BSNL 5G: ಬಿಎಸ್‌ಎನ್‌ಎಲ್ 4G ಟವರ್ 5Gಗೆ ಅಪ್‌ಗ್ರೇಡ್ ಅಪ್ಡೇಟ್ಸ್: ಕೇಂದ್ರ ಸಚಿವ

ನವದೆಹಲಿ, ಅಕ್ಟೋಬರ್ 06: ದೇಶೀಯ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಭಾರತ ಸರ್ಕಾರದ ನಿರ್ದೇಶನದಂತೆ, ಭಾರತ್ ಸಂಚಾರ ನಿಗಮ್ ಲಿಮಿಟೆಡ್‌ (ಬಿಎಸ್‌ಎನ್‌ಎಲ್) ಮುಂದಿನ 6 ರಿಂದ 8 ತಿಂಗಳೊಳಗೆ ತನ್ನ ಎಲ್ಲಾ 4ಜಿ ಟವರ್‌ಗಳನ್ನು 5ಜಿಗೆ ಅಪ್‌ಗ್ರೇಡ್ ಮಾಡಲು ಯೋಜಿಸಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಭಾನುವಾರ ನಡೆದ ನಾಲ್ಕನೇ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿ-ಡಾಟ್‌, ತೇಜಸ್‌ ನೆಟ್ವರ್ಕ್ಸ್‌ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಹಕಾರದೊಂದಿಗೆ ಬಿಎಸ್‌ಎನ್‌ಎಲ್ ಸಂಪೂರ್ಣ ಸ್ವದೇಶೀಯ 4ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು. ಈ ಮೂಲಕ ಭಾರತವು ಸ್ವದೇಶಿ ಟೆಲಿಕಾಂ ಕ್ಷೇತ್ರದಲ್ಲಿ ಮುಂದಡಿ ಇಟ್ಟಿದ್ದು, ವಿಶ್ವದ ಕೆಲವು ದೇಶಗಳ ಪೈಕಿ ಭಾರತವು ಟೆಲಿಕಾಂ ವಲಯದಲ್ಲಿ ಮುಂದಿರುವ ದೇಶವಾಗಿದೆ ಎಂದರು.

BSNL to Upgrade All 4G Towers to 5G Within 8 Months Using Indigenous Technology

BSNL ಇಲ್ಲಿಯವರೆಗೆ ದೇಶದಾದ್ಯಂತ 92,000 ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಘಟ್ಟಕ್ಕೆ ಚಾಲನೆ ನೀಡಿದ್ದರು. ದೆಹಲಿಯಲ್ಲಿ 4ಜಿ ಇಂಟರ್‌ನೆಟ್ ಸೇವೆ ಆರಂಭವಾಗಿದೆ. ಶೀಘ್ರವೇ ಭಾರತವು ಈಗ ವಿಶ್ವದಲ್ಲೇ ವೇಗವಾಗಿ 5ಜಿ ನೆಟ್‌ವರ್ಕ್‌ ಅನ್ನು BSNL ಅಡಿಯಲ್ಲಿ ಅಳವಡಿಸಿರುವ ರಾಷ್ಟ್ರವಾಗಿ ಹೊರ ಹೊರಮ್ಮಲಿದೆ ಎಂದು ಅವರು ವಿವರಿಸಿದರು.

ಬಿಎಸ್‌ಎನ್‌ಎಲ್ ಈ ವರ್ಷ 5,396 ಕೋಟಿ ರೂಪಾಯಿ ಲಾಭ ಗಳಿಸಿದೆ. ಹಿಂದಿನ ಸಾಲಿನ 2,164 ರೂಪಾಯಿ ಕೋಟಿಗಿಂತ ಎರಡು ಪಟ್ಟು ಹೆಚ್ಚು. ಕಂಪನಿಯ ಗ್ರಾಹಕರ ಸಂಖ್ಯೆ 8.7 ಕೋಟಿಯಿಂದ 9.1 ಕೋಟಿಗೆ ಏರಿಕೆಯಾಗಿದೆ. ಇನ್ನೂ ಮುಂದಿನ ಹಂತದ ಭಾರತದ ಬೆಳವಣಿಗೆ "ಆತ್ಮನಿರ್ಭರ ನಾವೀನ್ಯತೆ' ಮೇಲೆ ಆಧಾರಿತವಾಗಿರುತ್ತದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

ಸ್ವಂತ ಸಾಫ್ಟವೇರ್ ಅಭಿವೃದ್ಧಿ

ಸಂವಹನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಪಾತ್ರವಹಿಸಲಿದೆ. ಅದು ಭಾರತೀಯ ಭಾಷೆ ಮತ್ತು ಅಗತ್ಯಗಳಿಗೆ ಹೊಂದಿಕೊಳ್ಳಬೇಕು. ಬಿಎಸ್‌ಎನ್‌ಎಲ್ 5ಜಿ ತಂತ್ರಜ್ಞಾನ ಸಂಬಂಧ ಕೇವಲ 22 ತಿಂಗಳುಗಳಲ್ಲಿ, ನಾವು ನಮ್ಮದೇ ಆದ ಪ್ರಮುಖ ಸಾಫ್ಟ್‌ವೇರ್, ರೇಡಿಯೋ ಆಕ್ಸೆಸ್ ನೆಟ್‌ವರ್ಕ್ (RAN) ಅನ್ನು ಅಭಿವೃದ್ಧಿಪಡಿಸಿದ್ದೇವೆ. TCS ನಲ್ಲಿ ಭಾರತೀಯ ಸಿಸ್ಟಮ್ ಇಂಟಿಗ್ರೇಟರ್ ಅನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಟೆಲ್ಕೊದ ಚಂದಾದಾರರ ಸಂಖ್ಯೆ 8.7 ಕೋಟಿಯಿಂದ 9.1 ಕೋಟಿಗೆ ಹೆಚ್ಚಾಗಿದೆ. ಈ ವರ್ಷಗಳಲ್ಲಿ ಮೊದಲ ಹೆಚ್ಚಳ ಇದಾಗಿದೆ. ಆದರೆ 4G ನೆಟ್‌ವರ್ಕ್ ಕಳೆದ ವರ್ಷ ಜೂನ್‌ನಲ್ಲಿ 9,000 ಸೈಟ್‌ಗಳಿಂದ 98,000 ಸೈಟ್‌ಗಳಿಗೆ ಏರಿಕೆ ಕಂಡಿದೆ. ಈಗ 22 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಸೇವೆ ನೀಡಲಾಗುತ್ತಿದೆ. ಶೀಘ್ರವೇ BSNL 5ಜಿ ವೇಗ ಸೇವೆ ರಾಷ್ಟ್ರದಲ್ಲಿ ಆರಂಭವಾಗಲಿದೆ ಎಂದು ಸಿಂಧಿಯಾ ಅಪ್ಡೇಟ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+