ್ಥಳೀಯರಿಗೆ ಉದ್ಯೋಗ ಸೃಷ್ಟಿ

ವಿಕ್ರಮ್‌ದೇವ್ ಅವರು ಕೇವಲ ತಮಗಾಗಿ ಮಾತ್ರ ದುಡಿಯುತ್ತಿಲ್ಲ, ಬದಲಿಗೆ ತಮ್ಮೂರಿನ ಜನರಿಗೂ ಆಸರೆಯಾಗಿದ್ದಾರೆ. ಈ ಅಣಬೆ ಘಟಕದಲ್ಲಿ ಪ್ರಸ್ತುತ 18 ಮಹಿಳೆಯರು ಮತ್ತು 6 ಪುರುಷರು ಸೇರಿದಂತೆ ಒಟ್ಟು 24 ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಕೃಷಿ ಎಂದರೆ ಕೇವಲ ಹೊಲದಲ್ಲಿ ದುಡಿಯುವುದಲ್ಲ; ಯೋಜನೆ, ನಿರ್ವಹಣೆ, ಮಾರುಕಟ್ಟೆ ತಂತ್ರ ಹಾಗೂ ಲಾಜಿಸ್ಟಿಕ್ಸ್ ಅನ್ನು ಸರಿಯಾಗಿ ಬಳಸಿಕೊಂಡರೆ ಕೃಷಿಯನ್ನು ಒಂದು ಬೃಹತ್ ಉದ್ಯಮವನ್ನಾಗಿ ಬೆಳೆಸಬಹುದು ಎಂಬುದನ್ನು ಇವರು ನಿರೂಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+