BSNL Just ₹91 Plans: ಇಷ್ಟು ಕಡಿಮೆ ಬೆಲೆಗೆ 90 ದಿನಗಳ ಸೇವೆ ಎಲ್ಲೂ ಸಿಗಲ್ಲ, ಪ್ಲಾನ್ ಡಿಟೇಲ್ಸ್

ಬೆಂಗಳೂರು, ಅಕ್ಟೋಬರ್ 03: ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ಟಾಟಾ ಗ್ರೂಪ್ ಮಧ್ಯ ಒಪ್ಪಂದ ಆದಾಗಿನಿಂದ ಒಂದೊಂದಾಗಿ ಖುಷಿ ಸುದ್ದಿಗಳು ಗ್ರಾಹಕರಿಗಾಗಿ ಘೋಷಣೆ ಆಗುತ್ತಿವೆ. ಕೇಂದ್ರ ಸರ್ಕಾರಿ ವ್ಯಾಪ್ತಿಯ ಬಿಎಎಸ್‌ಎನ್‌ಎಲ್ ಕಡಿಮೆ ಬೆಲೆಯ ಹಾಗೂ ಜಿಯೋ, ಏರ್‌ಟೆಲ್ ಮತ್ತು ವಡಾಫೋನ್‌ಗಿಂತಲೂ ಉತ್ತಮ ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರಿಗೆ ನೀಡಿದೆ.

ಜಿಯೋ ಹಾಗೂ ಏರ್‌ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಸಂಸ್ಥೆಗಳ ರಿಚಾರ್ಜ್ ಪ್ಲಾನ್ ದುಬಾರಿ ಕಾಲದಲ್ಲಿ ಸರ್ಕಾರಿ ಸಂಸ್ಥೆಯ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಗೆ ಯೋಜನೆ ಕೊಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಹೊಸ ಯೋಜನೆ ಪರಿಚಯಿಸಿದೆ.

BSNL Introduced Just Rs 91 Recharge Plans to Customer Know Speciality Internet more details

BSNL ರೂಪಾಯಿ 91ಕ್ಕೆ ಹೆಚ್ಚು ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಇದು ಈವರೆಗಿನ ಟೆಲಿಕಾಂ ಸಂಸ್ಥೆಗಳು ನೀಡದ ಕೊಡುಗೆಯಾಗಿದೆ. ಕಡಿಮೆ ಹಣಕ್ಕೆ ಹೆಚ್ಚು ದಿನಗಳ ಪ್ರಯೋಜನ ಗ್ರಾಹಕರಿಗೆ ನೀಡುವ ಯೋಜನೆ ಇದಾಗಿದೆ. ಈ ರಿಚಾರ್ಜ್ ಪ್ಲಾನ್ ಬಗ್ಗೆ ಮಹತ್ವದ ಮಾಹಿತಿ, ಪ್ರಯೋಜಗಳು ಏನೇನು? ತಿಳಿಯಿರಿ.

BSNL ಹೊಸ ಪ್ಲಾನ್ ಬೆಲೆ ಕೇವಲ 91 ರೂ.

ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಪೋರ್ಟ್‌ಫೋಲಿಯೊಗೆ ಹೊಸ ಪ್ರಿಪೇಯ್ಡ್ ಯೋಜನೆ ಸೇರ್ಪಡೆ ಮಾಡಿಕೊಂಡಿದೆ. ಬರೀ ನೀವು ರೂ. 91 ನೀಡಿದರೆ 90 ದಿನಗಳ ಮಾನ್ಯತೆಯೊಂದಿಗೆ ಸೇವೆ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಇನ್ನಿತರ ಯಾವುದೇ ಟೆಲಿಕಾಂ ಸಂಸ್ಥೆಗಳು ಇಷ್ಟು ಕಡಿಮೆ ಬೆಲೆಗೆ ಗರಿಷ್ಠ ಸೇವೆಗಳನ್ನು ನೀಡಿಲ್ಲ.

BSNL 91 ರೂಪಾಯಿ ಪ್ಲಾನ್ ವಿಶೇಷತೆಗಳು

ನೀವು BSNL ಗ್ರಾಹಕರಾಗಿದ್ದರೇ ಕೂಡಲೇ 91 ರೂಪಾಯಿಯ ಈ ರಿಚಾರ್ಜ್ ಯೋಜನೆ ಹಾಕಿಸಿಕೊಳ್ಳಿ. ಇದರಿಂದ ನಿಮ್ಮ ಸಿಮ್ ಬರೋಬ್ಬರಿ ಎರಡು ತಿಂಗಳು (60 ದಿನ) ಸಕ್ರಿಯವಾಗಿರುತ್ತದೆ. ಯಾರ ತಮ್ ಸಿಮ್ ಸಕ್ರಿಯವಾಗಿ ಇರಿಸಿಕೊಳ್ಳಲು ಬಯಸುತ್ತಾರೋ ಅವರಿಗೆ ಈ ಯೋಜನೆ ಪ್ಲಾನ್ ಉತ್ತಮವಾಗಿದೆ.

BSNL Introduced Just Rs 91 Recharge Plans to Customer Know Speciality Internet more details

ಅಲ್ಲದೇ ನೀವು ಪ್ರತಿದಿನ 2GB ಇಂಟರ್‌ನೆಟ್ ಡೇಟಾ ಸಹ ಬಳಸಬಹುದಾಗಿದೆ. ಅದೇ ನೀವು ಬೇರೆ ಬೇರೆ ಕಂಪನಿಗಳ ಸಿಮ್ ಹೊಂದಿದ್ದರೆ, ಒಂದು ತಿಂಗಳ ಸಿಮ್ ಸಕ್ರಿಯತೆ ನೂರಾರು ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ. ಇಷ್ಟು ಕಡಿಮೆ ಬೆಲೆಗೆ ಎರಡು ತಿಂಗಳ ಸಿನ್ ಆಕ್ಟಿವ್ ಆಫರ್ ಸಿಗುವುದಿಲ್ಲ.

ಬಿಎಸ್‌ಎನ್‌ಎಲ್ ಈ ಯೋಜನೆಯಿಂದ ದೂರವಾಣಿ ಕರೆ, SMS ಸ್ವೀಕರಿಸಲು ಸಾಧ್ಯವಾಗುತ್ತದೆ. ಆದರೆ ಮರಳಿ ನಿಮ್ಮಿಂದ ಫೋನ್ ಕಾಲ್, ಸಂದೇಶ ಕಳುಹಿಸಲು ಸಾಧ್ಯವಿರುವುದಿಲ್ಲ. ಈ ಸೇವೆಗೆ ನೀವು ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಎಎಸ್‌ಎನ್‌ಎಲ್ ತಿಳಿಸಿದೆ.

ನೀವು ಎರಡು ಸಿಮ್ ಹೊಂದಿದ್ದು, ಅದರಲ್ಲಿ ಒಂದು ಸಿಮ್ ಅನ್ನು ಸಕ್ರಿಯವಾಗಿಡಲು ಈ ಬಿಎಸ್‌ಎನ್‌ಎಲ್ 91 ರೂ. ಪ್ಲಾನ್ ಬಹಳ ಉಪಯುಕ್ತವಾಗಿದೆ. ಇವು ಸೇರಿದಂತೆ ಈಗಾಗಲೇ ಕಡಿಮೆ ಬೆಲೆಗೆ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಅನ್ನು ಬಿಎಸ್‌ಎನ್‌ಎಲ್ ಪರಿಚಯಿಸಿದೆ. ಅವುಗಳ ಸಹ ಇತರ ಟೆಲಿಕಾಂ ಸಂಸ್ಥೆಗಳಿಗಿಂತಲೂ ಕಡಿಮೆ ಬೆಲೆ ಯೋಜನೆಗಳಾಗಿವೆ.

ಬಿಎಸ್‌ಎನ್‌ಎಲ್‌ ತನ್ನ ಪಾಲುದಾರರ ಜೊತೆಗೂಡಿ 4ಜಿ ಸಿಎಮ್ ಅನ್ನು ಬಿಡುಗಡೆ ಮಾಡಿದೆ. ಹಳ್ಳಿ ಹಳ್ಳಿಗಳಲ್ಲಿ ನೆಟ್‌ವರ್ಕ್ ಹೊಂದಿರುವ ಬಿಎಸ್‌ಎನ್‌ಎಲ್‌ ಮೊದಲು 4ಜಿಗೆ ಅಪ್ಡೇಟ್ ಆಗುವ ಜೊತೆಗೆ 5ಜಿಗೆ ಅಪ್ಡೇಟ್ ಆಗಲಿದೆ. ಈ ಮೂಲಕ ಪ್ರತಿ ಗ್ರಾಮೀಣ ಪ್ರದೇಶಗಳಿಗೂ ವೇಗದ ಇಂಟರ್‌ನೆಟ್‌ ಸೇವೆ ನೀಡಲು ಟಾಟಾ ಸಮೂಹ ಹಾಗೂ ಬಿಎಸ್ಎನ್‌ಎಲ್ ಪ್ಲಾನ್ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+