BSNL 5G ಇಂಟರ್‌ನೆಟ್ ಸೇವೆ ಆರಂಭದ ದಿನಾಂಕ, ಅಪ್ಡೇಟ್ ಮಾಹಿತಿ
ನವದೆಹಲಿ, ಅಕ್ಟೋಬರ್ 16: ವಿವಿಧ ಖಾಸಗಿ ಟೆಲಿಕಾಂ ಸಂಸ್ಥೆಗಳ ಮಧ್ಯೆ ಗ್ರಾಹಕಸ್ನೇಹಿ ಯೋಜನೆ, ರಿಚಾರ್ಜ್ ಪ್ಯಾಕೇಜ್ ಘೋಷಿಸುತ್ತಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL) ಮುನ್ನುಗ್ಗುತ್ತಿದೆ. ಜಿಯೋ, ಏರ್‌ಟೆಲ್, ವೋಡಾಫೋನ್ ಇಂಟರ್‌ನೆಟ್ ಸೇವೆ ಮಧ್ಯೆ ತೀವ್ರ ಪೈಪೋಟಿ ನೀಡಲು ಸರ್ಕಾರಿ ಸ್ವಾಮ್ಯದ BSNL ಸಜ್ಜಾಗಿದೆ. ಇದೀಗ ತನ್ನ ವೇಗದ 5G ಇಂಟರ್‌ನೆಟ್ ಸೇವೆ ಒದಗಿಸುವ ಯೋಜನೆಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕಂಪನಿ ಪೂರ್ಣಗೊಳಿಸಿದೆ.
ಬಿಎಸ್‌ಎನ್‌ಎಲ್ ಗ್ರಾಹಕರು ಪರಿಪೂರ್ಣ 4G ಸೇವೆಗಾಗಿ ಕಾಯುತ್ತಿರುವ ಮಧ್ಯೆ ಬಿಎಎಸ್‌ಎನ್‌ಎಲ್ ಕಂಪನಿಯು 5G ಸೇವೆಯ ಬಗ್ಗೆ ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ. BSNL ಬಳಕೆದಾರರು ಶೀಘ್ರವೇ 5G ಸೇವೆಯ ಉಡುಗೊರೆಯಾಗಿ ಪಡೆಯಲಿದ್ದಾರೆ ಎಂದು ಅವರು ಖುಷಿ ಸುದ್ದಿಯನ್ನು ನೀಡಿದ್ದಾರೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ 4Gಸೇವೆಯನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವ ಜೊತೆಗೆ 5G ಸೇವೆ ನೀಡಲು ಯೋಜಿಸಿದೆ. ಈ ಸೇವೆ ಆರಂಭಿಸುವ ದಿನಾಂಕವನ್ನು ಕೇಂದ್ರ ಸಚಿವರ ಬಹಿರಂಗಪಡಿಸಿದ್ದಾರೆ. ಸದ್ಯ BSNL 5G ಸೇವೆಯ ತಯಾರಿಯನ್ನು ಪೂರ್ಣಗೊಳಿಸಿದೆ. ದೇಶಾದ್ಯಂತ ನೆಟ್‌ವರ್ಕ್ ಅಪ್ಡೇಟ್ ಮಾಡಲು ದೇಶಾದ್ಯಂತ ಸಾವಿರಾರು ಮೊಬೈಲ್ ಟವರ್‌ಗಳನ್ನು ಸ್ಥಾಪನೆ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
5G ಸೇವೆ ಯಾವಾಗ ಪ್ರಾರಂಭ
ಬಿಎಸ್‌ಎನ್‌ಎಲ್ ಮುಂದಿನ ವರ್ಷ ಜೂನ್ 2025 ರ ಹೊತ್ತಿಗೆ ತನ್ನ 5G ನೆಟ್‌ವರ್ಕ್ ಸೇವೆಯನ್ನು ಗ್ರಾಹಕರಿಗೆ ನೀಡಲಿದೆ. ಸದ್ಯ ದೇಶದಲ್ಲಿ 4G ಸೇವೆ ನೀಡಲಾಗುತ್ತಿದೆ. ಬೇರೆ ಬೇರೆ ಕಂಪನಿಗಳಿಂದ 5G ಇಂಟರ್‌ನೆಟ್ ಸೇವೆ ಲಭ್ಯವಾಗುತ್ತಿದೆ. ಆದಷ್ಟು ಶೀಘ್ರವೇ BSNL 5G ಸೇವೆ ಲಭ್ಯವಾಗಲಿದೆ. ಇಂಟರ್‌ನೆಟ್ ವಿಚಾರದಲ್ಲಿ ಹಂತ ಹಂತವಾಗಿ ಕಂಪನಿಯು ಸಾಗುತ್ತಿದೆ. ಈ 5G ಜಗತ್ತನ್ನು ಸೆಳೆದರೆ, 6G ತಂತ್ರಜ್ಞಾನದಲ್ಲಿ ಜಗತ್ತನ್ನು ಮುನ್ನಡೆಸಲಿದೆ ಎಂದು ಅವರು ಬಣ್ಣಿಸಿದ್ದಾರೆ.
ಸರ್ಕಾರಿ ಕಂಪನಿಯು ಸೇವೆ ಒದಗಿಸಲು ಬೇರೆ ಕಂಪನಿಗಳ ಉಪಕರಣ ಬಳಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದ ಮಾತನ್ನು ಸಚಿವರು ಬೇರೆ ಕಂಪನಿಗಳ ಉಪಕರಣ ಬಳಸುವುದಿಲ್ಲ ಎಂಬುದನ್ನು ಪುನರುಚ್ಚಿಸಿದರು. ಬಿಎಸ್‌ಎನ್ಎಲ್ ಈಗ ಕೋರ್ ಮತ್ತು ರೇಡಿಯೊ ಜಾಲ ಹೊಂದಿದೆ ಎಂದು ತಿಳಿಸಿದರು.
22 ತಿಂಗಳಲ್ಲಿ 4.5 ಲಕ್ಷ ಟವರ್
ಬಿಎಸ್‌ಎನ್‌ಎಲ್ ಪರಿಣಾಮಕಾರಿಗೆ 4G ಇಂಟರ್‌ನೆಟ್ ಸೇವೆ ನೀಡಲಿದೆ. ಮುಂದಿನ 2025ರ ಜೂನ್ ಹೊತ್ತಿಗೆ 5G ಗೆ ಲಭ್ಯವಾಗಲಿದೆ. ಈ ಮೂಲಕ ಸರ್ಕಾರಿ ಕಂಪನಿಯೊಂದು ಅತ್ಯುತ್ತಮ ಇಂಟರ್‌ನೆಟ್ ಸೇವೆ ನೀಡಿದ ಸಾಲಿಗೆ ಭಾರತ ಸೇರಲಿದೆ. 22 ತಿಂಗಳಲ್ಲಿ 4.5 ಲಕ್ಷ ಟವರ್ ಸ್ಥಾಪಿಸಲಾಗುತ್ತಿದೆ. ಇವುಗಳ ಮೂಲಕವೇ ಭಾರತವು ಅತ್ಯಂತ ವೇಗದ 5G ತಂತ್ರಜ್ಞಾನ ಜಾರಿಗೆ ತರಲಿದೆ. ಈ ಸೇವೆ ಜಾರಿಗೆ ಬಂದಲ್ಲಿ ದೇಶದ 80 ರಷ್ಟು ಜನರು ಸೇವೆ ಪಡೆದುಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
BSNL 1 ಲಕ್ಷ ಟವರ್ ಸ್ಥಾಪಿಸುವ ಗುರಿ ಹೊಂದಿದ್ದು, ಅದರ ಮೂಲಕ 4G/5G ಸೇವೆ ನೀಡಲು ಸಜ್ಜಾಗಿದೆ. ಈ ಕಾರ್ಯ ಬರದಿಂದ ಸಾಗಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಸಾವಿರಾರು ಕೋಟಿ ಹಣ ಮೀಸಲಿಟ್ಟಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications