BSNL Best Plan: ₹7 ರೀಚಾರ್ಜ್, 13 ತಿಂಗಳ ವ್ಯಾಲಿಡಿಟಿ ಬೊಂಬಾಟ್ ಆಫರ್
ಮೊಬೈಲ್ ರಿಚಾರ್ಜ್ ದರ ಹೆಚ್ಚಿಸಿಕೊಂಡಿರುವ ಖಾಸಗಿ ಟೆಲಿಕಾಂ ಸಂಸ್ಥೆಗಳ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಖಾಸಗಿ ಕಂಪನಿಗಳಾದ ಜಿಯೋ, ಏರ್‌ಟೆಲ್, ವೋಡಾಫೋನ್ ಕಂಪನಿಗಳಿಗೆ ಟಕ್ಕರ್ ನೀಡುತ್ತಿದೆ. ಹೊಸ ಹೊಸ ಮೊಬೈಲ್ ರಿಚಾರ್ಜ್ ಪ್ಲಾನ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಸದ್ಯ ದೇಶಾದ್ಯಂತ 4ಜಿ ನೆಟ್‌ವರ್ಕ್ ಗಟ್ಟಿಗೊಳಿಸುವ ಜೊತೆಗೆ 5ಜಿ ಇಂಟರ್‌ನೆಟ್ ಸೇವೆಗೆ ಅಪ್ಡೇಟ್ ಆಗುತ್ತಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಟವರ್ ಸ್ಥಾಪಿಸುತ್ತಿದೆ. ಇದೀಗ ಬಿಎಸ್ಎನ್ಎಲ್ ₹7 ರೀಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಈಗಾಗಲೇ ಜಿಯೋ, ಏರ್‌ಟೆಲ್ ರಿಚಾರ್ಜ್ ದರ ಹೆಚ್ಚಿಸಿವೆ. ಹೀಗಾಗಿ ಅನೇಕ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ತಮ್ಮ ಸಿಮ್ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ.

ಅವರಿಗೆಲ್ಲ ಬಿಎಸ್‌ಎನ್‌ಎಲ್ ಒಂದು ವರ್ಷ ಅಂದರೆ 12 ತಿಂಗಳ ಬದಲಾಗಿ 13 ತಿಂಗಳ ರಿಚಾರ್ಜ್ ಆಫರ್ ಘೋಷಣೆ ಮಾಡಿದೆ. ಈ ಆಫರ್ ಪಡೆಯಲು ನೀವು ಮಾಡಬೇಕಿರುವುದು ತುಂಬಾ ಸರಳ ರಿಚಾರ್ಜ್ ಆಗಿದೆ. ಪ್ರತಿ ದಿನ ನೀವು ₹7 ಗಿಂತ ಕಡಿಮೆ ರಿಚಾರ್ಜ್ ಮಾಡಬೇಕು. ಅಂದರೆ ನಿತ್ಯ ಮಾಡುವುದಲ್ಲ. ಬದಲಾಗಿ ನೀವು ₹2,399 ರಿಚಾರ್ಜ್ ಮಾಡಿಸಿದರೆ, ಬರೋಬ್ಬರಿ 395 ದಿನಗಳ ವರೆಗೆ ನೀವು ಅತ್ಯುತ್ತಮ ಮತ್ತು ನಿರಂತರ ಸೇವೆಯ ಚೆಂದಾದಾರರಾಗುತ್ತೀರಿ ಎಂದು BSNL ತಿಳಿಸಿದೆ.
ಲೆಕ್ಕಚಾರದ ಪ್ರಕಾರ, ಪ್ರಿಪೇಯ್ಡ್ ₹2,399 ರಿಚಾರ್ಜ್ ಮಾಡಿದರೆ, ನೀವು ನಿತ್ಯ ಕೇವಲ 6.57 ರೂಪಾಯಿ ಹಣ ವ್ಯಯಿಸಿದಂತಾಗುತ್ತದೆ. ಇದರಿಂದ 13 ತಿಂಗಳ ಸೇವೆಯನ್ನು ಭಾರತಾದ್ಯಂತ ಯಾವುದೇ ನೆಟ್‌ವರ್ಕ್ ಅಡಿಯಲ್ಲಿ ಸೇವೆ ಪಡೆಯಬಹುದಾಗಿದೆ.
ಈ 395 ದಿನಗಳ ರಿಚಾರ್ಜ್ ಆಫರ್, ವಿಶೇಷತೆ
ಬಿಎಸ್‌ಎನ್‌ಎಲ್ ತನ್ನ ಈ ವಿನೂತನ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಿಂದ ಬಳಕೆದಾರರಿಗೆ ನಿತ್ಯ 2ಜಿಬಿ ಹೈಸ್ಪೀಡ್ ಇಂಟರ್‌ನೆಟ್ ಸೇವೆ ಒದಗಿಸುತ್ತದೆ. ಪ್ರತಿ ಸೆಕೆಂಡ್‌ಗೆ 40kbps ರೀತಿಯಲ್ಲಿ ಸೇವೆ ಪಡೆಯಬಹುದು. ಇತರ ವೈಶಿಷ್ಯಗಳು, ಸೌಲಭ್ಯಗಳು ಇದರಲ್ಲಿ ಸಿಗುತ್ತದೆ.
ಜಿಯೋ, ಏರ್‌ಟೆಲ್, ವಿಐ ಪ್ಲಾನ್ ಬೆಲೆ?
ಇನ್ನೂ ಖಾಸಗಿ ಟೆಲಿಕಾಂ ಕಂಪನಿಗಳ ಪೈಕಿ ವೇಗವಾಗಿ ವ್ಯಾಪಿಸಿರುವ ಬಲಿಷ್ಠ ಜಿಯೋ ಕಂಪನಿಯು ಒಂದು ವರ್ಷಕ್ಕೆ ಅಂದರೆ 365 ದಿನಗಳ ರಿಚಾರ್ಜ್ ಯೋಜನೆಗೆ ಬರೋಬ್ಬರಿ 2799 ರೂಪಾಯಿ ಪಡೆಯುತ್ತದೆ. ಪ್ರತಿ ದಿನ 2ಜಿಬಿ ಡೇಟಾ ಜೊತೆಗೆ ಇತರ ವೈಶಿಷ್ಯಗಳು ಸಿಗುತ್ತದೆ. ಇನ್ನೂ ಏರ್‌ಟೆಲ್ ದಿನಕ್ಕೆ 2ಜಿಬಿ ಇಂಟರ್‌ನೆಟ್ ಸಹಿತ ಒಂದು ವರ್ಷ ಯೋಜನೆಗೆ ಬರೋಬ್ಬರಿ 3599 ರೂಪಾಯಿ ಚಾರ್ಜ ಮಾಡುತ್ತದೆ. ಇನ್ನೂ ಒಂದು ವರ್ಷ ವೋಡಾಫೋನ್ 3799 ರೂಪಾಯಿ ಶುಲ್ಕ ವಿಧಿಸುತ್ತದೆ.
ಇದೆಲ್ಲವುಗಳ ಮಧ್ಯೆ ಬಿಎಸ್‌ಎನ್‌ಎಲ್ ಗ್ರಾಹಕ ಸ್ನೇಹಿ ರಿಚಾರ್ಜ್ ಪ್ಯಾಕೇಜ್ ನೀಡುತ್ತಿದೆ. 28 ದಿನ, 85 ದಿನ ಹೀಗೆ ಎಲ್ಲ ಬಗೆಯ ಬಿಎಸ್‌ಎನ್‌ಎಲ್ ರಿಚಾರ್ಜ್‌ಗಳು ಇತರ ಟೆಲಿಕಾಂ ಕಂಪನಿಗಳಿಗಿಂತಲೂ ಕಡಿಮೆಯಾಗಿದೆ.












Click it and Unblock the Notifications