ದಯಾನಿಧಿಯ ಬಯಲಿಗೆಳೆದಿದ್ದಕ್ಕೆ ಪಿಂಚಣಿಗೆ ಸಂಚಕಾರ

ಆದರೆ ವಿಷಯ ಅದಲ್ಲ. ರಹಸ್ಯ ಮಾಹಿತಿದಾರರೊಬ್ಬರು 'ದಯಾನಿಧಿ ಮಾರನ್ ಭಾರಿ ಅಕ್ರಮವೆಸಗಿದ್ದಾರೆ' ಎಂದು ಸುಪ್ರೀಂಕೋರ್ಟ್ ಗೆ ವಿಷಯ ಮುಟ್ಟಿಸಿದ್ದರು. ಆತ ಬಿಎಸ್ಎನ್ಎಲ್ ಸಬ್ ಡಿವಿಶನಲ್ ಇಂಜಿನಿಯರ್.
ಮಾಹಿತಿ ನೀಡಿದ್ದು ಇದೇ ಇಂಜಿನಿಯರ್ ಎಂಬ ವಿಷಯ ಬಹಿರಂಗವಾಗಿ ಇದೀಗ ಇಂಜಿನಿಯರ್ ಪಿಂಚಣಿಗೆ ಸಂಚಕಾರ ಬಂದಿದೆ. 2013ರ ಜೂನ್ ನಲ್ಲಿ ನಿವೃತ್ತಿ ಹೊಂದಿದ ಸಿಕೆ ಮಟ್ಟವಣ್ಣನ್ ಎಂಬ ಈ ಮಾಹಿತಿದಾರನ ವಿರುದ್ಧ ಶಿಸ್ತುಕ್ರಮ ಅನ್ವಯಿಸಿ ಆತನ ಪಿಂಚಣಿಯನ್ನು ಮೊಟಕುಗೊಳಿಸಲಾಗಿದೆ. ಆದರೆ ಸರಕಾರಿ ಸಂಸ್ಥೆಯಲ್ಲಿ ನಡೆದಿದ್ದ 440 ಕೋಟಿ ರೂ. ಮೊತ್ತದ ಭ್ರಷ್ಟಾಚಾರವನ್ನು ಬಯಲಿಗೆಳೆದ ಸಂತೃಪ್ತಿ ತನ್ನದಾಗಿದೆ ಎಂದು ಸಂತಸಪಟ್ಟಿದ್ದಾರೆ.
ಅಂದಹಾಗೆ ದಯಾನಿಧಿ ಮಾರನ್ Boat Club ಮನೆಯಲ್ಲಿ ಸ್ಥಾಪಿತವಾಗಿದ್ದ ಹೈಸ್ಪೀಡ್ ಟೆಲಿಫೋನ್ ಲೈನ್ಸ್ ಆತನ ಅಣ್ಣ ಕಲಾನಿಧಿ ಮಾರನ್ ಒಡೆತನದ ಸನ್ ಟಿವಿ ಚಾನೆಲ್ ಸಮೂಹದ ಸೇವೆಗೆ ಮೀಸಲಾಗಿದ್ದವು.
ಮಾರನ್ ಕೇಂದ್ರ ದೂರಸಂಪರ್ಕ ಖಾತೆ ಸಚಿವರಾಗಿದ್ದ ವೇಳೆ ಚೆನ್ನೈನಲ್ಲಿನ ತಮ್ಮ ಮನೆಗೆ ಅಕ್ರಮವಾಗಿ 323 ಟೆಲಿಫೋನ್ ಲೈನ್‌ಗಳನ್ನು ಎಳೆದುಕೊಂಡಿದ್ದರು. ಅತ್ಯಂತ ತ್ವರಿತವಾಗಿ, ಭಾರೀ ಪ್ರಮಾಣದ ಟಿವಿ ದತ್ತಾಂಶಗಳನ್ನು ಸಾಗಿಸುವ ಸಾಮರ್ಥ್ಯವುಳ್ಳ ಐಎಸ್‌ಡಿಎನ್ ಲೈನ್ ಗಳು ದುಬಾರಿಯಾಗಿದ್ದರೂ, ಇದನ್ನು ಅಕ್ರಮವಾಗಿ ಮಾರನ್ ತಮ್ಮ ಮನೆಗೆ ಅಳವಡಿಸಿಕೊಂಡಿದ್ದರು. ಈ ಮೂಲಕ ತಮ್ಮ ಸೋದರನ ಸನ್ ಟೀವಿ ನೆಟ್‌ವರ್ಕ್‌ನ ಕಾರ್ಯಕ್ರಮಗಳು ಇಡೀ ಜಗತ್ತಿನಾದ್ಯಂತ ಅತ್ಯಂತ ತ್ವರಿತವಾಗಿ ಪ್ರಸಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.
2ಜಿ ಪ್ರಕರಣದ ವಿಚಾರಣೆ ನಡೆಸುವಾಗ ಮಾರನ್ ಮನೆಯಲ್ಲೇ ಇಂತಹದ್ದೊಂದು ಟೆಲಿಫೋನ್ ಎಕ್ಸ್‌ಚೇಂಜ್ ನಿರ್ಮಿಸಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿ, ಕಳೆದ ಜುಲೈನಲ್ಲಷ್ಟೇ ತನಿಖೆ ಮುಗಿಸಿತ್ತು. ಈ ವೇಳೆ ಮೇಲ್ನೋಟಕ್ಕೆ ಅಪರಾಧ ಎಸಗಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಇದೀಗ ಕೇಸು ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ದಯಾನಿಧಿ ಮಾರನ್ ಜೊತೆಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ಕೆ. ಬ್ರಹ್ಮನಾಥನ್ ಮತ್ತು ವೇಲುಸ್ವಾಮಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications